Advertisement

ಥಿಯೇಟರ್‌ ಓಪನ್‌ ಮಾಡಿ ಸ್ವಾಮಿ…

03:26 PM Sep 30, 2020 | Suhan S |

ಕೋವಿಡ್ ಲಾಕ್‌ಡೌನ್‌ ನಿಯಮಾವಳಿಗಳನ್ನು ಸರ್ಕಾರ ನಿಧಾನವಾಗಿ ಸಡಿಲಿಸುತ್ತಿದ್ದು, ಈಗಾಗಲೇ ಹೋಟೆಲ್‌, ಮಾರುಕಟ್ಟೆ, ಮೆಟ್ರೋ ರೈಲು, ಮಾಲ್‌ಗ‌ಳು ಸೇರಿದಂತೆ ಬಹುತೇಕ ಸಾರ್ವಜನಿಕ ಓಡಾಟದ ಸ್ಥಳಗಳಿಗಿದ್ದ ಪ್ರವೇಶ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೆ ಕಳೆದ ಆರೂವರೆ ತಿಂಗಳಿನಿಂದ ಸಂಪೂರ್ಣ ಬಂದ್‌ ಆಗಿರುವ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳ ಪ್ರವೇಶಕ್ಕೂ ಸರ್ಕಾರ ಷರತ್ತುಬದ್ದ ಅನುಮತಿ ನೀಡಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರೋದ್ಯಮ.ಕಳೆದ ಎರಡು ತಿಂಗಳಿನಿಂದ ಥಿಯೇಟರ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಭಾರತದ ವಿವಿಧ ಚಿತ್ರರಂಗಗಳು ಅಲ್ಲಿನ ರಾಜ್ಯ ಸರ್ಕಾರ ಮತ್ತುಕೇಂದ್ರ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಮಾಡಿವೆ.

Advertisement

ಇನ್ನು ಆಯಾಯ ರಾಜ್ಯ ಸರ್ಕಾರಗಳು,ಕೇಂದ್ರ ಸರ್ಕಾರಕೂಡ ಚಿತ್ರೋದ್ಯಮದ ಪ್ರಮುಖರೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ, ಥಿಯೇಟರ್‌ಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇದರ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರ, ಅಕ್ಟೋಬರ್‌ ಮೊದಲ ವಾರದಿಂದ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿನೀಡಲೇಬೇಕು ಎಂದುಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಷ್ಟೇ ಅಲ್ಲದೆ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದೀದಿ ಸರ್ಕಾರ, ಕೇಂದ್ರ ತನ್ನಕೋರಿಕೆಯಂತೆ ಅನುಮತಿ ನೀಡದಿದ್ದರೆ, ತಾನೇ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡುವುದಾಗಿಯೂ ಘೋಷಿಸಿದೆ.

ಪಶ್ಚಿಮ ಬಂಗಾಳದ ಈ ನಿರ್ಧಾರಕಾನೂನಾತ್ಮಕವಾಗಿ ಎಷ್ಟರ ಮಟ್ಟಿಗೆ ಜಾರಿ ಮಾಡಲು ಸಾಧ್ಯ ಎಂಬ ಚರ್ಚೆ ಒಂದೆಡೆಯಾಗುತ್ತಿದ್ದರೆ, ಮತ್ತೂಂದೆಡೆ ಚಿತ್ರೋದ್ಯಮದಿಂದಲೂ ಆದಷ್ಟು ಬೇಗ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಬೇಕೆಂಬ ಒತ್ತಾಯ ಜೋರಾಗುತ್ತಿದೆ. ಇನ್ನುಕನ್ನಡ ಚಿತ್ರೋದ್ಯಮಕೂಡ ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಬಹುದು ಎಂಬ ನಿರೀಕ್ಷೆಯಲ್ಲಿದೆ.

