ಜೈಪುರ್:ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ಜತೆ ದೀಪಾವಳಿ ಆಚರಿಸುವ ನಿಟ್ಟಿನಲ್ಲಿ ರಾಜಸ್ಥಾನದ ಲೋಂಗೇವಾಲಾ ಗಡಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.
2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಏರಿದ್ದ ವರ್ಷದಿಂದ ಆರಂಭಿಸಿ ಈವರೆಗೂ ಗಡಿಭಾಗದಲ್ಲಿರುವ ಸೈನಿಕರ ಜತೆ ದೀಪಾವಳಿ ಹಬ್ಬ ಆಚರಿಸುತ್ತಾ ಬಂದಿದ್ದಾರೆ.
ಲೋಂಗೇವಾಲಾ ಪೋಸ್ಟ್ ನಲ್ಲಿರುವ ಸೈನಿಕರ ಜತೆ ಪ್ರಧಾನಿ ಮೋದಿ ಅವರು ದೀಪಾವಳಿ ಆಚರಿಸಲಿದ್ದು, ಈ ಸಂದರ್ಭದಲ್ಲಿ ಗಡಿಭದ್ರತಾ ಪಡೆಯ (ಬಿಎಸ್ ಎಫ್) ರಾಕೇಶ್ ಅಸ್ಥಾನಾ, ಸೇನಾ ಮುಖ್ಯಸ್ಥ ಎಂಎಂ ನರಾವಣೆ ಮತ್ತು ಸೇನೆಗಳ ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಕೂಡಾ ಸಾಥ್ ನೀಡಿದ್ದಾರೆ.
ದೀಪಾವಳಿ ಎಲ್ಲರ ಬದುಕಿನಲ್ಲಿ ಬೆಳಕು ಮತ್ತು ಸಂತೋಷವನ್ನು ತರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದರು.
ಇದನ್ನೂ ಓದಿ:ಪಾಕ್ ಸೇನಾ ಬಂಕರ್ ಧ್ವಂಸ ಮಾಡಿದ ಸೇನೆ: ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಪಾಕ್