Advertisement

ಪಡುಪಣಂಬೂರು: ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ

12:06 PM Sep 16, 2022 | Team Udayavani |

ಹಳೆಯಂಗಡಿ: ಜಿಲ್ಲೆಯಲ್ಲಿ ಅರಸು ಮನೆತನದ ಬಸದಿಗಳು, ಗದ್ದೆಗಳು, ಪಾರಂಪರಿಕ ಪ್ರದೇಶಗಳನ್ನೊಳಗೊಂಡ ಪಡು ಪಣಂಬೂರು ಗ್ರಾಮ ಪಂಚಾಯತ್‌ನ ಪಡುಪಣಂಬೂರು ಗ್ರಾಮವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಇದ್ದರೂ ಅಭಿವೃದ್ಧಿಯ ವೇಗ ಮಾತ್ರ ನಿಧಾನವಾಗಿದೆ. ಪ್ರವಾಸೋದ್ಯಮ ನಿಟ್ಟಿನಲ್ಲಿ ವಿಪುಲ ಅವಕಾಶಗಳಿದ್ದು, ಸರಕಾರದ ನೆರವಿನತ್ತ ದೃಷ್ಟಿ ನೆಟ್ಟಿದೆ.

Advertisement

ಪಡುವಣ ದಿಕ್ಕಿನಲ್ಲಿರುವ ಊರು ಎಂಬ ಪ್ರತೀತಿ ಇರುವ ಪಡುಪಣಂಬೂರು ಗ್ರಾಮದ ಜನಸಂಖ್ಯೆ 1,326 ಆಗಿದ್ದು, 374 ಕುಟುಂಬಗಳಿವೆ. ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು, ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಅರಸರ ಮನೆ, ಕಂಬಳ, ಬಸದಿ, ಕುದ್ರು

ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸ್ಥಾನಮಾನದ ಅರಸರ ಮನೆತನ, ಅರಮನೆ ಗ್ರಾಮದಲ್ಲಿದೆ. ಅರಸರ ಆಳ್ವಿಕೆಯ ಬಸದಿಗಳ ಸಹಿತ ಕಾರಣಿಕ ಪುರುಷ ಎನಿಸಿರುವ ಅಗೋಳಿ ಮಂಜಣ್ಣನು ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದ ಅರಸು ಕಂಬಳವು ವಿಶೇಷ ಮಹತ್ವ ಪಡೆದಿದೆ.

ಇಂದಿಗೂ ಪರಂಪರೆಯಂತೆ ಸಂಪ್ರದಾಯ ಪ್ರಕಾರ ಸೀಮೆಯ ಕಂಬಳ ನಡೆಯುತ್ತಿದೆ. ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಸಸಿಹಿತ್ಲು ವಿನ ಶ್ರೀ ಭಗವತೀ ದೇವಸ್ಥಾನ ಹಾಗೂ ಮುಂಡ ಬೀಚ್‌ಗೆ ನೇರವಾಗಿ ಸಂಪರ್ಕಿಸುವ ರಸ್ತೆಯೂ ಹಾದು ಹೋಗಿದೆ. ಹೆದ್ದಾರಿಗೆ ಅತೀ ಹತ್ತಿರ ದಲ್ಲಿಯೇ ಅರಮನೆ, ಬಸದಿಗಳು ಇದೆಯಾದರೂ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿ ಗರು ಇದರ ಪರಿವೆಯೇ ಇಲ್ಲದೆ ಮುಂದುವರಿಯುತ್ತಾರೆ.

Advertisement

ಸಮರ್ಪಕ ಮಾಹಿತಿ ಫ‌ಲಕ ಹಾಕಿ ಪೂರಕ ವ್ಯವಸ್ಥೆ ಮಾಡಿದರೆ ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೊಗೆಗುಡ್ಡೆಯ ನಂದಿನಿ ನದಿಯ ಹತ್ತಿರದಲ್ಲಿ ಕುದ್ರು ಇದ್ದು, ಇದೂ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.

