Advertisement

ಪ್ಲಾಸ್ಟಿಕ್‌ ಧ್ವಜ ಬಳಕೆ ತಡೆ ಜಾಗೃತಿ

11:59 AM Aug 13, 2017 | |

ಹುಬ್ಬಳ್ಳಿ: ಇಲ್ಲಿನ ಲೀಡರ್ ಎಕ್ಸಲರೇಟಿಂಗ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ ಮತ್ತು ದೇಶಪಾಂಡೆ ಚೈತನ್ಯ ಫೆಲೋಶಿಪ್‌ ತರಬೇತಿ ಕಾರ್ಯಕ್ರಮದಡಿ ಸ್ವಾತಂತ್ರ್ಯದಿನಾಚರಣೆಯಂದು ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಬಳಕೆ ಬದಲಾಗಿ ನೂಲಿನಿಂದ ತಯಾರಿಸಿದ ಧ್ವಜ ಬಳಕೆ ಮಾಡುವಂತೆ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಿದರು. 

Advertisement

ಸಂಸ್ಥೆಯ ಸಹ ನಿರ್ದೇಶಕ ಗುರನಗೌಡ ಕುರಗುಂದ ಮಾತನಾಡಿ, ವಿಶೇಷ ಸಂಸ್ಕೃತಿ, ಶಿಸ್ತು ಮತ್ತು ಬದ್ಧತೆಯ ಪ್ರತೀಕವಾದ ಭಾರತ ತನ್ನ ಏಕತಾ ಮನೋಭಾವದಿಂದ ಜಗತ್ತೇ ನಮ್ಮತ್ತ ನೋಡುವಂತೆ ಮಾಡುತ್ತಿದೆ. ಇಂತಹ ದೇಶದ ರಾಷ್ಟ್ರ ಧ್ವಜವನ್ನು ಗೌರವ ಮನೋಭಾವನೆಯಿಂದ ನಾವೆಲ್ಲರೂ ಕಾಣಬೇಕು ಎಂದರು.  

ಪ್ಲಾಸ್ಟಿಕ್‌ ಧ್ವಜಗಳನ್ನು ದಿನಾಚರಣೆ ನಂತರ ಎಲ್ಲೆಂದರಲ್ಲಿ ಬಿಸಾಡಿ ಬಿಡುತ್ತಾರೆ. ಹಾಗೆ ಮಾಡುವುದರಿಂದ ನಮ್ಮ ದೇಶದ ಘನತೆ ಮಣ್ಣು ಪಾಲಾದಂತೆ. ಆದ್ದರಿಂದ ಎಲ್ಲರೂ ಪ್ಲಾಸ್ಟಿಕ್‌ ಧ್ವಜದ ಬಳಕೆ ಮಾಡುವ ಬದಲಾಗಿ ನೂಲಿನಿಂದ ತಯಾರಿಸಿದ ಧ್ವಜದ ಬಳಕೆ ಮಾಡಬೇಕು ಎಂದರು. 

ಈ ಸಂದರ್ಭದಲ್ಲಿ 60 ವಿದ್ಯಾರ್ಥಿಗಳ ನಾಲ್ಕು ತಂಡಗಳ  ಮೂಲಕ ನಗರದ ವಿವಿಧ ಬಡಾವಣೆ ಮತ್ತು ಶಾಲೆಗಳಿಗೆ ತೆರಳಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಬಳಸದಂತೆ ಮನವಿ ಮಾಡಲಾಯಿತು. ಸಂಸ್ಥೆಯ ಬಸವರಾಜ ಕೆ., ಸಂತೋಷ ಬಿರಾದಾರ, ಮಲ್ಲಿಕಾರ್ಜುನ ಅಂಬಲಗಿ, ಶ್ರೀನಿಧಿ, ಸುನೀಲ, ಸ್ವಾತಿ, ಹನುಮಕ್ಕ, ಜಗದೀಶ, ರಾಜು, ಯೋಗೇಶ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next