Advertisement
ಕಳೆದ ವರ್ಷ ಫ್ಯಾಷನ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ “ಬ್ಲೂಸಾಸ್ ಡೇ ಮೋಡ’ ಈ ವರ್ಷ ಮತ್ತೆ ರ್‍ಯಾಂಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸ್ಪ್ಯಾನಿಷ್ ಭಾಷೆಯಲ್ಲಿ “ಬ್ಲೂಸಾಸ್ ಡೇ ಮೋಡ’ ಎಂದರೆ ಫ್ಯಾಷನ್ ಬ್ಲೌಸ್ ಎಂದರ್ಥ.
ಈ ಬ್ಲೌಸ್‌ಗಳು ಸಾಮಾನ್ಯ ರವಿಕೆಯಂತಲ್ಲ. ನೋಡಲು ಅಂಗಿಯಂತೆ ಇರುವ ಈ ಬ್ಲೌಸ್‌ಗಳ ಕತ್ತಿಗೆ ಟರ್ಟಲ್ ನೆಕ್ ವಿನ್ಯಾಸ ಬಳಸಲಾಗುತ್ತದೆ. ತುಂಬ ಸಡಿಲವೂ ಅಲ್ಲದ, ತುಂಬ ಬಿಗಿಯೂ ಅಲ್ಲದ ಈ ಉಡುಗೆಯ ತೋಳುಗಳು ಸಾಮಾನ್ಯವಾಗಿ ಬೆಲ್ ಬಾಟಮ್ ಶೈಲಿಯಲ್ಲಿ ಇರುತ್ತವೆ. ಹೆಚ್ಚಾಗಿ ಈ ರವಿಕೆಗಳನ್ನು ಸ್ಯಾಟಿನ್, ರೇಷ್ಮೆ ಮತ್ತು ಸಿಂಥೆಟಿಕ್ ಬಟ್ಟೆಯಿಂದ ಮಾಡಿರುತ್ತಾರೆ. ಆದ್ದರಿಂದ ಈ ರವಿಕೆಗೆ ಇಸ್ತ್ರಿ ಹಾಕುವ ಅಗತ್ಯ ಇರುವುದಿಲ್ಲ. ಇವು ಕ್ರೀಸ್ ಫ್ರಿ ರವಿಕೆಗಳು. ಈಸಿ ಪ್ಯಾಕಿಂಗ್:
ಇವುಗಳನ್ನು ಮಡಚಿ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡುವಾಗ ತುಂಬಾ ಕಡಿಮೆ ಜಾಗ ಸಾಕು. ಏಕೆಂದರೆ ಇವು ಸ್ವಲ್ಪವೂ ದಪ್ಪವಿರುವುದಿಲ್ಲ. ಹಾಗಾಗಿ ಒಂದು ಬಟ್ಟೆ ಇಡಬಹುದಾದ ಜಾಗದಲ್ಲಿ ಇಂಥ ಮೂರು ನಾಲ್ಕು ರವಿಕೆಗಳನ್ನು ಪ್ಯಾಕ್ ಮಾಡಿಕೊಳ್ಳಬಹುದು. ನೋಡಲು ಸಖತ್ ಸ್ಟೈಲಿಶ್, ಇಸ್ತ್ರಿಯ ಮಾಡಬೇಕಾದ ಅಗತ್ಯವೂ ಇಲ್ಲ. ಒಗೆದು ಒಣಗಿಸಿದ ನಂತರ ಇವು ಮುದುರಿದಂತೆ ಕಾಣುವುದಿಲ್ಲ. ಹಾಗಾಗಿ ಚೆನ್ನಾಗಿ ಕಾಣದೇ ಇದ್ದರೆ ಏನ್ಮಾಡೋದು ಎಂಬ ಚಿಂತೆಯೂ ಇಲ್ಲ. ಸಾಲದ್ದಕ್ಕೆ ಪ್ಯಾಕಿಂಗ್‌ಗೂ ಉಪಕಾರಿ ಎಂದ ಮೇಲೆ ಯಾವ ಮಹಿಳೆ ತಾನೇ ಈ ಉಡುಪು ಬೇಡ ಅಂತಾಳೆ?
Related Articles
ಶಾರ್ಟ್ಸ್ ಜೊತೆಯೂ ಧರಿಸಬಹುದು. ಅಲ್ಲದೆ ಆಫ್ ಶೋಲ್ಡರ್ ಡ್ರೆಸ್ (ಕತ್ತು, ತೋಳು ಇಲ್ಲದ ಡ್ರೆಸ್) ಮೇಲೆ ಉಟ್ಟು ಲೇಯರಿಂಗ್ ಕೂಡ ಮಾಡಬಹುದು. ಇವುಗಳ ಮೇಲೆ ಉಡುಪಿನ ಬಣ್ಣಕ್ಕೆ ಹೋಲುವ ಬಣ್ಣಗಳ ಲೇಸ್ ವರ್ಕ್ ಮಾಡಲಾಗುತ್ತದೆ. ತೋಳು, ಕತ್ತು, ಬೆನ್ನು ಮತ್ತು ಬುಡಕ್ಕೆ ಲೇಸ್ ವರ್ಕ್ ಇರುತ್ತದೆ. ಇವು ಮೈಗೆ ಅಂಟಿಕೊಳ್ಳದ ಕಾರಣ ಉಡಲು ಸಾಕಷ್ಟು ಕಂಫರ್ಟಬಲ್ ಆಗಿರುತ್ತವೆ. ಬೆನ್ನಿನ ಬದಿ ಬಟನ್, ಜಿಪ್ ಅಥವಾ ವೆಲೊ ಬಳಸಲಾಗುತ್ತದೆ. ಫ್ರಂಟ್‌ನಲ್ಲಿ ರಿಬ್ಬನ್ ಗಳಿಂದ ಮಾಡಿದ ಟೈ, ಬೋ ಟೈ ಅಥವಾ ಟ್ಯಾಸೆಲ್ಸ ಗಳನ್ನೂ ಜೋಡಿಸುತ್ತಾರೆ.
