Advertisement

ಸಿದ್ದಗಂಗಾ ಮಠಕ್ಕೆ ಭೇಟಿ- ಪಾಕ್ ಕರಾಳ ಮುಖದ ವಿರುದ್ಧ ಹೋರಾಡಿ; ಕಾಂಗ್ರೆಸ್ ಗೆ ಮೋದಿ

09:48 AM Jan 03, 2020 | Nagendra Trasi |

ತುಮಕೂರು:ಸಿದ್ದಗಂಗಾ ಶ್ರೀಗಳು ಲಕ್ಷಾಂತರ ಭಕ್ತರು, ಜನರ ಮೇಲೆ ಪ್ರಭಾವ ಬೀರಿದ್ದು, ಅವರ ವಸ್ತುಸಂಗ್ರಹಾಲಯಕ್ಕೆ ಶಿಲಾನ್ಯಾಸ ಮಾಡುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಮಠಕ್ಕೆ ಭೇಟಿ ನೀಡಿದಾಗ ಶಿವಕುಮಾರ ಶ್ರೀಗಳ ದರ್ಶನದಿಂದ ಸಂತಸವಾಗುತ್ತಿತ್ತು. ಅವರ ಶೈಕ್ಷಣಿಕ, ಸಮಾಜಮುಖಿ ಸೇವೆಯಿಂದ ಸಮಾಜಕ್ಕೆ ದಾರಿದೀಪವಾಗಿದೆ. ಆದರೆ ಇದೀಗ ತುಂಬಾ ವರ್ಷಗಳ ನಂತರ ಬಂದ ನನಗೆ ಶೂನ್ಯ ಭಾವ ಆವರಿಸಿದಂತೆ ಆಗಿದೆ. ಸ್ವಾಮೀಜಿ ಇಂದು ನಮ್ಮೊಡನೆ ಇಲ್ಲ, ಆದರೆ ಅವರ ಸ್ಫೂರ್ತಿಯ ಕಾಯಕ ನಮಗೆ ಮಾರ್ಗದರ್ಶಿಯಾಗಿದೆ ಎಂದರು.

ಗುರುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರಂಭಿಕವಾಗಿ ಕನ್ನಡದಲ್ಲಿ ಭಾಷಣ ಆರಂಭಿಸಿದ್ದ ಪ್ರಧಾನಿ, ಶ್ರೀಗಳ ನಾಡಾದ ತುಮಕೂರಿಗೆ ಆಗಮಿಸಿರುವುದು ಸಂತಸ ತಂದಿದೆ. ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಶುಭ ಕೋರಿದರು.

ಪೇಜಾವರಶ್ರೀಗಳನ್ನು ನೆನಪಿಸಿಕೊಂಡ ಮೋದಿ:

ವೇದಿಕೆಯಲ್ಲಿ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಗಳ ಜತೆಗೆ ಇತ್ತೀಚೆಗಷ್ಟೇ ಹರಿಪಾದ ಸೇರಿದ್ದ ಉಡುಪಿ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಹಿರಿಯ ಯತಿ ಪೇಜಾವರಶ್ರೀಗಳನ್ನು ದೇಶ ಕಳೆದುಕೊಂಡಿದೆ. ನನಗೆ ಇದರಿಂದ ತೀವ್ರ ದುಃಖವಾಗಿದೆ. ಅವರೊಬ್ಬ ಮಹಾನ್ ಸಂತರಾಗಿದ್ದರು. ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತದೆ. ಆದರೆ ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇಂತಹ ಮಹಾನ್ ಪುರುಷರು ಹಾಕಿ ಕೊಟ್ಟ ದಿಕ್ಕಿನತ್ತ ನಾವು ದೇಶದ ಸೇವೆಯನ್ನು ಸಲ್ಲಿಸಬೇಕಾಗಿದೆ ಎಂದರು.

Advertisement

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ದಬ್ಬಾಳಿಕೆಗೆ ಗುರಿಯಾದವರ ರಕ್ಷಣೆಗೆ ನಾವು ಕಾನೂನು ಜಾರಿಗೆ ತಂದಿದ್ದೇವೆ. ಇಂತಹವರ ರಕ್ಷಣೆಗೆ ಮುಂದಾದರೆ ಹೋರಾಟ ಮಾಡುತ್ತಾರೆ…ಇದೆಂತಹ ನ್ಯಾಯ? ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತದ ಸಮುದಾಯದ ಮೇಲೆ ಹಿಂಸಾಚಾರ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷದವರು ಪಾಕಿಸ್ತಾನದ 70 ವರ್ಷಗಳ ಕರಾಳ ಮುಖದ ವಿರುದ್ಧ ಹೋರಾಡಲಿ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಧರ್ಮಾಧಾರಿತ ದೇಶವಾಗಿದೆ. ಅಲ್ಲಿ ಹಿಂದೂ, ಸಿಖ್, ಜೈನ, ಕ್ರಿಶ್ಚಿಯನ್ ಸಮುದಾಯದ ಮೇಲೆ ನಿರಂತರ ದಬ್ಬಾಳಿಕೆ ಶೋಷಣೆ ನಡೆಯುತ್ತಿದೆ. ಇದರ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸಲಿ. ವಿಶ್ವ ಸಮುದಾಯದ ಮುಮದೆ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಪ್ರಯತ್ನಿಸಿ. ಆದರೆ ನೆರೆ ದೇಶದಲ್ಲಿ ದಬ್ಬಾಳಿಕೆಗೆ ಒಳಗಾದ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕೊಟ್ಟರೆ ಅದನ್ನು ಯಾಕೆ ವಿರೋಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ಎಲ್ಲಾ ಬೆಳವಣಿಗೆಯನ್ನು ಜನರು ಅವಲೋಕಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next