Advertisement

Brazil ನಲ್ಲಿ ಭೀಕರ ದುರಂತ; ವಸತಿ ಪ್ರದೇಶದಲ್ಲಿ 62 ಜನರಿದ್ದ ವಿಮಾನ ಪತನ

10:53 AM Aug 10, 2024 | Team Udayavani |

ಸಾವೊ ಪಾವ್ಲೋ : ಬ್ರೆಝಿಲ್ ನ ಸಾವೊ ಪಾವ್ಲೋ ರಾಜ್ಯದ ವಿನ್ಹೆಡೊದ ವಸತಿ ಪ್ರದೇಶದಲ್ಲಿ 62 ಜನರನ್ನು ಹೊತ್ತ ವಿಮಾನವು ಶುಕ್ರವಾರ(ಆಗಸ್ಟ್ 9 ) ಪತನಗೊಂಡಿದೆ ಎಂದು ವಿಮಾನಯಾನ ಸಂಸ್ಥೆ VoePass ತಿಳಿಸಿದೆ.

Advertisement

ವಿಮಾನವು ಸಾವೊ ಪಾವ್ಲೋದ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.ವಿಮಾನದಲ್ಲಿ 58 ಪ್ರಯಾಣಿಕರು ಮತ್ತು 4 ಮಂದಿ ಸಿಬಂದಿ ಇದ್ದರು. ಅಪಘಾತಕ್ಕೆ ಕಾರಣ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

ದಕ್ಷಿಣ ಬ್ರೆಝಿಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ ದುರಂತದ ಕುರಿತು ಘೋಷಿಸಿ ಒಂದು ಕ್ಷಣ ಮೌನ ಆಚರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು, ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಮಿಲಿಟರಿ, ಪೊಲೀಸರು, ಅಗ್ನಿಶಾಮಕ ದಳದವರು, ಮತ್ತು ನಾಗರಿಕ ರಕ್ಷಣ ತಂಡಗಳನ್ನು ಅಪಘಾತದ ಸ್ಥಳಕ್ಕೆ ಕಳುಹಿಸಲಾಗಿದೆ. ಗ್ಲೋಬೋನ್ಯೂಸ್ ಪ್ರಸಾರ ಮಾಡಿದ ದೃಶ್ಯಾವಳಿಗಳು ದಟ್ಟವಾದ ಜನನಿಬಿಡ ವಸತಿ ಪ್ರದೇಶದಲ್ಲಿ ವಿಮಾನದಿಂದ ದೊಡ್ಡ ಜ್ವಾಲೆ ಮತ್ತು ಹೊಗೆ ಬರುತ್ತಿರುವುದನ್ನು ತೋರಿಸಿದೆ. ವಿಮಾನವು ಕೆಳಕ್ಕೆ ಉರುಳುತ್ತಿರುವುದನ್ನೂ ಸೆರೆಹಿಡಿಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next