Advertisement
ತಿಳಿ ಬಣ್ಣದಲ್ಲಿ ಲಭ್ಯಇವುಗಳು ಸಾಲಿಡ್ ಕಲರ್ಡ್ ಉಡುಪುಗಳು. ಆದ್ದರಿಂದ ಭಿನ್ನ- ಭಿನ್ನ ಬಣ್ಣಗಳು ಲಭ್ಯವಿಲ್ಲ. ಸದ್ಯಕ್ಕೆ ತಿಳಿ ಬಣ್ಣಗಳಲ್ಲಿ ಮಾತ್ರ ಸಿಗುತ್ತವೆ. ನೀವು ಬೇಕಾದರೆ ಗಾಢ ಬಣ್ಣಗಳ ಬಟ್ಟೆಯಲ್ಲಿ ರವಿಕೆ ಹೊಲಿಸಬಹುದು. ಆದರೆ ಆ ಬಣ್ಣ ನಿಮ್ಮ ಮೈ ಬಣ್ಣಕ್ಕೆ ಹೋಲುತ್ತದೆಯೋ, ಇಲ್ಲವೋ ಎಂದು ಪರಿಶೀಲಿಸಿದರೆ ಒಳಿತು. ಪ್ರಿನ್ಸೆಸ್ ಡ್ರೆಸ್
ವೇಲ್ಸನ ರಾಜಕುಮಾರಿ ಡಯಾನಾ ಉಡುತ್ತಿದ್ದ ಬ್ಲೌಸ್‌ಗಳು ಬಹುತೇಕ ಹೀಗೆ ಇರುತ್ತಿದ್ದವು. ಬಹುಶಃ ವಸ್ತ್ರ ವಿನ್ಯಾಸಕರು ಆ ಬ್ಲೌಸ್ ವಿನ್ಯಾಸದಿಂದಲೇ ಪ್ರೇರಣೆ ಪಡೆದಿರಬಹುದೇನೋ. ಕೇಟ್ ಮಿಡಲ್ಟನ್ ಎಂದೇ ಹೆಸರಾಗಿರುವ ಕೇಂಬ್ರಿಡ್ಜ್ನ ಡಚೆಸ್, ಕ್ಯಾಥರೀನ್ ಮಿಡಲ್ಟನ್ ಈಗ ಇಂಥದ್ದೇ ರವಿಕೆಗಳನ್ನು ತೊಡುತ್ತಾರೆ. ಹಾಗಾಗಿ ಫ್ಯಾಷನ್ ಪ್ರಿಯರಲ್ಲಿ, ಕೇಟ್ ಮಿಡಲ್ಟನ್‌ನ ಅಭಿಮಾನಿಗಳಲ್ಲಿ ಈ ರವಿಕೆ ಬಗ್ಗೆ ಹೆಚ್ಚೇ ಲವ್ ಆಗಿದೆ. ಆಕ್ಸೆಸರೀಸ್ ಬೇಡ, ಮೇಕಪ್ಪೂ ಬೇಡ
ಈ ಬ್ಲೌಸ್ ಧರಿಸಿದಾಗ ಆಕ್ಸೆಸರೀಸ್ ತೊಟ್ಟರೆ, ಲೇಸಿನ ಅಂದ ಕೆಡುತ್ತದೆ. ಹಾಗಾಗಿ ಈ ರವಿಕೆ ಜೊತೆ ಸರ, ಹಾರ, ಬಳೆ, ಸೊಂಟ ಪಟ್ಟಿಯಂಥ ಯಾವುದೇ ಆಕ್ಸೆಸರೀಸ್ ತೊಡುವಂತಿಲ್ಲ. ಸಿಂಪಲ್ ಕಿವಿಯೋಲೆ, ಉಂಗುರ ಹಾಕಿಯೂ ಮಿಂಚಬಹುದು. ಲೇಸ್ ವರ್ಕ್ ಇರುವ ಉಡುಪಿಗೆ ಕ್ಲಚ್ (ಪರ್ಸ್) ಮತ್ತು ಪಾದರಕ್ಷೆ ಗಳೇ ಉತ್ತಮ ಆಕ್ಸೆಸರೀಸ್. ಈ ಉಡುಪಿಗೆ ಸಾದಾ ಮೇಕ್‌ಅಪ್ ಹಾಕಿಕೊಂಡರೆ ಸಾಕು.
ಗಾಢ ಮೇಕ್‌ಅಪ್ ಈ ರವಿಕೆಯ ಅಂದವನ್ನು ಮುಚ್ಚುತ್ತದೆ. ಅದಿತಿಮಾನಸ ಟಿ. ಎಸ್.