ದೀಪಾವಳಿ ಬಂತು. ಮಕ್ಕಳು ಪಟಾಕಿ ಬೇಕು ಅಂತ ಕೇಳುತ್ತಿದ್ದಾರೆ. ಪಟಾಕಿ ಎಲ್ಲಿಂದ ತರೋದು ಅಂತ ಯೋಚಿಸ್ತಿದ್ದೀರಾ? ಸರಿಯಾಗಿ ಒಂದು ವರ್ಷದ ಕೆಳಗೆ ಮೋನೀಶ್ ಹೆತ್ತವರೂ ಇದನ್ನೇ ಯೋಚಿಸಿದ್ದರು. ಅವನಿಗೆ ಪಟಾಕಿ ಪ್ಯಾಕೆಟ್ಟನ್ನೂ ತಂದುಕೊಟ್ಟಿದ್ದರು. ಆದರೆ ಈ ವರ್ಷ ಮೋನೀಶ್ ಪಟಾಕಿ ಬೇಕೆಂದು ಹಟ ಮಾಡಿಲ್ಲ. ಯಾಕೆ ಗೊತ್ತಾ? ಅವನೇ ಹೇಳಿದ್ದಾನೆ ಕೇಳಿ…
ದೀಪಾವಳಿ ಅಂದ್ರೆ ನಂಗೆ ತುಂಬಾ ಇಷ್ಟ. ಶಾಲೆಗೆ ರಜೆ, ಹೊಸಬಟ್ಟೆ, ಸುರ್‌ಸುರ್ ಬತ್ತಿ, ಸ್ವೀಟ್ಸು, ಪಕ್ಕದ್ಮನೆ ಹುಡುಗರ ಜತೆ ಆಟ. ಇವೆಲ್ಲಾ ಯಾರಿಗೆ ತಾನೇ ಇಷ್ಟ ಆಗೊಲ್ಲ ಹೇಳಿ. ಕಳೆದ ವರ್ಷ ಇದೇ ದಿನ ಏನಾಯ್ತು ಅಂತ ಚೆನ್ನಾಗಿ ನೆನಪಿದೆ. ನಾನು ಶಾಲೆಯಿಂದ ತುಂಬಾ ಖುಷಿಯಿಂದ ಮನೆಗೆ ವಾಪಸಾಗಿದ್ದೆ. ಮಾರನೇ ದಿನ ಹಬ್ಬಕ್ಕೆ ರಜೆ ಇತ್ತಲ್ಲ. ಅಮ್ಮ ಅಡುಗೆ ಮನೇಲಿ ಹಬ್ಬದ ಪ್ರಿಪರೇಷನ್ ಮಾಡ್ತಿದ್ರು. ಅಲೆª, ಮನೆಗೆ ಕೆಲವು ನೆಂಟರಿಷ್ಟರೂ ಬಂದಿದ್ರು. ನಾನಂತೂ ಖುಷಿಯಿಂದ ಕುಣೀತಾ ಇದ್ದೆ. ಆಗಲೇ ಆ
ಆ್ಯಕ್ಸಿಡೆಂಟ್ ಆಗಿದ್ದು.
ಪಟಾಕಿ ಸದ್ದು ಕೇಳಿತು. ಎದುರುಗಡೆ ರಸ್ತೆ ಮೇಲೆ ನನ್ ಫ್ರೆಂಡ್ಸ್ ಎಲ್ಲಾರೂ ಸೇರೊRಂಡು ಪಟಾಕಿ ಹೊಡೀತಿದ್ರು. ನನ್ನ ಪಟಾಕಿ ಪ್ಯಾಕೆಟ್ಟು ರೂಮಲ್ಲಿ ಭದ್ರವಾಗಿತ್ತು. ಓಪನ್ನೇ ಮಾಡಿರಲಿಲ್ಲ. ರಾತ್ರಿ ಊಟ ಆದ ಮೇಲೆ ಹೊಡೆಯೋಣ ಅಂತ ಹಾಗೇ ಇಟ್ಟಿದ್ದೆ. ಅದಕ್ಕೇ ದೂರ ನಿಂತುಕೊಂಡು ಉಳಿದವರು ಪಟಾಕಿ ಹೊಡೆಯೋದನ್ನೇ ನೋಡ್ತಾ ನಿಂತಿದ್ದೆ. ಒಂದು ಕ್ಷಣ ಕಿಟಾರನೆ ಕಿರುಚಿಕೊಂಡೆ. ತಲೆ ಸಿಡಿದುಹೋಗ್ತಿದೆ ಅನ್ನೋವಷ್ಟು ನೋವು. ಎಡಗಣ್ಣಿನಲ್ಲಿ ತುಂಬಾ ಉರಿ ಹತ್ತಿಕೊಂಡಿತು. ಸುತ್ತಮುತ್ತಲಿದ್ದವರೆಲ್ಲ ಬೊಬ್ಬೆ ಹೊಡೀತಾ ನನ್ನತ್ತ ಓಡಿ ಬಂದರು. ಕಣ್ಣು ಬಿಡೋಕೇ ಆಗ್ತಿರಲಿಲ್ಲ. ಪಟಾಕಿ ಕಣ್ಣಿಗೆ ಬಿದ್ದಿದೆ ಅಂತ ಕನ್‌ಫರ್ಮ್ ಆಯ್ತು.
