Advertisement
ಗರಿಷ್ಠ 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಉದ್ಯೋಗಿಗಳಲ್ಲಿ ಮಾಸಿಕ 15,000ಕ್ಕಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗೆ ಮಾರ್ಚ್‌ನಿಂದ ಆಗಸ್ಟ್ ವರೆಗೆ ಆರು ತಿಂಗಳವರೆಗೆ, ಮಾಸಿಕ ವೇತನದ ಶೇ. 24 ಹಣವನ್ನು ಉದ್ಯೋಗಿಗಳ ಇಪಿಎಫ್ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ. ಮಾಸಿಕ 15,000ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಯೋಜನೆ ಕುರಿತಾದ ಮಾಹಿತಿ ನೀಡಲು, ಸಂದೇಹಗಳನ್ನು ಪರಿಹರಿಸಲು ಹುಬ್ಬಳ್ಳಿಯಲ್ಲಿನ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಪ್ರಾದೇಶಿಕ ಕಚೇರಿ ಸಹಾಯವಾಣಿ ಆರಂಭಿಸಿದೆ. ಪಾದೇಶಿಕ ಕಚೇರಿ ವ್ಯಾಪ್ತಿಯ ಹುಬ್ಬಳ್ಳಿ ಕಚೇರಿಯಲ್ಲಿ ದೂ: 91836-2323860, ಬೆಳಗಾವಿ ಜಿಲ್ಲಾ ಕಚೇರಿ ದೂ: 91831-2466513 ಹಾಗೂ ಉತ್ತರ ಕನ್ನಡ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 91838-2227766 ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಪ್ರಾದೇಶಿಕ ಆಯುಕ್ತ ಮಿಹೀರ ಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸಹಾಯವಾಣಿ ಆರಂಭ
09:23 AM May 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.