Advertisement
ಹೌದು ಕೋವಿಡ್-19 ದಿಂದ ಬೇಸತ್ತಿರುವ ವಿಶ್ವಕ್ಕೆ ಸಮಾಧಾನದ ಸುದ್ದಿಯೊಂದಿದೆ. ಅದೂ ಚೀನದಿಂದಲೇ. ಕೋವಿಡ್-19ಗೆ ತಕ್ಕ ಲಸಿಕೆ ಸಿದ್ಧವಾಗದಿದ್ದರೂ, ಅದರ ವಿರುದ್ದ ಸಮರ್ಥ ಹೋರಾಟ ರೂಪಿಸಿ ಜೀವವನ್ನುಳಿಸಿಕೊಳ್ಳಬಲ್ಲ ರೋಗ ನಿರೋಧಕ ವ್ಯವಸ್ಥೆಯೊಂದನ್ನು ಚೀನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ವಿಜ್ಞಾನಿಗಳು ರೋಗದಿಂದ ಗುಣಮುಖರಾಗಿರುವ ‘ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ರಕ್ತ ಮಾದರಿ ಸಂಗ್ರಹಿಸಿ ಅದರಲ್ಲಿನ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ಒಂದುಗೂಡಿಸಿ ಸೋಂಕಿತ ರೋಗಿಗಳಿಗೆ ನೀಡಲುದ್ದೇಶಿಸಿದ್ದಾರೆ. ಆ ಮೂಲಕ ಅವರಲ್ಲೂ ರೋಗ ನಿರೋಧ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದ್ದಾರೆ. ಆರಂಭಿಕ ಪ್ರಯೋಗ
ಕೋವಿಡ್-19 ಸೋಂಕಿನಿಂದ ಸಂಪೂರ್ಣವಾಗಿರುವ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಪಡೆದು ಮೊದಲ ಹಂತದ ಪರೀಕ್ಷಾರ್ಥವಾಗಿ ಚೀನಾದ ವಿಜ್ಞಾನಿಗಳು ವೆಂಟಿಲೇಟರ್‌ನಲ್ಲಿನ ಐವರು ರೋಗಿಗಳಿಗೆ ಮೇಲೆ ಪ್ರಯೋಗಿಸಿದ್ದಾರೆ. ಇದು ಫಲಪ್ರದವಾಗಿದೆ ಎಂಬ ವರದಿಗಳು ಬರುತ್ತಿವೆ.
Related Articles
ಇದರಿಂದ ಸಾವಿನ ಸಂಖ್ಯೆಗೆ ಕಡಿವಾಣ ಬೀಳಲಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ವ್ಯವಸ್ಥೆ ಬಲಗೊಳ್ಳಲಿದೆ. ಇದು ರೋಗಿಗಳನ್ನು ವೆಂಟಿಲೇಟರ್‌ಗಳಿಂದ ದೂರವಿಡುವಷ್ಟರ ಮಟ್ಟಿಗೆ ನೆರವಾಗುತ್ತದೆ. ಅಂದರೆ ಕೃತಕ ಉಸಿರಾಟವಿಲ್ಲದೆ ರೋಗಿಗಳು ಬದುಕಬಹುದಾಗಿದೆ. ಇದರಿಂದ ಸಾವಿಗೆ ಬಲಿಯಾಗುತ್ತಿರುವವರ ಸಂಖ್ಯೆಗೆ ಕಡಿವಾಣ ಬೀಳಲಿದೆ.
Advertisement
ಸ್ಪಾನಿಶ್ ಫ್ಲೂನ ಪ್ರಯೋಗಶತಮಾನದ ಹಿಂದೆ ಅಂದರೆ 1918ರಲ್ಲಿ ಸಾವಿಗೆ ಕಾರಣವಾದ ಸಾಂಕ್ರಾಮಿಕ ರೋಗ ಸ್ಪಾನಿಶ್ ಫ್ಲೂ ವಿರುದ್ಧವೂ ಇದೇ ತಂತ್ರ ಬಳಸಿ ರೋಗಿಗಳನ್ನು ಉಳಿಸಲಾಗಿತ್ತು. ಪ್ಲಾಸ್ಮಾ ದಾನಿಗಳ ನಿರೀಕ್ಷೆಯಲ್ಲಿ ವಿಜ್ಞಾನಿಗಳು ಕೋವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ “ಹೈಪರ್‌ಇಮ್ಯೂನ್’ ವ್ಯಕ್ತಿಗಳು ಬೇಕಾಗಿದೆ. ಅಂತಹವರನ್ನು ಗುರುತಿಸಿ, ಅವರಿಂದ ಪ್ಲಾಸ್ಮಾ ಪಡೆದು ಚಿಕಿತ್ಸೆ ಮುಂದುವರಿಸಲಾಗುತ್ತದೆ. ಇತಿಹಾಸದಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ದಾಖಲೆ ಇದೆ.