Advertisement

ರುದ್ರಭೂಮಿಯಲ್ಲಿ ಅರಣ್ಯ ಸಂವರ್ಧನೆ

09:25 AM Jul 27, 2017 | Team Udayavani |

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ರೋಟರಿ ಕ್ಲಬ್‌ ಬೆಳ್ತಂಗಡಿ ಹಾಗೂ ಲಾ„ಲ ಗ್ರಾ. ಪಂ. ಇದರ ಆಶ್ರಯದಲ್ಲಿ ಲಾ„ಲ ಗ್ರಾ. ಪಂ. ತ್ಯಾಜ್ಯ ನಿರ್ವಹಣ ಘಟಕದ ಆವರಣ ಹಾಗೂ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅರಣ್ಯ ಸಂವರ್ಧನಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪ್ರಗತಿವನ ನಾಟಿ ಹಾಗೂ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.

Advertisement

ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯ‚ಕ್ಷ ಸುಧೀರ್‌ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಣ್ಯಗಳನ್ನು ಉಳಿಸುವುದು ನಮ್ಮ ಧ್ಯೇಯವಾಗಬೇಕು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಇಂತಹ ಸಮಾಜಮುಖೀ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ಇದಕ್ಕೆ ಬೆಳ್ತಂಗಡಿ ರೋಟರಿ ಕ್ಲಬ್‌ ಎಂದಿಗೂ ಕೈಜೋಡಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್‌ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳ ಅರಿವು ಎಲ್ಲರಿಗೂ ಆಗುತ್ತಿದೆ. ವನ ಸಂವರ್ಧನೆಯ ಮೂಲಕ ಪ್ರಕೃತಿಯ ಎಲ್ಲಾ ಜೀವರಾಶಿಗಳ ಬಗ್ಗೆ ನಾವು ಕಾಳಜಿ ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಈ ಕಾರ್ಯಕ್ರಮವನ್ನು ಮಾಡಲು ಎಂದಿಗೂ ಆಸಕ್ತವಾಗಿರುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾ. ಪಂ. ಸದಸ್ಯ ಸುಧಾಕರ ಬಿ.ಎಲ್‌., ಲಾೖಲ ಗ್ರಾ. ಪಂ. ಉಪಾಧ್ಯಕ್ಷ ಗಿರೀಶ್‌ ಡೋಂಗ್ರೆ, ಲಾೖಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ ಸ್ವಾಗತಿಸಿ, ಪ್ರಕಾಶ್‌ ಶೆಟ್ಟಿ ನೊಚ್ಚ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next