Advertisement

ಪಿಎಂ ಆವಾಸ್‌ ಯೋಜನೆ ಆಮೆಗತಿ : ವರ್ಷದಲ್ಲಿ 21 ಮನೆ ಮಾತ್ರ ನಿರ್ಮಾಣ

09:56 AM Mar 10, 2020 | sudhir |

ಬೆಂಗಳೂರು: ರಾಜ್ಯದಲ್ಲಿ ವಸತಿ ರಹಿತರಿಗೆ ಸೂರು ಒದಗಣೆ ಆಮೆಗತಿಯಲ್ಲಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 2019-20ನೇ ಸಾಲಿನಲ್ಲಿ 41 ಸಾವಿರ ಫ‌ಲಾನುಭವಿಗಳು ಆಯ್ಕೆಯಾಗಿದ್ದರೂ ವರ್ಷದಲ್ಲಿ ಪೂರ್ಣ ನಿರ್ಮಾಣಗೊಂಡ ಮನೆಗಳ ಸಂಖ್ಯೆ ಕೇವಲ 21.

Advertisement

ರಾಜ್ಯ ಸರಕಾರದ ಈ ಕಾರ್ಯ ವೈಖರಿಗೆ ಕೇಂದ್ರ ಸರಕಾರ ಅಸಮಾಧಾನ ಗೊಂಡಿದ್ದು, ಮುಂದಿನ ವರ್ಷ ಅನು ದಾನ ನೀಡದಿರುವ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ 23.21 ಲಕ್ಷ ವಸತಿ ರಹಿತರಿದ್ದು , ಇದರಲ್ಲಿ 16.59 ಲಕ್ಷ ಮನೆ ರಹಿತರು ಮತ್ತು 6.61 ಲಕ್ಷ ನಿವೇಶನ ರಹಿತರು ಎಂದು ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ  ರಾಜ್ಯದಲ್ಲಿ 2016-17ರಿಂದ 2019-20ರ ವರೆಗೆ 1,86,879 ಫ‌ಲಾನು ಭವಿ ಗಳು ಆಯ್ಕೆಯಾಗಿದ್ದರು. ಆದರೆ 61,387 ಮನೆ ನಿರ್ಮಾಣ ಇನ್ನೂ ಆರಂಭವಾಗಿಲ್ಲ. 2019-20ನೇ ಸಾಲಿ ನಲ್ಲಿ 41,350 ಮಂದಿ ಆಯ್ಕೆ ಯಾಗಿದ್ದರೆ ನಿರ್ಮಾಣ ಪೂರ್ಣ ಗೊಂಡಿರುವ ಮನೆ  ಕೇವಲ 21. ಇನ್ನೂ 39,697 ಮನೆ ನಿರ್ಮಾಣ ಆರಂಭ ವಾಗಿಲ್ಲ. ಈ ಕುರಿತು 2020 ಫೆ. 21ರಂದು ನಡೆದ ಸಶಕ್ತೀಕರಣ ಸಮಿತಿ ಸಭೆಯಲ್ಲಿ ರಾಜ್ಯದ ಕಳಪೆ ಸಾಧನೆ ಬಗ್ಗೆ ಕೇಂದ್ರ ವಿಷಾದ ವ್ಯಕ್ತಪಡಿಸಿದೆ. ಬಾಕಿ ಮನೆಗಳನ್ನು 2020ರ ಜೂನ್‌ ಅಂತ್ಯದೊಳಗೆ ಪೂರ್ಣ ಗೊಳಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳಿಗೆ ತಾಕೀತು
ಫ‌ಲಾನುಭವಿಗಳ ಮಾಹಿತಿ ಸಂಗ್ರಹಿಸುವಲ್ಲಿ ಲೋಪ ಕಂಡುಬಂದಿದ್ದು, ಪೂರ್ಣ ಮಾಹಿತಿ ಸ್ಪಷ್ಟ ವಾಗಿ ನಮೂದಿಸಿ ತಾ.ಪಂ. ಅಂತರ್ಜಾಲದ ಲಾಗಿನ್‌ ಮೂಲಕ ಜಿ.ಪಂ.ಗೆ ಸಲ್ಲಿಸಲು ಸೂಚಿಸಲಾಗಿದೆ. ಒಬ್ಬ ಫ‌ಲಾನುಭವಿಗೆ ಒಮ್ಮೆ ಮಾತ್ರ ಪರಿಷ್ಕರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಪರಿಷ್ಕೃತ ಫ‌ಲಾನುಭವಿ ಪಟ್ಟಿಯನ್ನು ಮಾ.15ರೊಳಗೆ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲು ಸೂಚಿಸ ಲಾಗಿದೆ. ಮಾ.15ರೊಳಗೆ ಪರಿಷ್ಕರಣೆಗೊಂಡ ಅರ್ಜಿಗಳನ್ನು ಮಾತ್ರ ಕೇಂದ್ರದ ವೆಬ್‌ಸೈಟ್‌ನಲ್ಲಿ ಅಳವಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಫ‌ಲಾನುಭವಿಗಳ ಹೆಸರು ಕೈ ತಪ್ಪಿ ಸೌಕರ್ಯ ವಂಚಿತರಾದರೆ ತಾ.ಪಂ. ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳಪೆ ಸಾಧನೆಗೆ ಕಾರಣವೇನು?
ಫ‌ಲಾನುಭವಿಗಳು ಮನೆ ನಿರ್ಮಾಣ ಆರಂಭಿಸಿ 6 ತಿಂಗಳು ಕಳೆದರೂ ಸರಕಾರದಿಂದ ಕಂತು ರೂಪದ ಹಣ ಬಿಡುಗಡೆಯಾಗಿಲ್ಲ. ಬ್ಯಾಂಕ್‌ ಸಾಲ ಕೊಡಿಸುವ ಭರವಸೆ ನೀಡಿದ್ದರೂ ಸರಕಾರದಿಂದ ಹಣ ಬಿಡುಗಡೆ ಯಾಗುವ ವರೆಗೆ ಬಡ್ಡಿ ಬೀಳುತ್ತದೆ ಎನ್ನುವ ಕಾರಣಕ್ಕೆ ಫ‌ಲಾನುಭವಿಗಳು ಬ್ಯಾಂಕ್‌ ಸಾಲ ಪಡೆದು ಮನೆ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next