ಮನೆ ಹತ್ರ ಇದ್ದ ನಾರಾಯಣ ನೇತ್ರಾಲಯಕ್ಕೆ ಕರ್ಕೊಂಡು ಹೋದ್ರು. ಅಲ್ಲಿ ಡಾಕ್ಟರ್ ಅಪ್ಪ ಅಮ್ಮಂಗೆ ಏನು ಹೇಳಿದರೋ ಗೊತ್ತಿಲ್ಲ, ಅವರಿಬ್ಬರೂ ಮಂಕಾಗಿ ಕೂತುಬಿಟ್ರಾ. ದೃಷ್ಟಿಯೇ ಹೋಗಿತ್ತು. 1 ವಾರ ಆಯ್ತು, 2 ವಾರ ಆಯ್ತು ಎಡಗಣ್ಣು ಸರಿ ಹೋಗಲೇ ಇಲ್ಲ. ಕಣ್ಣು ಸರಿ ಹೋಗುತ್ತೋ ಇಲ್ವೋ ಅಂತ ನಂಗೇ ಅನುಮಾನ ಶುರುವಾಯ್ತು. ಅಪ್ಪ ಅಮ್ಮ ನನ್ನನ್ನು ನೋಡ್ತಾ ಇದ್ದ ರೀತಿ ನೋಡಿ ನಂಗೆ ಅಳು ಬರ್ತಿತ್ತು. ಜೀವ ಹೋಗೋವಷ್ಟು ನೋವಾಗ್ತಾ ಇದ್ರೂ ಅಪ್ಪ ಅಮ್ಮ ನೊಂದೊRàತಾರೆ ಅಂತ ಹೆಚ್ಚು ತೋರಿಸಿಕೊಳ್ಳುತ್ತಿರಲಿಲ್ಲ. ದೇವರ ದಯೆಯಿಂದ 4ನೇ ವಾರ ಬ್ಯಾಂಡೇಜು ಬಿಚ್ಚಿದಾಗ ಮಬ್ಬು ಮಬ್ಟಾಗಿ ಕಾಣಿಸತೊಡಗಿತು. ಮನೆಯವರೆಲ್ರೂ ನಿಟ್ಟುಸಿರು ಬಿಟ್ರಾ. ಆ ಹೊತ್ತಿನಲ್ಲಿ ಅವರ ಮುಖಗಳಲ್ಲಿ ಕಂಡ ಸಂತಸಕ್ಕೆ ಯಾವ ಹಬ್ಬದ ಸಂಭ್ರಮ ಸಡಗರವೂ ಸಾಟಿಯಾಗಲಾರದೇನೋ!
ಆವತ್ತೇ ಡಿಸೈಡ್ ಮಾಡಿದೆ, ಇನ್ನು ಮುಂದೆ ಮನೆಯಲ್ಲಿ ಪಟಾಕಿ ಬೇಕೂ ಅಂತ ಕೇಳಲ್ಲ ಅಂತ. ಸ್ನೇಹಿತರಿಗೂ ಅದನ್ನೇ ಹೇಳಿದೆ. ಎಷ್ಟೋ ಜನ ತಾವು ಸೇಫ್ ಆಗಿ ಪಟಾಕಿ ಹೊಡೀತೀವಿ ಅಂತ ಅನ್ಕೊಂಡಿರ್ತಾರೆ. ಆದರೆ ನಿಮಗೊಂದು ವಿಷಯ ಗೊತ್ತಾ, ಕಣ್ಣಿಗೆ ಕಿಡಿ ಹಾರಿದಾಗ ನಾನೇನು ರಸ್ತೆ ಹತ್ರ ನಿಂತಿರಲಿಲ್ಲ, ನಾನಿದ್ದಿದ್ದು ಬಾಲ್ಕನೀಲಿ. ನಮ್ಮನೆ ಇರೋದು ಮೊದಲನೇ ಮಹಡೀಲಿ. ಕನ್ನಡಕ ಬೇರೆ ಹಾಕ್ಕೊಂಡಿದ್ದೆ. ಎಂಥಾ ಬ್ಯಾಡ್‌ಲಕ್ ಅಲ್ವಾ?
ಪ್ರತಿ ವರ್ಷ ನೂರಾರು ಮಕ್ಕಳು ದೀಪಾವಳಿ ದಿನ ಆಸ್ಪತ್ರೆ ಸೇರ್ಕೋತಾರಂತೆ. ಅವರಲ್ಲೆಲ್ಲರೂ ನನ್ನಂತೆ ಅದೃಷ್ಟಶಾಲಿಗಳಾಗಿರೋಲ್ಲ ಅಲ್ವಾ?
ದೊಡ್ಡವರು ತಮ್ಮ ಮಕ್ಕಳು ಖುಷಿಯಾಗಿರಲಿ ಅಂತ ದೀಪಾವಳಿ ದಿನ ಗಿಫ್ಟ್ ಗಳನ್ನ ಕೊಡ್ತಾರೆ. ಆದರೆ ದೃಷ್ಟಿಯನ್ನೇ ಕಳೆದು, ಜೀವನದ ಖುಷೀನ ಹಾಳು ಮಾಡೋ ಶಕ್ತಿ ಇರೋ ಪಟಾಕಿ ಗಿಫ್ಟು ಹೇಗಾಗುತ್ತೆ ಅನ್ನೋದು
ನನ್ನ ಪ್ರಶ್ನೆ.
ಮೋನೀಶ್, 7ನೇ ತರಗತಿ,
ರಾಜಾಜಿನಗರ, ಬೆಂಗಳೂರು