Advertisement

Gujjar Kere: ಗುಜ್ಜರಕೆರೆಗೆ ಸೇರುತ್ತಿದೆ ಪ್ಲಾಸ್ಟಿಕ್‌ ತ್ಯಾಜ್ಯ

03:11 PM Aug 26, 2024 | Team Udayavani |

ಗುಜ್ಜರಕೆರೆ: ಇತಿಹಾಸ ಪ್ರಸಿದ್ಧ ಗುಜ್ಜರಕೆರೆಯ ನೀರಿನಲ್ಲಿ ಪ್ಲಾಸ್ಟಿಕ್‌ ಬಾಟಲ್‌, ಪ್ಲಾಸ್ಟಿಕ್‌ ಚೀಲಗಳು ತೇಲುತ್ತಿದ್ದು, ಕೆರೆಯ ನೀರು ಮಲಿನವಾಗಿದೆ. ಈ ರೀತಿ ಕೆರೆ ಮತ್ತು ಕೆರೆಯ ಪರಿಸರವನ್ನು ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಕೆರೆ ಮತ್ತು ಕೆರೆ ಪರಿಸರದ ಸಂರಕ್ಷಣೆಗೂ ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕಿದೆ.

Advertisement

ಗುಜ್ಜರಕೆರೆ ಪರಿಸರಕ್ಕೆ ವಾಯು ವಿಹಾರಕ್ಕೆ ಮತ್ತು ಪ್ರವಾಸಕ್ಕೆಂದು ಆಗಮಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸಂರಕ್ಷಣೆ ಕ್ರಮಗಳಿಲ್ಲದೆ ಕೆರೆಯು ಪ್ರವಾಸಿಗರ ಬೇಜವಾಬ್ದಾರಿಯುತ ನಡವಳಿಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಈ ಪುರಾತನ ಪ್ರಸಿದ್ಧ ಕೆರೆಯು ಧಾರ್ಮಿಕ ಮಹತ್ವವನ್ನೂ ಹೊಂದಿದ್ದು, ಪ್ರಸ್ತುತ ಮೋಜು ಮಸ್ತಿಯ ತಾಣವಾಗಿ ಬದಲಾಗಿದೆ ಎಂದು ಸ್ಥಳೀಯರು ಖೇದ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಾಗಿ ಅನ್ಯ ರಾಜ್ಯದ ಯುವಕ ಯುವತಿಯರು ನಾಗರಿಕ ಸಮಾಜದ ಪ್ರಜ್ಞೆ ಇಲ್ಲದಂತೆ ವರ್ತಿಸುವ ಕಾರಣ ವಾಯು ವಿಹಾರಕ್ಕೆ ಆಗಮಿಸುವವರಿಗೂ ಮುಜುಗರ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು. ತಿಂಡಿಗಳು ತಿಂದು ಅದರ ಪ್ಲಾಸ್ಟಿಕ್‌ ವಸ್ತುಗಳನ್ನು ಹೆಚ್ಚಿನವರು ಕೆರೆಗೆ ಎಸೆಯುವ ಕಾರಣ ಮತ್ತು ಕೆರೆಯ ಪರಿಸರದಲ್ಲಿ ಬಿಟ್ಟು ಹೋಗುವ ಕಾರಣ ನೀರಿನ ಮತ್ತು ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಈ ಬಗ್ಗೆ ದಂಡ ಸಹಿತ ಕಠಿನ ಕ್ರಮ ತೆಗೆದುಕೊಳ್ಳಬೇಕು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಾಮಫಲಕ ಇಲ್ಲಿ ಹಾಕಲಾಗಿದ್ದು ಬಿಟ್ಟರೆ, ಕೆರೆಯ ಸಂರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಸ್ಥಳೀಯ ಜನಪ್ರತಿನಿ ಗಳು ಎಚ್ಚೆತ್ತು ಕೆರೆಯ ನೀರಿನ, ಕೆರೆಯ ಪರಿಸರದ ಪಾವಿತ್ರ್ಯ ಸಂರಕ್ಷಣೆಗೆ ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ಕೆರೆಯನ್ನು ಸಂರಕ್ಷಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next