Advertisement
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ ಜಿಲ್ಲಾದ್ಯಂತ ಬ್ಯಾಂಕ್‌ಗಳು ನೀಡಬಹುದಾದ ಸಾಲ ಬಿಡುಗಡೆಗೆ ಸಂಬಂಧಪಟ್ಟ ಯೋಜನೆ ರೂಪಿಸಲು ಇದು ಸಹಕಾರಿ ಎಂದರು.
Related Articles
Advertisement
ಅತಿಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ 17,100ಲಕ್ಷ ರೂ. ರಫ್ತುಸಾಲ 24,192ಲಕ್ಷ ರೂ., ಶಿಕ್ಷಣವಲಯಕ್ಕೆ 9,170 ಲಕ್ಷ ರೂ., ವಸತಿಗಾಗಿ 27,200 ಲಕ್ಷ ರೂ., ಸೋಲಾರ್-ಗಾಳಿಯಂತ್ರ ಸೇರಿದಂತೆ ಅಸಂಪ್ರದಾಯಕ ಶಕ್ತಿ ಉತ್ಪಾದನಾ ವಲಯದಲ್ಲಿ 4,078 ಲಕ್ಷ ರೂ., ಶಾಲೆ-ಆಸ್ಪತ್ರೆ ನಿರ್ಮಾಣ ಸೇರಿದಂತೆ ಸಾಮಾಜಿಕ ಸೌಕರ್ಯ ನಿರ್ಮಾಣಕ್ಕೆ 1,787ಲಕ್ಷ ರೂ. ಹೀಗೆ ಒಟ್ಟಾರೆ 5,55,194.04ಲಕ್ಷ ರೂ.ಗಳ ವಿವರವಾದ ವರದಿ ಮುಂದಿಟ್ಟ ಪ್ರತಾಪ್, ಜಿಲ್ಲೆಯ ಗ್ರಾಮೀಣ ಚಟುವಟಿಕೆಗಳಿಗೆ ಬ್ಯಾಂಕ್‌ಗಳು ಹಾಗೂ ಇಲಾಖೆಗಳು ಈ ಸಾಮರ್ಥ್ಯ ಅರಿತು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಪೋರೇಷನ್ ಬ್ಯಾಂಕ್ ಉಡುಪಿ ವಲಯ ಪ್ರಬಂಧಕ ಡೆಲಿಯಾಡಯಾಸ್ ಸ್ವಾಗತಿಸಿ ಪ್ರಾಸ್ತಾವಿಸಿದರು. ರಿಜರ್ವ್ ಬ್ಯಾಂಕ್ ಇಂಡಿಯಾ ಬೆಂಗಳೂರು ವಲಯ ಕಚೇರಿಯ ಲೀಡ್ ಡಿಸ್ಟ್ರಿಕ್ಟ್ ಆಫೀಸರ್ ಎನ್.ನಾಗರಾಜ್ ಜಿಲ್ಲೆಯಲ್ಲಿ ಬ್ಯಾಂಕರ್‌ಗಳ ಕಾರ್ಯವಿಧಾನ ವಿಮರ್ಶಿಸಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಪ್ರಬಂಧಕ ಪ್ರಶಾಂತ ದೇಸಾಯಿ ನಿರೂಪಿಸಿ, ವಂದಿಸಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 285 ಬ್ಯಾಂಕ್ ಶಾಖಾ ಪ್ರತಿನಿಧಿಗಳು, ಡಿ.ಡಿ.ಪಿ.ಐ. ಪ್ರಸನ್ನಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಹಾಗೂ ಪಶುಸಂಗೋಪನಾ ಇಲಾಖಾ ಪ್ರತಿನಿಧಿಗಳು ಸೇರಿದಂತೆ ಹಲವು ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.