ಅಗ್ರಗಣ್ಯ. ವಿಶ್ವಸಂಸ್ಥೆಯ ಸ್ಥಾಪಕರಲ್ಲಿ ಪ್ರಮುಖ. ರಾಲ್ಫ್ ನ ತಂದೆ ಕಡುಬಡವ. ಮಗನಿಗೆ ಒಂದು ಗೊಂಬೆ ತಂದು ಕೊಡಲೂ ಅವನ ಬಳಿ ಕಾಸಿರಲಿಲ್ಲ. ಅದೊಮ್ಮೆ, ತಂದೆ ತಂದುಕೊಟ್ಟ ಒಂದೇ ಆಟಿಕೆಗಾಗಿ ರಾಲ್ಫ್ ಮತ್ತು ಅವನ ಸೋದರ ಕಿತ್ತಾಡಿಕೊಂಡರು. ನನಗೆ! ನನಗೆ! ಎಂಬ ಕಿರುಚಾಟದಲ್ಲಿ ಮನೆ ರಣರಂಗವಾಯಿತು.
Advertisement
ರಾಲ್ಫ್ ನ ತಂದೆ ಮಕ್ಕಳಿಬ್ಬರಿಗೂ ಒಂದು ಕರಾರು ಹಾಕಿದರು. ಈ ಆಟಿಕೆಯನ್ನು ಇಬ್ಬರೂ ಒಂದೊಂದು ವಾರದಂತೆ ಸರತಿಯಲ್ಲಿ ತೆಗೆದುಕೊಳ್ಳಿ. ಒಂದು ವಾರ ನೀನು; ಅದರ ಮರುವಾರ ಅವನು. ಆಟಿಕೆ ಜೊತೆ ಆಡುವ ಸಮಯ ಮುಗಿದವರು, ಮುಂದಿನ ಒಂದು ವಾರ ಅದನ್ನು ಮುಟ್ಟುವ ಹಾಗಿಲ್ಲ. ಹಾಗೇ ಇನ್ನೊಂದು ಮಾತು: ಆಟಿಕೆ ಜೊತೆ ಆಡುವ ಅವಕಾಶ ಯಾರಿಗೆ ಬಂದಿದೆಯೋ ಅವರು, ಆ ಒಂದು ವಾರ ಕಾಡಿಂದ ಸೌದೆ ತರುವ ಕೆಲಸವನ್ನೂ ಮಾಡಬೇಕು. ಹುಡುಗರಿಗೆ ಈ ಒಪ್ಪಂದ ಹಿಡಿಸಿತು. ಮೊದಲ ವಾರ ಬಂಚೆ ಆಟಿಕೆಯ ಜೊತೆ ಬಿಟ್ಟೂಬಿಡದೆ ಆಡಿದ. ಸಂಜೆಯ ಹೊತ್ತು ಕಾಡಿಂದ ಸೌದೆಯನ್ನೂ ತಂದುಹಾಕಿದ. ಅದರ ಮರುವಾರ ಅವನ ಸೋದರನಿಗೆ ದಕ್ಕಿತು. ಆಟಿಕೆಯ ಜೊತೆ ಸಮಯ ಕಳೆಯುವ ಅವಕಾಶ ಮತ್ತು ಕಾಡಿಂದ ಸೌದೆ ತರುವ ಕೆಲಸ.