ಈಗಾಗಲೇ ಸಿನಿಮಾಗಳ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌, ಸೆನ್ಸಾರ್‌ ಹೀಗೆ ಬಹುತೇಕ ಚಟುವಟಿಕೆಗಳಿಗೆ ಷರತ್ತು ಬದ್ದ ಅನುಮತಿ ನೀಡಲಾಗಿದೆ. ಚಿತ್ರತಂಡಗಳುಕೂಡ ಸರ್ಕಾರದ ನಿಯಮಾನುಸಾರ ಅಗತ್ಯಕ್ರಮಗಳನ್ನು ಕೈಗೊಂಡು ತಮ್ಮ ಸಿನಿಮಾದಕೆಲಸಗಳನ್ನು ನಡೆಸುತ್ತಿವೆ. ಹೀಗಿರುವಾಗ, ಸರ್ಕಾರ ಥಿಯೇಟರ್‌ಗಳಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವುದಕ್ಕೆಕಾರಣ ವೇನು ಎಂಬುದು ಚಿತ್ರೋದ್ಯಮದ ಅನೇಕರ ಪ್ರಶ್ನೆ.

ಈಗಾಗಲೇ ರಾಜ್ಯ ಸರ್ಕಾರ ಮತ್ತುಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಚಿತ್ರರಂಗದ ಪ್ರಮುಖರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದೆ. ಚಿತ್ರೋದ್ಯಮದ ಮುಂದಿರುವ ಸಮಸ್ಯೆ-ಸವಾಲುಗಳು, ಸರ್ಕಾರದ ನಿರ್ಧಾರದಿಂದಾಗ ಬಹುದಾದ ಸಾಧಕ -ಭಾದಕಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಅಲ್ಲದೆ ಚಿತ್ರರಂಗಕೂಡ ಈಗಾಗಲೇ ಸರ್ಕಾರದ ಮಾರ್ಗಸೂಚಿ ನಿಯಮಾವಳಿಗಳನ್ನು ಪಾಲಿಸಿಕೊಂಡು ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ.

Advertisement

ಮುಂದೆ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಿದರೆ, ಸರ್ಕಾರದ ನಿಯಮಾನುಸಾರ ಚಿತ್ರ ಪ್ರದರ್ಶನಕ್ಕೆ ಸಿದ್ದವೆಂದು ಚಿತ್ರೋದ್ಯಮಕೂಡ ಸ್ಪಷ್ಟಪಡಿಸಿದೆ. ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲೂ ಸಿನಿಮಾಗಳ ಪ್ರದರ್ಶನವಾದರೆ ಮಾತ್ರ ಚಿತ್ರರಂಗದ ಆರ್ಥಿಕ ಚಟುವಟಿಕೆಗಳಿಗೆ ಬಲ ಬರಲು ಸಾಧ್ಯ. ಆದರೆ ತಿಂಗಳು ಕಳೆದರೂ, ಈ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬೀಳದಿರುವುದು ಸಹಜವಾಗಿಯೇ ಚಿತ್ರೋದ್ಯಮದ ಮಂದಿಯ ಬೇಸರಕ್ಕೆಕಾರಣವಾಗಿದೆ.

