Advertisement

ಏಕ ಬಳಕೆ ಪ್ಲಾಸ್ಟಿಕ್‌ ಮಾರಾಟ: ದಂಡಾಸ್ತ್ರಕ್ಕೆ  ಮುಂದಾದ ಪಾಲಿಕೆ

12:36 PM Jul 04, 2022 | Team Udayavani |

ಮಹಾನಗರ: ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತೀ ಆರು ವಾರ್ಡ್‌ ಗೊಂದು ತಂಡ ರಚನೆ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ನಗರದ ವ್ಯಾಪ್ತಿ ಜು. 1ರಿಂದ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ನಿಷೇಧ ಹೇರಿ ಮಹಾನಗರ ಪಾಲಿಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕಾರ್ಯಾಚರಣೆ ನಡೆ ಸಲು ಪ್ರತೀ ಆರು ವಾರ್ಡ್‌ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗಿದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತ, ಮಲೇರಿಯಾ ಮೇಲ್ವಿಚಾರಕರು, ಕಂದಾಯ ಅಧಿಕಾರಿ ಸಹಿತ ಒಂದು ತಂಡದಲ್ಲಿ ಐದು ಮಂದಿ ಅಧಿಕಾರಿಗಳು ಇರಲಿದ್ದಾರೆ.

ಈ ತಂಡವು ನಗರದ ವಿವಿಧ ಭಾಗಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಅಂಗಡಿ ಮಾಲಕ ರಿಗೆ ಮತ್ತು ಸಾರ್ವಜನಿಕರಿಗೆಅರಿವು ಮೂಡಿಸುತ್ತದೆ. ಒಂದು ವೇಳೆ ಬಳಕೆ ಮಾಡಿದರೆ ದಂಡ ಪ್ರಯೋಗದ ಜತೆ ಪ್ಲಾಸ್ಟಿಕ್‌ಗಳನ್ನು ವಶಪಡಿಸಿ ಕೊಳ್ಳಲು ನಿರ್ಧರಿಸಿದೆ. ಬಳಕೆ ಪುನರಾವರ್ತ ನೆಯಾದರೆ ದುಬಾರಿ ದಂಡದ ಜತೆಗೆ ಪರವಾನಿಗೆ ರದ್ದುಗೊಳಿಸಲು ನಿರ್ಧಾರವನ್ನೂ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಈ ತಂಡದಿಂದ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಶನಿವಾರ ಕಾವೂರು, ಪಡೀಲು, ಬಿಜೈ, ಕಾಪಿಕಾಡ್‌ ಮುಂತಾದ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡು ತ್ತಿದ್ದ ಅಂಗಡಿಗಳ ಮೇಲೆ ಕಾರ್ಯಾ ಚರಣೆ ನಡೆಸಿದೆ. ಒಟ್ಟು 25 ಕೆ.ಜಿ. ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ 3,600 ರೂ. ದಂಡ ವಿಧಿಸಿದ್ದಾರೆ.

ಯಾವೆಲ್ಲ ಉತ್ಪನ್ನಕ್ಕೆ ಹೆಚ್ಚುವರಿ ನಿಷೇಧ?

