Advertisement
ವರ್ತಕರ ವಿರೋಧ: ಕಳೆದ ಮೇ ತಿಂಗಳ ಮಧ್ಯ ಭಾಗದಲ್ಲಿ ಜಿಲ್ಲಾಡಳಿತ ಉಪವಿಭಾಗಧಿಕಾರಿಗಳ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗಳ ಸಭಾಂಗಣ ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಜೂ.1ರಿಂದ ಹೊಳೆನರಸೀಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದಾಗಿ ಘೋಷಿಸಿತು.
Related Articles
Advertisement
ಒಂದು ಮೂಲದ ಪ್ರಕಾರ ಪ್ಲಾಸ್ಟಿಕ್ ಮುಕ್ತವಾಗಿಸಲು ಮುಂದಾಗಬೇಕಿದ್ದ ಅಧಿಕಾರಿಗಳಲ್ಲಿ ಸಹಮತವಿಲ್ಲದೇ ಇರುವುದು ಅನುಷ್ಠಾನಕ್ಕೆ ದೊಡ್ಡ ಬಂಡೆಯಂತೆ ಆಗಿದೆ.
ಇಚ್ಛಾಶಕ್ತಿ ಕೊರತೆ: ಮೇ ತಿಂಗಳಲ್ಲಿ ನಡೆದ ಸಭೆ ನಡೆಯಲು ರಾಜ್ಯ ಸರ್ಕಾರ ನೀಡಿದ ಸೂಚನೆ ಮೇಲೆ ಸಭೆ ನಡೆಸಿ ಸಭೆಯಲ್ಲಿನ ನಡಾವಳಿಗಳನ್ನು ರಾಜ್ಯದ ಮಟ್ಟದ ಇಲಾಖೆಗೆ ಕೈತೊಳೆದುಕೊಂಡಿತೆ ಹೊರತು ಪ್ಲಾಸ್ಟಿಕ್ ಮುಕ್ತಗೊಳಿಸಲು ಯಾರೊಬ್ಬರಿಗೂ ಇಚ್ಛಾ ಶಕ್ತಿ ಇಲ್ಲದಿರುವುದು ಕಾರಣವೆಂದು ಹೇಳಲಾಗುತ್ತಿದೆ.
ಮಿತಿ ಮೀರಿದ ಪ್ಲಾಸ್ಟಿಕ್ ಕಸ: ಪ್ರಸ್ತುತ ಪಟ್ಟಣದ ಯಾವ ಭಾಗದಲ್ಲಿ ನೋಡಿದರೂ ಕಸ ಕಡ್ಡಿ ಪ್ಲಾಸ್ಟಿಕ್‌ನಿಂದ ತಾಂಡವವಾಡುತ್ತಿದೆ. ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿರುವ ಪುರಸಭೆ ಇಬ್ಬರು ರಾಯಭಾರಿಗಳನ್ನು ಆಯ್ಕೆ ಮಾಡಿಕೊಂಡು ಪಟ್ಟಣವನ್ನು ಸ್ವಚ್ಛ ಪಟ್ಟಣ ವಾಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ಆದರೆ ಪಟ್ಟಣ ವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಪುರಸಭೆ ಪಟ್ಟಣದ ಸಂಘ ಸಂಸ್ಥೆಗಳನ್ನು ಸೇರಿಸಿಕೊಳ್ಳದೇ ಇರುವುದು ಮತ್ತು ಪಟ್ಟಣದ ವರ್ತಕರು ಹಾಗೂ ಹೋಟೇಲ್ ಕ್ಯಾಂಟಿನ್‌ಗಳು ಮಾತ್ರ ಪುರಸಭೆಯ ನೀತಿ ನಿಯಮ ಗಳಿಗೆ ಸ್ಪಂದಿಸದೆ ಇರುವುದು ಯೋಜನೆ ಕೈಗೂಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
● ರಾಧಾಕೃಷ್ಣ