ಸರ್ಕಾರ ಈಗಾಗಲೇ ಚಿತ್ರರಂಗದ ಒಂದಷ್ಟುಚಟುವಟಿಕೆಗಳಿಗೆ ಷರತ್ತುಬದ್ದ ಅನುಮತಿ ನೀಡಿದೆ. ಅದರಂತೆ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲೂ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಲಿಎನ್ನುವುದು ನಮ್ಮಕೋರಿಕೆ.ಈ ಬಗ್ಗೆಕೇಂದ್ರ ಸರ್ಕಾರದ ಜೊತೆಗೂ ಮಾತನಾಡಿದ್ದೇವೆ. ರಾಜ್ಯ ಸರ್ಕಾರಕ್ಕೂಹಲವುಬಾರಿಮನವಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಸರ್ಕಾರದ ಕಡೆಯಿಂದ ಸಕಾರಾತ್ಮಕ ಉತ್ತರಬರುವುದೆಂಬ ನಿರೀಕ್ಷೆಯಲ್ಲಿದ್ದೇವೆ. ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲೂ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಮಾತ್ರಚಿತ್ರರಂಗದಲ್ಲಿ ವ್ಯಾಪಾರ- ವಹಿವಾಟು ಶುರುವಾಗಲು ಸಾಧ್ಯ. ಡಿ. ಜೈರಾಜ್‌,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಕಳೆದ ಎರಡು- ಮೂರು ತಿಂಗಳಿನಿಂದ ಥಿಯೇಟರ್‌ ತೆರೆಯಲುಅನುಮತಿ ಕೊಡುವಂತೆ ಸರ್ಕಾರವನ್ನುಕೇಳುತ್ತಲೇ ಬಂದಿದ್ದೇವೆ.ಆದರೆ ಸರ್ಕಾರ ಮಾತ್ರ ನಮ್ಮನ್ನುಕರೆದು ಮಾತುಕತೆ ಮಾಡುತ್ತದೆಯೇಹೊರತು,ಈ ಬಗ್ಗೆ ಯಾವುದೇ ನಿರ್ಧಾರಕೈಗೊಂಡಿಲ್ಲ. ನಿಜವಾ ಗಿಯೂಇಂದುಚಿತ್ರರಂಗವನ್ನು ನಂಬಿಕೊಂಡ ನಿರ್ಮಾಪಕರು, ಪ್ರದರ್ಶಕರ ಬದುಕು ಮೂರಾಬಟ್ಟೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಸಹಾನುಭೂತಿ, ಸಹಾಯಎರಡೂಇಲ್ಲಅಂದ್ರೆ ಕಷ್ಟವಾಗುತ್ತದೆ. ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ ಗಳನ್ನು ತೆರೆಯಲುಅನುಮತಿ ನೀಡಿದರೆ, ಚಿತ್ರರಂಗದಲ್ಲಿ ಉಸಿರಾಡುವ ವಾತಾವರಣ ನಿರ್ಮಾಣವಾಗುತ್ತದೆ. ಕೆ.ವಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ಸದ್ಯ ಸಿನಿಮಾಬಿಡುಗಡೆಯಬಗ್ಗೆ ನಿರ್ಮಾಪಕರು, ಪ್ರದರ್ಶಕರು, ಪ್ರೇಕ್ಷಕರು ಎಲ್ಲರಿಗೂ ಅನಿಶ್ಚಿತತೆ ಕಾಡುತ್ತಿದೆ. ಸರ್ಕಾರದ ಶೀಘ್ರದಲ್ಲಿಯೇ ಎಸ್‌ಒಪಿ ಬಿಡುಗಡೆ ಮಾಡ್ತೀವಿ ಅಂತಿದ್ರು.ಇನ್ನೂಬಿಡುಗಡೆ ಮಾಡಿಲ್ಲ. ಪಶ್ಚಿಮಬಂಗಾಳದಲ್ಲಿ ಮಾತ್ರ ಥಿಯೇಟರ್‌ಗಳು ಓಪನ್‌ಆದ್ರೆಏನೂಪ್ರಯೋಜನವಿಲ್ಲ.ಇವತ್ತು ಕನ್ನಡ ಸಿನಿಮಾಗಳುಕೂಡಎಲ್ಲಕಡೆಗಳಲ್ಲಿಒಟ್ಟಿಗೇ ರಿಲೀಸ್‌ಆಗುತ್ತಿರುವುದರಿಂದ, ಎಲ್ಲಕಡೆಒಟ್ಟಿಗೆಓಪನ್‌ ಆದ್ರೆಒಳ್ಳೆಯದು. ತಕ್ಷಣಥಿಯೇಟರ್‌, ಮಲ್ಟಿಫ್ಲೆಕ್ಸ್‌ ಓಪನ್‌ ಮಾಡಲುಅನುಮತಿ ಕೊಟ್ಟರೂ,ಅದರ ಕಂಟೆಂಟ್‌, ಪ್ರಮೋಶನ್‌ ಅಂಥ ಸಿನಿಮಾರಿಲೀಸ್‌ ಆಗಲುಒಂದಷ್ಟು ಸಮಯಬೇಕಾಗುತ್ತದೆ.ಈಗಾಗಲೇ ಪ್ರದರ್ಶಕರು ಸರ್ಕಾರ ನೀಡುವ ಮಾರ್ಗದರ್ಶಿ ನಿಯಮಾವಳಿಗಳನ್ನು ಪಾಲಿಸಲುಒಪ್ಪಿಕೊಂಡಿದ್ದಾರೆ. ಶೀಘ್ರಚಿತ್ರಮಂದಿರ ತೆರೆಯುವ ನಿರೀಕ್ಷೆಯಿದೆ. ಕೆ.ಪಿ ಶ್ರೀಕಾಂತ್‌, ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next