ಪಾಲಿಕೆ ವಾಪ್ತಿಯಲ್ಲಿ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧ ಜಾರಿಯಲ್ಲಿದೆ. ಅದರ ಜತೆಗೆ ಇಯರ್‌ ಬಡ್‌, ಬಲೂನುಗಳಿಗೆ ಬಳಸುವ ಪ್ಲಾಸ್ಟಿಕ್‌ ಸ್ಟಿಕ್‌, ಧ್ವಜ, ಕ್ಯಾಂಡಿ ಸ್ಟಿಕ್‌ಗಳು, ಐಸ್‌ ಕ್ರೀಮ್‌ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸೈರೀನ್‌ (ಥರ್ಮಕೋಲ್‌), (ಬಿ) ಪ್ಲಾಸ್ಟಿಕ್‌ ಪ್ಲೇಟ್‌, ಕಪ್‌ ಮತ್ತು ಲೋಟ ಫೋರ್ಕ್‌, ಚಮಚ, ಚಾಕು, ಟ್ರೇ ಗಳಂತಹ ಕಟ್ಲರಿ, ಸ್ವೀಟ್‌ ಬಾಕ್ಸ್‌ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್‌ μಲ್ಮ್, ಆಮಂತ್ರಣ ಪತ್ರ ಮತ್ತು ಸಿಗರೇಟ್‌ ಪ್ಯಾಕೆಟ್‌, 100 ಮೈಕ್ರಾನ್‌ ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌, ಪ್ಲಾಸ್ಟಿಕ್‌ ಸ್ಟಿರರ್‌ ಗಳನ್ನು ಹೆಚ್ಚುವರಿಯಾಗಿ ನಿಷೇಧ ಮಾಡಲಾಗಿದೆ.

Advertisement

ದಂಡ ವಿಧಿಸಿ ಎಚ್ಚರಿಕೆ

ಸರಕಾರದ ಆದೇಶವನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆವತಿಯಿಂದ ಎಲ್ಲ ಅಂಗಡಿ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದ್ದೇವೆ. ವಿವಿಧ ಪ್ರದೇಶದಲ್ಲಿ ಮಳಿಗೆಗಳಿಗೆ ತೆರಳಿ ಪರಿಶೀಲಿಸಿದ್ದೇವೆ. ಪ್ರಥಮ ಬಾರಿ ಉಲ್ಲಂಘನೆ ನಡೆಸಿದವರಿಗೆ 200 ರೂ.ದಂಡ ವಿಧಿಸಿ ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತಪ್ಪು ಪುನರಾವರ್ತನೆ ಆದಲ್ಲಿ ಗರಿಷ್ಠ 20 ಸಾ.ರೂ ದಂಡ, ಅಂಗಡಿ ಪರವಾನಿಗೆ ರದ್ದಾಗುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರು ಇದೀಗ ಲಭ್ಯ ಇರುವ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೆಂದು ಪಾಲಿಕೆ ಪರಿಸರ ಅಭಿಯಂತ ಸುಶಾಂತ್‌ ತಿಳಿಸಿದ್ದಾರೆ.

ಕಾರ್ಯಾಚರಣೆ ಆರಂಭ: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿರುವುದನ್ನು ತಡೆಯುಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ಆರು ವಾರ್ಡ್‌ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗಿದೆ. ಅವರು ನಗರದ ಅಂಗಡಿ ಸಹಿತ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಜಾಗೃತಿ ಮೂಡಿಸುತ್ತಾರೆ. ನಿಯ ಉಲ್ಲಂಘಿಸಿದವರ ಮೇಲೆ ದಂಡ ಪ್ರಯೋಗಕ್ಕೂ ಮುಂದಾಗಿದ್ದೇವೆ. –ಶಬರೀನಾಥ್‌ ರೈ, ಪಾಲಿಕೆ ವಲಯ ಆಯುಕ್ತ

ಕಟ್ಟು ನಿಟ್ಟು ಪಾಲನೆ: ಪರಿಸರ ಮಾಲಿನ್ಯ ಅದರಲ್ಲೂ ಜಲ, ಭೂ ಮಾಲಿನ್ಯ ವುಂಟು ಮಾಡುತ್ತಿರುವ ಪ್ಲಾಸ್ಟಿಕ್‌ ಉತ್ಪಾದನೆ ಸ್ಥಗಿತ, ಮಾರಾಟವನ್ನೂ ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಮನೆಯಿಂದಲೇ ಕೈ ಚೀಲ ಬಳಸುವುದನ್ನು ರೂಢಿಸಿಕೊಂಡು ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಬೇಕು. –ಕೀರ್ತಿ ಕುಮಾರ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next