Advertisement

4ನೇ ಕ್ರಮಾಂಕದಲ್ಲಿ ಆಡಿದ್ದೇ ತಪ್ಪು: ಕೊಹ್ಲಿ

09:23 AM Jan 16, 2020 | sudhir |

ಮುಂಬಯಿ: “ನಾನು 4ನೇ ಕ್ರಮಾಂಕದಲ್ಲಿ ಆಡಿದ್ದೇ ತಪ್ಪು, ಮತ್ತೆ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಪುನರಾವಲೋಕಿಸಬೇಕಿದೆ’ ಎಂಬುದಾಗಿ ತೀವ್ರ ಹತಾಶೆಯಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಮುಂಬಯಿಯಲ್ಲಿ ಆಡಲಾದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಹೀನಾಯ ಸೋಲುಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

ರಾಹುಲ್‌ಗಾಗಿ ಬದಲಾವಣೆ
“ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆ.ಎಲ್‌. ರಾಹುಲ್‌ ಅವರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಬದಲಾವಣೆ ತಂದಿ¨ªೆವು. ಆದರೆ ನಮ್ಮ ಕಾರ್ಯತಂತ್ರ ಫ‌ಲಿಸಲಿಲ್ಲ. ನಾನು 4ನೇ ಕ್ರಮಾಂಕದಲ್ಲಿ ಆಡಿದಾಗೆಲ್ಲ ತಂಡದ ಫ‌ಲಿತಾಂಶ ಕಳಪೆಯಾಗಿರುತ್ತದೆ. ಮುಂದಿನ ಪಂದ್ಯದಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಬೇಕು ಎನ್ನುವುದನ್ನು ಮರು ಆಲೋಚನೆ ಮಾಡಬೇಕಿದೆ’ ಎಂದ ಕೊಹ್ಲಿ ವನ್‌ಡೌನ್‌ಗೆ ಮರಳುವ ಸೂಚನೆ ನೀಡಿದರು.

“ಶಿಖರ್‌ ಧವನ್‌ ಮತ್ತು ರಾಹುಲ್‌ ದ್ವಿತೀಯ ವಿಕೆಟಿಗೆ 121 ರನ್‌ಗಳ ಉತ್ತಮ ಜತೆಯಾಟ ನೀಡಿದ್ದರು. ಅನಂತರ ಆಸೀಸ್‌ ಬೌಲರ್‌ಗಳ ಬಿಗು ದಾಳಿಯ ಮುಂದೆ ಬ್ಯಾಟಿಂಗ್‌ ನಡೆಸಲು ವಿಫ‌ಲರಾದೆವು’ ಎಂದು ಕೊಹ್ಲಿ ಹೇಳಿದರು.
“ಆಟಗಾರರಿಗೆಲ್ಲ ಅವಕಾಶ ನೀಡುವ ಸಲುವಾಗಿ ಪ್ರತೀ ತಂಡ ಆಗಾಗ ಬ್ಯಾಟ್ಸ್‌ಮನ್‌ಗಳಿಗೆ ಭಡ್ತಿ ನೀಡುವುದು, ಇನ್ನಿತರ ಪ್ರಯೋಗ ಮಾಡುವುದಿದೆ. ಅದೇ ರೀತಿ ನಾವು ಕೂಡ ಪ್ರಯೋಗವೊಂದನ್ನು ನಡೆಸಿದೆವು. ಆದರೆ ಇದು ಯಶಸ್ವಿಯಾಗಲಿಲ್ಲ’ ಎಂದರು.

ಎಲ್ಲ ವಿಭಾಗಗಳಲ್ಲೂ ವೈಫ‌ಲ್ಯ
“ನಾವು ಮೂರೂ ವಿಭಾಗಗಳಲ್ಲಿ ವೈಫ‌ಲ್ಯ ಅನುಭವಿಸಿದ್ದು ನಿಜ. ಮುಂದಿನ ಪಂದ್ಯದಲ್ಲಿ ಸಾಮರ್ಥ್ಯಕ್ಕೂ ಮಿಗಿಲಾದ ಹೋರಾಟ ನಡೆಸಿ ಗೆಲುವು ಸಾಧಿಸಲು ಎಲ್ಲ ಆಟಗಾರರೂ ಶ್ರಮಿಸಬೇಕು’ ಎಂದು ಕೊಹ್ಲಿ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next