Advertisement

ದಿಲ್ಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್‌: ಕೇಜ್ರಿವಾಲ್‌

12:50 AM Jun 30, 2020 | Sriram |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್‌ ತೆರೆ ಯುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಘೋಷಿಸಿದ್ದಾರೆ.

Advertisement

ಇನ್ನೆರಡು ದಿನಗಳಲ್ಲಿಯೇ ಸರಕಾರಿ ಸ್ವಾಮ್ಯದ ಇನ್‌ಸ್ಟಿಟ್ಯೂಟ್‌ ಆಫ್ ಲಿವರ್‌ ಆ್ಯಂಡ್‌ ಬಿಲಿಯರಿ ಸೈನ್ಸಸ್‌ನಲ್ಲಿ ಪ್ಲಾಸ್ಮಾ ಬ್ಯಾಂಕ್‌ ಆರಂಭಗೊಳ್ಳಲಿದೆ. ಸೋಂಕು ಪೀಡಿತನಿಗೆ ಪ್ಲಾಸ್ಮಾ ಅಗತ್ಯವಿದ್ದರೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಈ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದಿದ್ದಾರೆ.

ಪ್ಲಾಸ್ಮಾ ದಾನಕ್ಕೆ ಮನವಿ
ಪ್ಲಾಸ್ಮಾ ಬ್ಯಾಂಕ್‌ ಯಶಸ್ವಿಯಾಗಬೇಕಾದರೆ ಕೋವಿಡ್-19 ದಿಂದ ಗುಣ ಹೊಂದಿದವರು ಪ್ಲಾಸ್ಮಾ ದಾನಕ್ಕೆ ಮುಂದೆ ಬರಬೇಕು. ಹಾಗಾಗಿ ಪ್ಲಾಸ್ಮಾ ನೀಡಲು ಮುಂದೆ ಬನ್ನಿ ಎಂದು ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

ಕೋವಿಡ್-19 ಚಿಕಿತ್ಸೆಗೆ ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆ ದೇಶದಲ್ಲಿ ಇದೇ ಮೊದಲು. ಸೋಂಕಿನ ಅಂತಿಮ ಹಂತದಲ್ಲಿರುವ, ವೆಂಟಿಲೇಟರ್‌ ಮೂಲಕ ಉಸಿರಾಡುತ್ತಿರುವವರನ್ನು ಇದರಿಂದ ರಕ್ಷಿಸಲು ಸಾಧ್ಯವಾಗದು. ಮಧ್ಯಮ ಪ್ರಮಾಣದ ಸೋಂಕುಪೀಡಿತರಿಗೆ ಇದರಿಂದ ಅನುಕೂಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಜಗತ್ತಿನ ಬೃಹತ್‌ ಪ್ಲಾಸ್ಮಾ ಯೋಜನೆ ಆರಂಭ
ಪ್ಲಾಸ್ಮಾ ಥೆರಪಿಯ ಪ್ರಾಯೋ ಗಿಕ ಯೋಜನೆ ಯೊಂದಕ್ಕೆ ಮಹಾ ರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಸೋಮವಾರ ಚಾಲನೆ ನೀಡಿ ದ್ದಾರೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಟ್ಟದ ಪ್ರಯೋಗ ಇದು ಎಂದು ಅಲ್ಲಿನ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಹೇಳಿದೆ.

Advertisement

ಕಾನ್ವಲಸೆಂಟ್‌ ಪ್ಲಾಸ್ಮಾ ಥೆರಪಿಯನ್ನು ಪ್ಯಾಸಿವ್‌ ಆ್ಯಂಟಿಬಾಡಿ ಥೆರಪಿ ಎಂದೂ ಕರೆಯುತ್ತಾರೆ. ಮಹಾ ರಾಷ್ಟ್ರದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಸುಮಾರು 500 ರೋಗಿಗಳ ಜೀವವನ್ನು ಉಳಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ. ವೈದ್ಯಕೀಯ ಶಿಕ್ಷಣ ಇಲಾಖೆ ಯಡಿ ಬರುವ 17 ಮೆಡಿಕಲ್‌ ಕಾಲೇಜುಗಳಲ್ಲಿ ಈ ಪ್ರಯೋಗ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಎಲ್ಲ ರೋಗಿಗಳಿಗೂ 200 ಮಿ.ಲೀ.ಗಳ ಎರಡು ಡೋಸ್‌ ಪ್ಲಾಸ್ಮಾ ವನ್ನು ಉಚಿತ ವಾಗಿ ನೀಡಲಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ “ಪ್ರಾಜೆಕ್ಟ್ ಪ್ಲಾಟಿನಾ’ ಎಂದು ಹೆಸರಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next