ಸಮಸ್ಯೆಗಳ ಸಾಲಿನಲ್ಲಿ

ಸಣ್ಣ ಗ್ರಾಮವಾಗಿದ್ದು, ಕೃಷಿ ಚಟುವಟಿಕೆಯೇ ಇಲ್ಲಿನ ಜೀವಾಳವಾಗಿದೆ. ಹೆದ್ದಾರಿ ಬಳಿಯಿಂದ ಸಾಗುವ ರಾಜ ಕಾಲುವೆಯಲ್ಲಿ ಆಗಾಗ ಹೂಳು ತುಂಬಿರುವುದನ್ನು ಪರಿಣಾಮಕಾರಿಯಾಗಿ ತೆರವು ಮಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್‌ ಪಂಪ್‌ನ ಬಳಿಯಿಂದ ಪಂಚಾಯತ್‌ ನವರೆಗೆ ಸರ್ವೀಸ್‌ ರಸ್ತೆಯ ಅಗತ್ಯತೆ ಇದೆ. ಪಡುಪಣಂಬೂರು ಪ್ರಾಥಮಿಕ ಶಾಲೆಯ ಕಟ್ಟಡವೂ ಶೀಘ್ರವಾಗಿ ನಿರ್ಮಾಣವಾಗಬೇಕಾಗಿದೆ. ತೀರಾ ದುರವಸ್ಥೆಯಲ್ಲಿರುವ ಬಸದಿಯೊಂದು ಕದಿಕೆ ಬಳಿಯಲ್ಲಿದ್ದು ಇದನ್ನು ದುರಸ್ಥಿಗೊಳಿಸಲು ಸರಕಾರದ ಗಮನ ಸೆಳೆಯಬೇಕಾಗಿದೆ. ಮಳೆ ಬಂದಾಗ ಒಳ ರಸ್ತೆಯಲ್ಲಿಯೇ ನೀರು ಹರಿಯುವುದರಿಂದ ಚರಂಡಿ ನಿರ್ಮಾಣದ ಅಗತ್ಯವಿದೆ. ಕಜಕ್‌ ರಸ್ತೆಯು ಕಲ್ಲು ಮಣ್ಣು ತುಂಬಿದ ರಸ್ತೆಯಾಗಿದೆ. ಬಾಂದ ಕೆರೆಯ ಅಭಿವೃದ್ಧಿ ಆಮೆಗತಿಯಲ್ಲಿ ಸಾಗಿದೆ. ಹೇರಳ ನೀರಿರುವ ಶಾಲಾ ಕೆರೆಯನ್ನು ಅಭಿವೃದ್ಧಿಗೆ ಮನಸ್ಸು ಮಾಡಬೇಕಾಗಿದೆ. ಒಳ ರಸ್ತೆಗಳಲ್ಲಿನ ಹೊಂಡ ಗುಂಡಿಗಳನ್ನು ದುರಸ್ತಿ ಕಾರ್ಯ ಮಾಡಬೇಕಾಗಿದೆ.

ರಸೆ ವಿಸ್ತರಣೆಯ ಗೋಳು

ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಸಸಿಹಿತ್ಲುವಿನತ್ತ ಸಂಚರಿಸುವ ಅರಮನೆಯ ರಸ್ತೆಯನ್ನು ಮೂಡಾದಿಂದ ಅಳತೆ ಮೀರಿ ವಿಸ್ತರಿಸುವ ಸೂಚನೆಗೆ ಸ್ಥಳೀಯರು ತೀವ್ರ ಹೋರಾಟ ನಡೆಸುತ್ತಿದ್ದು ಇದಕ್ಕೆ ಗ್ರಾಮ ಪಂಚಾಯತ್‌ ಸಹ ಆಕ್ಷೇಪ ವ್ಯಕ್ತಪಡಿಸಿದೆ. ಬಗ್ಗೆ ಗೊಂದಲ ಇದೆ.

ಸಾಂಕ ಪ್ರಯತ್ನ ನಡೆಯಲಿ: ಪಡುಪಣಂಬೂರು ಗ್ರಾಮವು ಅನೇಕ ಪರಂಪರೆಯನ್ನು ಇಟ್ಟುಕೊಂಡಿರುವ ಗ್ರಾಮವಾಗಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕಿರುವ ಅವಕಾಶವನ್ನು ಬಳಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಇದೆ, ಬಗ್ಗೆ ಚಿಂತನೆ ಮಾಡಿಕೊಂಡು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಾಂಕ ಪ್ರಯತ್ನ ನಡೆಯಬೇಕಿದೆ. – ಕೃಷ್ಣಮೂರ್ತಿ ಹೆಬ್ಟಾರ್‌, ಗ್ರಾಮಸ್ಥರು

ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಯತ್ನ: ಗ್ರಾಮ ಪಂಚಾಯತ್‌ನ ಪ್ರತಿಯೊಂದು ಯೋಜನೆಯ ಅನುದಾನವನ್ನು ಪಾರದರ್ಶಕತೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಶಕ್ತಿಮೀರಿ ಸದಸ್ಯರು ಶ್ರಮಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಇರುವ ಅವಕಾಶದ ಬಗ್ಗೆ ಎಲ್ಲ ರೀತಿಯಲ್ಲಿಯೂ ಪ್ರಯತ್ನ ಸಾಗಿದೆ. ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಪಂಚಾಯತ್‌ ಸಹಕರಿಸುತ್ತಿದೆ. ವಿಶೇಷ ಅನುದಾನ ಸಿಕ್ಕಿದರೆ ಉತ್ತಮ. – ಮಂಜುಳಾ, ಅಧ್ಯಕ್ಷರು, ಪಡುಪಣಂಬೂರು ಗ್ರಾ. ಪಂ.

-ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next