ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವುದರ ಮೂಲಕ ಪರಿಸರದಲ್ಲಿ ಸ್ವತ್ಛತೆ ಕಾಪಾಡಬೇಕು. ಶುಚಿ ಪರಿಸರವಿಲ್ಲದೆ ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.
Advertisement
ಇಂದಿನ ಆಧುನೀಕರಣದ ತಾಂತ್ರಿಕ ವ್ಯವಸ್ಥೆಯಿಂದ ಪರಿಸರ ಕುಲುಷಿತವಾಗಿ ಸ್ವತ್ಛ ಗಾಳಿ, ಮಳೆಯಿಲ್ಲದೆ ಮನುಷ್ಯನು ಅನೇಕ ತೊಂದರೆ ಅನುಭವಿಸುತ್ತಿದ್ದಾನೆ. ಜಾಗತಿಕ ತಾಪಮಾನದಲ್ಲಿ ಏರು ಪೇರು ಉಂಟಾಗಿರುವ ಪ್ರಯುಕ್ತ ಅನೇಕ ಜನ-ಜಾನುವಾರು ಸಾಯುವಂತಹ ದುಸ್ಥಿತಿ ಎದುರಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಮನುಷ್ಯನೇ ಹೊರತು ಬೇರಾರು ಅಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.ಗಿಡಮರಗಳಿಲ್ಲದೆ ಪರಿಸರ ಸೊರಗಿ ಹೋಗಿದೆ. ಜೀವ ಸಂಕುಲವಿಲ್ಲದೆ ಕಾಡುಗಳು ಸೌಂದರ್ಯವನ್ನು ಕಳೆದು ಕೊಂಡಿವೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಆಗಿರುವುದರಿಂದ ಅವುಗಳಿಂದ ಬಿಡುಗಡೆ ಆಗುವ ವಿಷಾನಿಲ ವಾತಾವರಣವನ್ನು ಸೇರಿ ಗಾಳಿಯನ್ನು ಮಲಿನಗೊಳಿಸುತ್ತಿವೆ.