ಏನ್ ಬಹಳ ಬ್ಯುಸಿ ಆಗ್ಬಿಟ್ಟಿದ್ದೀ. ಕೊಬ್ಬು ಕಣಾ ನಿಂಗೆ. ಅಷ್ಟೆಲ್ಲಾ ಬೈದ್ರೂ ನಾನೇ ಪೋನ್ ಮಾಡ್ತೀನಿ, ಸಾರಿ ಕೇಳ್ತಿನಿ. ಇವ್ಳು ಬಿಟ್ ಹೋಗಲ್ಲ ಅಂತ ಆಟ ಆಡಿಸ್ತೀಯ ಅಲ್ವಾ? ಅಷ್ಟಕ್ಕೂ ನೀನ್ಯಾಕೆ ಬೈಯೋದು ನಂಗೆ? ನಾನು ನಿನ್ನ ಅರ್ಥ ಮಾಡ್ಕೊಳ್ಳೋದಿಲ್ಲ ಅಂತಾನಾ? ನಿನ್ನನ್ನು ಅಪಾರ್ಥ ಮಾಡ್ಕೊಂಡು, ತಪ್ಪಾಗಿ ತಿಳಿದು, ನೀನೊಬ್ಬ ಗೂಬೆ ಅಂತನ್ನಿಸಿ ಮತ್ತೆ “ಛೇ ಛೇ, ಅವನು ಆ ಥರದ ಹುಡುಗ ಅಲ್ಲ, ಛೇ ನಾನು ಬೈದ್ನಲ್ಲಾ’ ಎಂದು ಪರಿತಪಿಸುವಲ್ಲಿ ಒಂಥರಾ ಹೇಳ್ಕೊಳ್ಳೋಕೆ ಆಗದೆ ಇರುವ ಮಾಧುರ್ಯ ಇರುತ್ತೆ ಮನಸ್ಸಲ್ಲಿ. ತಿಳೀತಾ? ತುಂಬಾ ವೇಳೆ ನಿನ್ನ ಬಳಿ ಹೇಳಿದ್ದೇನೆ; ನನಗೆ ಸುಳ್ಳಾಡುವ ಎರಡು ನಾಲಿಗೆಯವರೆಂದ್ರೆ ಆಗೋದಿಲ್ಲ. ಅಷ್ಟೆಲ್ಲ ಸುಳ್ಳಿಗರ ದ್ವೇಷಿಯಾದ ನಾನು ನಿನ್ನ ಜೀವದ ಉಸಿರಿನಷ್ಟು ಪ್ರೀತಿಸ್ತೀನಿ ಅಂದ್ರೆ ಅರ್ಥ ಆಗೋಲ್ವಾ? ನಾನೇನ್ ಪಫೆìಕ್ಟ್ ಹುಡ್ಗಿ ಅಲ್ಲಯ್ನಾ… ನಾನೂ ತಪ್ಪು ಮಾಡ್ತೀನಿ, ಅದನ್ನು ತಿದೊಡೂ ನಡೀತೀನಿ. ನಂಗೆ ಸಣ್ಣಪುಟ್ಟ ತಪ್ಪು ಮಾಡೋದ್ ಅಂದ್ರೆ ಸಖತ್ ಇಷ್ಟ. ನಾನೆಷ್ಟು ದಡ್ಡಿ ಅಂತ ಒಳಗೊಳಗೇ ನಗ್ತಿನಿ, ಖುಷಿಯಾಗ್ತಿನಿ. ಅದಕ್ಕಾಗಿ ಅಳ್ಳೋದಿಲ್ಲ. ಆದ್ರೆ ನೀನು ಬಿಟ್ ಹೋದಾಗ ಇರುಳು ಪೂರಾ ಬಿಕ್ಕಿದ್ದೇನೆ. ಜೀವನದ ಬಗ್ಗೆ ಬೇಸರಪಟ್ಟಿದ್ದೇನೆ. ಎದೆಯಲ್ಲಿ ನೋವು ಬಂದಾಗಲೇ ತಿಳಿದಿದ್ದು ಹೃದಯ ಎಡ ಭಾಗದಲ್ಲೆ„ತೆ ಅಂತ! ಪ್ರೀತಿ ಹೃದಯದಲ್ಲಿ ಇದೆ ಅಂತ ಈ ನೋವಿನ ಪುರಾವೆಯಿಂದಲೇ ತಿಳಿದಿದ್ದು.
Advertisement
ಗೊತ್ತಾಯ್ತಾ? ಅಷ್ಟು ನಂಬಿಕೆ, ವಿಶ್ವಾಸ ನಿನ್ ಮೇಲೆ. ನಂಗೆ ನಿನ್ನನ್ನು ಇಂದ್ರ ಚಂದ್ರ ಅಂತೆಲ್ಲ ಹೊಗಳ್ಳೋಕೆ ಬರಲ್ವಯ್ನಾ. ಆದ್ರೆ, ನಾ ಪ್ರೀತಿಸುವ ಈ ಪ್ರಕೃತಿಯ ನೆರಳಿನಲ್ಲಿ ನಿನ್ನ ಕಂಪು, ಹರಿವ ತೊರೆ, ಪಕ್ಷಿಗಳ ಸ್ವರದಲ್ಲಿ ನಿನ್ನ ಇಂಪು ಮೈಗೂಡಿ ಬರುತ್ತವೆ. ಅವುಗಳಷ್ಟೇ ತಂಪಾದ ಭಾವ, ಮಡಿಲ ಚೇತರಿಕೆ ನೀಡುತ್ತವೆ. ನನಗೊಂದು ಕೆಟ್ಟ ಹವ್ಯಾಸವೆಂದರೆ, ನೇರವಾಗಿ ಹೇಳಿ ಬೈಸ್ಕೊಳ್ಳೋ ಚಾಳಿ. ಇಲ್ಲಾ, ಅಂಥವರ ಸಹವಾಸವೇ ಬೇಡಾಂತ ಕೈಮುಗಿದು ಹೊರಟ್ ಹೋಗ್ತಿàನಿ. ಎಷ್ಟು ಜನ ದೂರಾದ್ರೂ ಡೋಂಟ… ಕೇರ್.
ನಾನಂತೂ ಎಲ್ಲಾನೂ ಹೇಳಿದ್ದೀನಿ. ನಂಬೋದು ಬಿಡೋದು, ನಿಂಗ್ ಬಿಟ್ಟಿದ್ದು. ಆದ್ರೆ ತುಂಬಾ ಅಳಿಸ್ಬೇಡ್ವೋ ನನ್ನ ಪ್ಲೀಸ್… ಇಂತಿ ನಿನ್ನ ಪೆದ್ದಿ
ಮಲ್ಲಿಗೆ