ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ, ತೀವ್ರವಾಗಿ ವರ್ಷಾಬಾಧಿತವಾಗಿರುವ ತಮಿಳು ನಾಡಿಗೆಎಲ್ಲ ನೆರವು ಕೊಡುವ ಆಶ್ವಾಸನೆ ನೀಡಿದರು. ಮಳೆ ಸಂಬಂಧಿ ದುರಂತಗಳಲ್ಲಿ ಮೃತಪಟ್ಟವರನ್ನು ಸ್ಪರಿಸಿಕೊಂಡ ಪ್ರಧಾನಿ, ಶೋಕ ವ್ಯಕ್ತಪಡಿಸಿದರು.
ಜಡಿ ಮಳೆಯಿಂದಾಗಿ ರಾಜಧಾನಿ ಚೆನ್ನೈ ಮತ್ತು ಕಾಂಚೀಪುರ ಹಾಗೂ ತಿರುವಳ್ಳೂರ್ ಸೇರಿದಂತೆ ಹಲವಾರು ಜಿಲ್ಲೆಗಳು ತೀವ್ರ ಕಷ್ಟ ನಷ್ಟ, ನಾಶಗಳಿಗೆ ಗುರಿಯಾಗಿವೆ.
ಪ್ರಸಿದ್ಧ ತಮಿಳು ದೈನಿಕ ದಿನ ತಂತಿ ಇದರ 75ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಮೋದಿ, ಮಾಧ್ಯಮಗಳು ಆರೋಗ್ಯಕಾರಿ ಸ್ಪರ್ಧೆಗಳನ್ನು ಹೊಂದಬೇಕು ಮತ್ತು ತನ್ನ ಸತ್ಯಸಂಧನೆಯನ್ನು ಉಳಿಸಿಕೊಳ್ಳಲು ಸರ್ವ ಯತ್ನ ಮಾಡಬೇಕು ಎಂದು ಕರೆ ನೀಡಿದರು.
ಸಂಪಾದಕೀಯ ಸ್ವಾತಂತ್ರ್ಯವನ್ನು ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಶಿಸ್ತುಬದ್ಧವಾಗಿ ನಿಭಾಯಿಸಬೇಕು ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಚೆನ್ನೈ ಏರ್ ಪೋರ್ಟ್‌ನಲ್ಲಿ ಸ್ವಾಗತಿಸಿದರು. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಐಎಎನ್ ಅಡ್ಯಾರ್ ಗೆ ಪ್ರಯಾಣಿಸಿದರು.
ಪ್ರಧಾನಿಯವರ ಭೇಟಿಯ ಪ್ರಯುಕ್ತ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.