ಕಾಠ್ಮಂಡು(ನೇಪಾಳ): ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಶೌರ್ಯ ಏರ್ ಲೈನ್ಸ್ ನ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 18 ಮಂದಿ ಸಜೀವವಾಗಿ ದಹನವಾಗಿದ್ದು, ಪೈಲಟ್ ಮಾತ್ರ ಬದುಕುಳಿದಿರುವ ಘಟನೆ ಬುಧವಾರ (ಜು.24) ನಡೆದಿದೆ ಎಂದು ವರದಿ ತಿಳಿಸಿದೆ.
ಕಾಠ್ಮಂಡುವಿನ ಪೋಖ್ರಾದಿಂದ ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ ಕೇವಲ ಏರ್ ಲೈನ್ಸ್ ನ ಟೆಕ್ನಿಕಲ್ ಸಿಬಂದಿಗಳು ಮಾತ್ರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರು ಇಲ್ಲ ಎಂಬುದಾಗಿ ವರದಿ ವಿವರಿಸಿದ್ದು, ಸಾವು-ನೋವಿನ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ತಿಳಿದು ಬರಬೇಕಾಗಿದೆ ಎಂದು TIAನ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 1 ಮಂದಿ ಸಾವಿಗೀಡಾಗಿದ್ದು, ಘಟನೆಗೆ ಏನು ಕಾರಣ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ತಿಳಿಸಿದೆ.