ಬೆಂಗಳೂರು: ಸಿನೆಮಾಗಳ ಟಿವಿ ರೈಟ್ಸ್ ಪಡೆದುಕೊಂಡ ಚಾನೆಲ್‌ಗಳು ಅವುಗಳನ್ನು ಟಿವಿಯಲ್ಲಿ ಮಾತ್ರ ಪ್ರದರ್ಶಿಸುವ ಹಕ್ಕನ್ನು ಹೊಂದಿರುತ್ತವೆ.
ಆದರೆ, ಕೆಲವು ಚಾನೆಲ್‌ಗಳು ಅವುಗಳನ್ನು ನಿಯಮಬಾಹಿರವಾಗಿ ತಮ್ಮ ಒಟಿಟಿ ಪ್ಲಾಟ್‌ಫಾರ್ಮ್ ಗಳಲ್ಲೂ ಬಿಡುಗಡೆ ಮಾಡುತ್ತಿವೆ.
ಇದರಿಂದ ನಿರ್ಮಾಪಕರಿಗೆ ಮೋಸವಾಗುತ್ತಿದೆ ಎಂದು ಅನೇಕ ದೂರುಗಳು ನಿರ್ಮಾಪಕರ ಸಂಘಕ್ಕೆ ಬರುತ್ತಿವೆ.
ಇಲ್ಲಿಯವರೆಗೆ ಹೀಗೆ ಒಟಿಟಿಯಲ್ಲಿ ಪ್ರದರ್ಶನವಾಗುತ್ತಿದ್ದ ಸುಮಾರು 500ಕ್ಕೂ ಹೆಚ್ಚು ಸಿನೆಮಾಗಳ ಪ್ರದರ್ಶನಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಕನ್ನಡ ಸಿನೆಮಾಗಳಿಗೆ ತನ್ನದೇ ಆದ ಒಟಿಟಿ ವ್ಯವಸ್ಥೆ ಇಲ್ಲದ್ದರಿಂದ ನಿರ್ಮಾ ಪಕರು ಬೇರೆ ಬೇರೆ ಒಟಿಟಿ ಪ್ಲಾಟ್‌ಫಾರ್ಮ್ ಗಳನ್ನು ಅವಲಂಬಿಸುತ್ತಿದ್ದಾರೆ.
ಈ ಸನ್ನಿವೇಶವನ್ನು ಬಳಸಿ ಕೆಲವು ಒಟಿಟಿ ಪ್ಲಾಟ್‌ಫಾರ್ಮ್ ಗಳ ನಿರ್ಮಾಪಕರಿಗೆ ವಂಚಿಸುತ್ತಿವೆ. ಇದನ್ನು ಪರಿಹರಿಸಲು ನಿರ್ಮಾಪಕರ ಸಂಘದಿಂದಲೇ ಕನ್ನಡ ಸಿನೆಮಾಗಳ ಪ್ರದರ್ಶನಕ್ಕೆ ಪ್ರತ್ಯೇಕ ಒಟಿಟಿ ವ್ಯವಸ್ಥೆ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.