Advertisement

ನಾಯಂಡಹಳ್ಳಿಯಲ್ಲಿ ಹೊತ್ತಿ ಉರಿದ ಪ್ಲಾಸ್ಟಿಕ್‌ ಗೋದಾಮು 

09:10 AM Jan 21, 2018 | |

ಬೆಂಗಳೂರು : ನರಗದ  ನಾಯಂಡ ಹಳ್ಳಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಪ್ಲಾಸ್ಟಿಕ್‌  ವಸ್ತುಗಳನ್ನು ಸಂಗ್ರಹಿಸಿಟ್ಟ ಗೋದಾಮೊಂದು ಅಗ್ನಿಗೆ ಆಹುತಿಯಾಗಿದೆ. 

Advertisement

ಬೆಳ್ಳಂಬೆಳಗ್ಗೆ ಬೆಂಕಿ  ತಗುಲಿದ್ದು ಗೋದಾಮು ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ 5  ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಬಳಸಲಾಗುವ ವಸ್ತುಗಳು ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ.

ಬೆಂಕಿ ತಗುಲಿದ ಬಳಿಕ ಮಾಲೀಕರು ಯಾರು ಮುಂದೆ  ಬಂದಿಲ್ಲ ಎಂದು ವರದಿಯಾಗಿದೆ. ನಾಯಂಡಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪ್ರಕರಣ ದಾಖಲಿಸಿಕೊಳ್ಳಲು ತೀರ್ಮಾನ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಯಾವ ಕಾರಣದಿಂದಾಗಿ ಬೆಂಕಿ ತಗುಲಿದೆ ಎಂದು ತಿಳಿದು ಬಂದಿಲ್ಲ.  

Advertisement
Advertisement

Udayavani is now on Telegram. Click here to join our channel and stay updated with the latest news.

Next