Advertisement

ಪ್ರತಿನಿಧಿಗಳಿಗೆ ಅರಿವಿದ್ದರೆ ಯೋಜನೆ ಜಾರಿ ಸಾಧ್ಯ

09:49 PM Jun 16, 2019 | Lakshmi GovindaRaj |

ಹುಣಸೂರು: ಪ್ರತಿಯೊಬ್ಬ ಜನಪ್ರತಿನಿಧಿ ಯೂ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿದುಕೊಂಡಿದ್ದಲ್ಲಿ ಮಾತ್ರ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಭೆ ನಡೆಸಿದರೂ ಜನಪ್ರತಿನಿಧಿಗಳೇ ನಿರುತ್ಸಾಹ ತೋರುತ್ತಿದ್ದಾರೆ ಎಂದು ಶಾಸಕ ಎಚ್‌.ವಿಶ್ವನಾಥ್‌ ವಿಷಾದಿಸಿದರು.

Advertisement

ನಗರದಲ್ಲಿ ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೇಂದ್ರ-ರಾಜ್ಯ ಪುರಸ್ಕೃತ ಯೋಜನೆಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯೋಜನೆಗಳ ಬಗ್ಗೆ ಜನಪ್ರತಿನಿ ಧಿಗಳು ಅಧಿ ಕಾರಿಗಳನ್ನು ಪ್ರಶ್ನಿಸಿದರೆ, ಜನಪ್ರತಿನಿಧಿ ಗಳನ್ನು ಜನರು ಪ್ರಶ್ನಿಸುತ್ತಾರೆ. ಪ್ರತಿನಿಧಿಗಳಾಗಿ ನೀವು ಎಲ್ಲವನ್ನೂ ತಿಳಿದಿರಬೇಕು. ಆದರೆ, ಬಹುತೇಕ ಪ್ರತಿನಿಧಿ ಗಳು ಮಾಹಿತಿ ಸಭೆಗೆ ಗೈರಾಗುವುದು ಸರಿಯಲ್ಲ ಎಂದರು.

ತಾಲೂಕಿನಲ್ಲಿ ನೀರಾವರಿ, ರಸ್ತೆ, ಚರಂಡಿ, ಒತ್ತುವರಿ, ಬರಗಾಲ ಸೇರಿ ಸಾಕಷ್ಟು ದೊಡ್ಡ ಸಮಸ್ಯೆಗಳೇ ಇದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವೂ ಸಾಕಷ್ಟು ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ಅನುದಾನ ಸದ್ಬಳಕೆ ಮಾಡಿಕೊಳ್ಳಿ: ತಾಪಂ ಇಒ ಸಿ.ಆರ್‌.ಕೃಷ್ಣಕುಮಾರ್‌ ಮಾತನಾಡಿ, ನರೇಗಾ ಯೋಜನೆಯಡಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬಹುದಾಗಿದೆ. ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಗಳಲ್ಲಿ ವೈಯಕ್ತಿಕ ಯೋಜನೆಗಳ ಜಾರಿಗೆ ಸಾಕಷ್ಟು ಅನುದಾನಗಳ ಲಭ್ಯವಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಅಧಿಕಾರಿಗಳಿಗೆ ತರಾಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಕೈಗಾರಿಕೆ, ಲೋಕೋಪಯೋಗಿ, ನೀರಾವರಿ ಇಲಾಖೆಗಳ ಯೋಜನೆಗಳನ್ನೊಳಗೊಂಡ ಯಾವುದೇ ಕರಪತ್ರ, ಮಾಹಿತಿ ಪತ್ರಗಳು ಪ್ರತಿಯೊಬ್ಬರಿಗೂ ನೀಡಿದ್ದ ಮಾಹಿತಿ ಕಿಟ್‌ನಲ್ಲಿ ಇರದಿದ್ದನ್ನು ಕಂಡು ಆಕ್ರೋಶಗೊಂಡ ಶಾಸಕರು, ಈ ಸಂಬಂಧಿಸಿದ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಈ ವೇಳೆ ಕಾರಣ ಹೇಳಲು ಹೊರಟ ಅ ಧಿಕಾರಿಯನ್ನು ತಡೆದು, ಸಬೂಬು ಹೇಳಬೇಡಿ, ಇಂತಹ ಪ್ರಕರಣ ಮತ್ತೆ ನಡೆಯಬಾರದು ಎಂದರು.

ಅರ್ಜಿ ಪರಿಶೀಲನೆಗೆ ಸಮಿತಿ ರಚನೆ: ತಹಶೀಲ್ದಾರ್‌ ಬಸವರಾಜು ಮಾತನಾಡಿ, ಸಾಲಮನ್ನಾ ಯೋಜನೆಗೆ ಒಳಪಡದ ರೈತರ ಅರ್ಜಿಗಳ ಪರಿಶೀಲನೆಗಾಗಿ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಸಹಕಾರ ಸಂಘಗಳ ಸದಸ್ಯರ ಒಟ್ಟು 3188 ಅರ್ಜಿಗಳು ಬಂದಿದ್ದು, ಈ ಪೈಕಿ 46 ಅರ್ಜಿ ಅನರ್ಹಗೊಳಿಸಿ ಉಳಿದವುಗಳಿಗೆ ಸೌಲಭ್ಯ ನೀಡಲು ಸೂಚಿಸಲಾಗಿದೆ. ಅಂತೆಯೇ ರಾಷ್ಟ್ರೀಕೃತ ಬ್ಯಾಂಕುಗಳ 1713 ಅರ್ಜಿಗಳ ಪೈಕಿ ಕೇವಲ 17 ಅರ್ಜಿಗಳನ್ನು ಮಾತ್ರ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಎಂ.ಬಿ.ಸುರೇಂದ್ರ, ಕಟ್ಟನಾಯ್ಕ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಅಧಿ ಕಾರಿಗಳು ಭಾಗವಹಿಸಿದ್ದರು.

76,58 ಕೋಟಿ ಸಾಲಮನ್ನಾ ಆಗಲಿದೆ: ರಾಜ್ಯ ಸರ್ಕಾರದ‌ ಸಾಲಮನ್ನಾ ಕಾರ್ಯಕ್ರಮದಡಿ ತಾಲೂಕಿನ 29 ಸಹಕಾರ ಸಂಘಗಳ ಒಟ್ಟು 8,659 ಅರ್ಹ ಫಲಾನುಭವಿಗಳನ್ನು ಯೋಜನೆಯಡಿ ಒಳಪಡಿಸಿದ್ದು, 76.58 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಈ ಪೈಕಿ ಈಗಾಗಲೇ 3500 ರೈತರ 16.5ಕೋಟಿ ರೂ. ಮೊತ್ತ ಸಾಲ ಮನ್ನಾ ಆಗಿದೆ ಎಂದು ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಗೋಪಾಲಯ್ಯ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next