ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 163 ಕಿ.ಮೀ ರಸ್ತೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಕಾಮಗಾರಿಗಳು ಅನುಮೋದನೆಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ದ.ಕ ಲೋಕಸಭಾ ಕ್ಷೇತ್ರವು ಪ್ರಥಮ ಸ್ಥಾನದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕನ್ಯಾನದಿಂದ ನೆಕ್ಕರೆಕಾಡು ಪರಿಶಿಷ್ಟ ಜಾತಿ ಕಾಲೊನಿಯನ್ನು ಸಂಪರ್ಕಿಸುವ ಸುಮಾರು 6.70 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಗೋಳ್ತಮಜಲುನಿಂದ ಮಂಚಿಕಟ್ಟೆವರೆಗಿನ ಸುಮಾರು 10.73 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬಂಟ್ವಾಳ ತಾಲೂಕಿನ ತಾಳಿತ್ತಬೆಟ್ಟುವಿನಿಂದ ಚೇಳೂರುವರೆಗಿನ ಸುಮಾರು 6.46 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೊಳ್ಪಾದೆಯಿಂದ ಮೂಲೆವರೆಗಿನ ಸುಮಾರು 10.17 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ.
ಬೆಳ್ತಂಗಡಿ ತಾಲೂಕಿನ ಬೀಜದಡ್ಡಿಯಿಂದ ಪರ್ಪಿಕಲ್ಲುವರೆಗಿನ ಸುಮಾರು 12.51 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲೂಕಿನ ಪರಪ್ಪುನಿಂದ ಅರ್ದುಪ್ರಳವರೆಗಿನ ಸುಮಾರು 5.88 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲೂಕಿನ ಲಾಯಿಲದಿಂದ ಕೋಟಿಕಟ್ಟೆವರೆಗಿನ ಸುಮಾರು 8.81 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಕುಪ್ಪೆಟ್ಟಿವರೆಗಿನ ಸುಮಾರು 25.01 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ.
ಮಂಗಳೂರು ತಾಲೂಕಿನ ಕಾಯರ್ಪುಂಡುನಿಂದ ಕೆಸರಗದ್ದವರೆಗಿನ ಸುಮಾರು 5.04 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಮುಂಚಿಗುಡ್ಡೆಯಿಂದ ನಿಡ್ಡೋಡಿವರೆಗಿನ ಸುಮಾರು 5.66 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ.
ಪುತ್ತೂರು ತಾಲೂಕಿನ ಈಶ್ವರಮಂಗಲದಿಂದ ಸುಳ್ಯಪದವುವರೆಗಿನ ಸುಮಾರು 6.15 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಬರೆಪ್ಪಾಡಿ ಪಳ್ಳತ್ತಾರು ಕುನ್ಕ್ಯ (ಪೆರುವಾಜೆ) ವರೆಗಿನ ಸುಮಾರು 7.56 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಈಶ್ವರಮಂಗಲ ಕಟ್ಟಕ್ಕಾನ (ಮೈಂದಿನಡ್ಕ) ದೊಡ್ಡಕಾನ – ಕುಕ್ಕುಪುಣಿವರೆಗಿನ ಸುಮಾರು 8.68 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಪುತ್ತೂರು ತಾಲೂಕಿನ ಕಕ್ಕಾರುನಿಂದ ಆನಡ್ಕ ಮೂಲಕ ಕರ್ಣಪಾಡಿವರೆಗಿನ ಸುಮಾರು 12.31 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ.
ಸುಳ್ಯ ತಾಲೂಕಿನ ಪೆರಾಲ್‌ನಿಂದ ಅಜ್ಜಾವರದ ಮೂಲಕ ನರ್ಕೋಡುವರೆಗಿನ ಸುಮಾರು 7.22 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಸುಳ್ಯ ತಾಲೂಕಿನ ಆಲೆಟ್ಟಿಯಿಂದ ಕೋಟೆಕಲ್ಲು ಮೂಲಕ ಎಳಿಕ್ಕಲವರೆಗಿನ ಸುಮಾರು 6.90 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಕುಟೇಲುನಿಂದ ಆಲೆಟ್ಟಿಯಿಂದ ಬದ್ದಡ್ಕ ಮೂಲಕ ಕೂರ್ನಡ್ಕವರೆಗಿನ ಸುಮಾರು 8.23 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ, ಸುಳ್ಯ ತಾಲೂಕಿನ ಭೋಗಾಯನ ಕೆರೆಯಿಂದ ಎಣ್ಣೆಮಜಲು ಮೂಲಕ ಬೀದಿಗುಡ್ಡೆ ಅಡ್ಡಬೈಲುವರೆಗಿನ ಸುಮಾರು 9.70 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆಗೊಂಡಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.