ವಿಟ್ಲ: ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ವಿಟ್ಲದ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ನರಸಿಂಹ ಬಲ್ಲಾಳ್ ಅವರು ಗಿಡ ವಿತರಿಸಿ, ಉದ್ಘಾಟಿಸಿದರು. ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ, ಪ್ರಕೃತಿದತ್ತವಾದ ಸಂಪನ್ಮೂಲಗಳಾದ ಜಲ, ನೆಲ, ವಾಯು, ಅರಣ್ಯಗಳು ಭೂಮಿಯಲ್ಲಿರುವ ಜೀವಿ ಗಳಿಗೆ ಅವಶ್ಯವಾಗಿವೆ. ಪರಿಸರ ನಾಶಕ್ಕೆ ಭೂಮಿಯಲ್ಲಿರುವ ಯಾವ ಜೀವಿಯೂ ಕಾರಣವಲ್ಲ. ಮನುಷ್ಯರಿಂದಲೇ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದವು ತಿಳಿಸಿದರು.
ಜೀವ ಜಲ ಸಂರಕ್ಷಣೆ: ಭೂಮಿಯಲ್ಲಿರುವ ಜಲವನ್ನು ಸಂರಕ್ಷಣೆ ಮಾಡಬೇಕು. ಭೂಮಿಯಲ್ಲಿ ಜಲ ಮಟ್ಟ ಕುಸಿಯುತ್ತಿದೆ. ಅಂತರಜಲ ಹೆಚ್ಚಿಸಲು ಭೂಮಿಗೆ ಬೀಳುವ ಮಳೆ ನೀರನ್ನು ಭೂಮಿಗೆ ಇಂಗಿಸುವ ವಿಧಾನಗಳಾದ ಇಂಗು ಗುಂಡಿ, ಕೃಷಿ ಹೊಂಡ, ಮಳೆಕೊಯ್ಲು, ಕೊಳವೆಬಾವಿ ಮರುಪೂರಣ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮಣ್ಣು ಸಂರಕ್ಷಣೆ: ಪ್ರಕೃತಿದತ್ತವಾಗಿ ನೀಡಿದ ಫಲವತ್ತಾದ ಮಣ್ಣನ್ನು ನಾವು ಬರಡು ಮಾಡುತ್ತಿದ್ದೇವೆ. ಆಧುನಿಕ ಕೃಷಿ ಪದ್ಧತಿಯಲ್ಲಿರೈತರುರಾಸಾಯನಿಕಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿದ್ದು, ಅದರ ಬದಲಾಗಿ ಸಾವಯವ ಗೊಬ್ಬರ ಬಳಕೆ ಮಾಡಬೇಕು ಹಾಗೂ ಮಣ್ಣಿನ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು. ವಿಟ್ಲ ವಲಯದ ಮೇಲ್ವಿಚಾರಕಿ ಪ್ರೇಮಾ ಅವರುಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ತನಿಯಪ್ಪ ಸ್ವಾಗತಿಸಿ, ಯಜ್ಞೆಶ್ವರ ಅವರು ವಂದಿಸಿದರು. ಸೇವಾಪ್ರತಿನಿಧಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.