Advertisement

ಕನಿಷ್ಠ 9 ಕ್ರಿಕೆಟಿಗರಿದ್ದರೂ ಆಟ ಮುಂದುವರಿಸಬಹುದು: ಐಸಿಸಿ ಹೊಸ ನಿಯಮ

10:12 AM Feb 25, 2022 | Team Udayavani |

ವೆಲ್ಲಿಂಗ್ಟನ್‌: ಕೊರೊನಾದಿಂದಾಗಿ ಹಲವು ಕ್ರಿಕೆಟ್‌ ನಿಯಮಗಳು ಬದಲಾಗಿವೆ. ಇದೀಗ ಮಹಿಳಾ ಏಕದಿನ ವಿಶ್ವಕಪ್‌ ಮೂಲಕ ಮತ್ತೂಂದು ನಿಯಮವನ್ನು ಜಾರಿಗೊಳಿಸಲು ಐಸಿಸಿ ನಿರ್ಧರಿಸಿದೆ. ಈ ನಿಯಮ ಪ್ರಕಾರ, ತಂಡವೊಂದದಲ್ಲಿ ಕೊರೊನಾ ಪತ್ತೆಯಾದರೆ ಆ ತಂಡ ಕನಿಷ್ಠ 9 ಆಟಗಾರರೊಂದಿಗೆ ಆಡಬಹುದಾಗಿದೆ.

Advertisement

ರಣಜಿಯಲ್ಲಿ ಆರಂಭ: ಈ ನಿಯಮವನ್ನು ಮೊದಲಿಗೆ ರಣಜಿ ಕ್ರಿಕೆಟ್‌ ಟ್ರೋಫಿಯಲ್ಲಿ ಬಿಸಿಸಿಐ ಜಾರಿಗೆ ತಂದಿತ್ತು. ಇದೀಗ ಬಿಸಿಸಿಐನಿಂದ ಪ್ರೇರಿತವಾದ ಐಸಿಸಿ ಈ ನಿಯಮ ವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸುತ್ತಿದೆ.

ಇತ್ತೀಚಿನ ಕೆಲವು ಕ್ರಿಕೆಟ್‌ ಕೂಟಗಳಲ್ಲಿ ತಂಡದ ಬಹುತೇಕ ಆಟಗಾರಿಗೆ ಕೊರೊನಾ ದೃಢಪಟ್ಟಾಗ ಹನ್ನೊಂದರ ಬಳಗವನ್ನು ಹೊಂದಿಸುವುದೇ ಕಷ್ಟವಾಗಿತ್ತು. ಆಗ ತಂಡದ ಕೋಚ್‌ ಕೂಡ ಮೈದಾನಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಪರಿಗಣಿಸಿ ಐಸಿಸಿ ಈಗ 11 ಆಟಗಾರರ ಬದಲಿಗೆ 9 ಆಟಗಾರರೊಂದಿಗೆ ಆಟವನ್ನು ಮುಂದುವರಿಸುವ ಈ ನಿಯಮವನ್ನು ಜಾರಿಗೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next