Advertisement

ಸ್ವಲ್ಪವೂ ಕರಗದ ಪ್ಲಾಸ್ಟಿಕ್‌ ಜೀವಕ್ಕೆ ಮಾರಕ: ಕಾಡದೇ ವರ

05:06 PM Jun 07, 2018 | |

ಧಾರವಾಡ: ಪ್ಲಾಸ್ಟಿಕ್‌ ಸಂಶೋಧನೆಯಾದಾಗಿನಿಂದ ಹಿಡಿದು ಈವರೆಗೂ ಉತ್ಪಾದಿಸಿರುವ ಲಕ್ಷ ಲಕ್ಷ ಟನ್‌ ಪ್ಲಾಸ್ಟಿಕ್‌ನಲ್ಲಿ ಒಂದಂಗುಲ ಕೂಡ ಮರಳಿ ಜೈವಿಕವಾಗಿ ಕರಗಿಲ್ಲ ಎಂದು ಕವಿವಿ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಗಿರೀಶ ಕಾಡದೇವರ ಕಳವಳ ವ್ಯಕ್ತಪಡಿಸಿದರು.

Advertisement

ಹಳ್ಳಿಗೇರಿಯ ನೇಚರ್‌ ಫಸ್ಟ್‌ ಇಕೋವಿಲೇಜ್‌ ಹಾಗೂ ನೇಚರ್‌ ರಿಸರ್ಚ್‌ ಸೆಂಟರ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಪ್ಲಾಸ್ಟಿಕ್‌ ಮುಕ್ತಿಗೆ ನಮ್ಮ ಯುಕ್ತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಪ್ರತಿನಿತ್ಯದ ಪ್ರಾರಂಭ ಪ್ಲಾಸ್ಟಿಕ್‌ನಿಂದ ಮಾಡಿದ ಬ್ರಶ್‌, ಸ್ನಾನದ ಬಕೆಟ್‌, ಊಟದ ಡಬ್ಬಿ, ಬಾಟಲ್‌ ನೀರು ಹೀಗೆ ಎಲ್ಲಕ್ಕೂ ಪ್ಲಾಸ್ಟಿಕ್‌ ಆವರಿಸಿಕೊಂಡು ಬಿಟ್ಟಿದೆ. ಪ್ಲಾಸ್ಟಿಕ್‌ನ್ನು ಜೈವಿಕವಾಗಿ ಕರಗಿಸುವ ಸಂಶೋಧನೆಯಾಗುವವರೆಗೂ ಈಗಿರುವ ಪ್ಲಾಸ್ಟಿಕ್‌ನ್ನು ಕಡಿಮೆ ಬಳಕೆ ಮತ್ತು ಮರುಬಳಕೆ ಮಾಡಬೇಕು. ಅದರಲ್ಲೂ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಹಾಗೂ ಪ್ಲಾಸ್ಟಿಕ್‌ ನೀರಿನ ಬಾಟಲ್‌ ಬಳಕೆ ಸಂಪೂರ್ಣ ಕಡಿಮೆಯಾಗಬೇಕು ಎಂದರು.

ಪರಿಸರವಾದಿ ಮುಕುಂದ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಬಂತೆಂದರೆ ಬಹಳಷ್ಟು ವನಮಹೋತ್ಸವ ಕಾರ್ಯಕ್ರಮಗಳು ಜರಗುತ್ತವೆ. ಆದರೆ, ಅವುಗಳಲ್ಲಿ ಬಹಳಷ್ಟು ಮಹೋತ್ಸವಗಳು ವನಮಹೋತ್ಸವವಾಗುತ್ತವೆ. ಆ ದಿನ ತೋರಿದ ಪರಿಸರ ಕಾಳಜಿ ಮರುದಿನ ದಿನ ಇರುವುದಿಲ್ಲ. ಹಚ್ಚಿದ ಗಿಡಗಳು ಬೆಳೆದು ನಿಲ್ಲುವವರೆಗೆ ಜೋಪಾನ ಮಾಡಿದಲ್ಲಿ ಮಾತ್ರ ಇದು ನಿಜವಾದ ಪರಿಸರ ಕಾಳಜಿಯಾಗುವುದು ಎಂದರು.

ಶಿರಸಿಯ ಉಮಾಪತಿ ಭಟ್ಟ ಮಾತನಾಡಿ, ಕಾಡಿನ ಮರಗಳು ಮತ್ತು ಔಷ ಧೀಯ ಸಸ್ಯಗಳು ನಮ್ಮ ಹಿಂದಿನ ಸಂಪ್ರದಾಯದಿಂದಲೂ ಎಲ್ಲ ಆರೋಗ್ಯ ಸಮಸ್ಯಗಳಿಗೆ ಚಿಕತ್ಸೆಯ ಮೂಲವಾಗಿದ್ದವು. ಆದರೆ, ಇತ್ತೀಚಿನ ಅಲೋಪತಿ ಮೆಡಿಸಿನ್‌ ಬಂದಾಗಿನಿಂದ ನಾವೆಲ್ಲ ನಮ್ಮ ಸಾಂಪ್ರದಾಯಿಕ ಚಿಕತ್ಸೆಗಳನ್ನು ತ್ಯಜಿಸಿ ಬಿಟ್ಟಿದ್ದೇವೆ ಎಂದರು.

Advertisement

ಅಧ್ಯಕ್ಷತೆವಿಹಿಸಿದ್ದ ಇಕೋ ವಿಲೇಜಿನ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ಕಳೆದ ಬಾರಿ ರಾಜ್ಯಾದ್ಯಂತ ವಾಡಿಕೆಗಿಂತ ಅರ್ಧಕ್ಕೂ ಕಡಿಮೆಯಷ್ಟು ಮಳೆಯಾಗಿದೆ. ಆದರೆ ಈ ಬಾರಿ ಮಳೆ ಚೆನ್ನಾಗಿ ಆಗುವ ನಿರೀಕ್ಷೆ ಇದ್ದು, ಈ ಬಾರಿ ಹನಿ ನೀರನ್ನೂ ನಾವು ಇಂಗಿಸುವ ಕೆಲಸ ಮಾಡಬೇಕಾಗಿದೆ ಎಂದರು.

ನೇಚರ್‌ ರಿಸರ್ಚ್‌ ಸೆಂಟರ್‌ನ ಚಂದ್ರಶೇಖರ ಬೈರಪ್ಪನವರ, ಡಾ|ಧಿಧೀರಜ ವೀರನಗೌಡರ, ಆರ್‌ .ಜಿ ತಿಮ್ಮಾಪೂರ, ವೀರಣ್ಣ ಪತ್ತಾರ ಇದ್ದರು. ಹರ್ಷವರ್ಧನ್‌ ಶೀಲವಂತ ಸ್ವಾಗತಿಸಿದರು. ಪ್ರಕಾಶ ಗೌಡರ ಪ್ರಾಸ್ತಾವಿಕ ಮಾತನಾಡಿದರು. ಪೂರ್ತಿ ಶರ್ಮಾ ನಿರೂಪಿಸಿದರು. ಅನೀಲ ಅಳ್ಳೊಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next