ರಾಜಕೋಟ್: ಗುಜರಾತ್ ನ ರಾಜಕೋಟ್ ನಲ್ಲಿ ಗರ್ಬಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದ ಘಟನೆ ನಡೆದಿದೆ. ಆದರೆ ಬಾಟಲಿ ಅವರ ತಲೆಯ ಮೇಲೆ ಹಾದುಹೋಯಿತು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಭಾನುವಾರ ಹೇಳಿದ್ದಾರೆ.
ನವರಾತ್ರಿ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಶನಿವಾರ ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಘಟನೆ ನಡೆದಿದೆ. ವೀಡಿಯೊದಲ್ಲಿ ಭಾಗವಹಿಸುವವರತ್ತ ಕೈ ಬೀಸುತ್ತಾ ಕೇಜ್ರಿವಾಲ್ ನಡೆಯುವಾಗ ಹಿಂದಿನಿಂದ ಬಾಟಲಿ ಎಸೆದಿರುವುದು ದಾಖಲಾಗಿದೆ.
ದೆಹಲಿ ಸಿಎಂ ಅವರು ಭದ್ರತಾ ಅಧಿಕಾರಿಗಳು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ನಡೆದರು. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:ಪಕ್ಷವನ್ನು ಬಲಪಡಿಸಲೆಂದೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೇನೆ: ಖರ್ಗೆ
“ಬಾಟಲ್ ಸ್ವಲ್ಪ ದೂರದಿಂದ ಎಸೆದಿದೆ, ಅದು ಕೇಜ್ರಿವಾಲ್ ಅವರ ತಲೆಯ ಮೇಲೆ ಹಾದುಹೋಯಿತು, ಬಾಟಲಿಯನ್ನು ಕೇಜ್ರಿವಾಲ್ ಮೇಲೆ ಎಸೆದಿದೆ ಎಂದು ತೋರುತ್ತದೆ, ಆದರೆ ಇದನ್ನು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಪೊಲೀಸರನ್ನು ಸಂಪರ್ಕಿಸುವ ಅಗತ್ಯವಿಲ್ಲ” ಎಂದು ಎಎಪಿಯ ಮಾಧ್ಯಮ ಸಂಯೋಜಕ ಸುಕನರಾಜ್ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಅರವಿಂದ ಕೇಜ್ರಿವಾಲ್ ಶನಿವಾರದಿಂದ ಎರಡು ದಿನಗಳ ಭೇಟಿ ನೀಡಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಅವರಿಗೆ ಸಾಥ್ ನೀಡಿದ್ದಾರೆ.