Advertisement

ಕುಡಿಯುವ ನೀರು ಪೂರೈಕೆಗೆ ಯೋಜನೆ ಸಿದ್ಧ

04:21 PM May 24, 2022 | Team Udayavani |

ಹೊಸಪೇಟೆ: ಒಳಚರಂಡಿ ಹಾಗೂ ಕುಡಿವ ನೀರು ಸರಬರಾಜು ಇಲಾಖೆಯಿಂದ ತಾಲೂಕಿನ ಕಮಲಾಪುರ ಪಟ್ಟಣ 20 ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆಗೆ 55 ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ ರೂಪಿಸಲಾಗಿದೆ.

Advertisement

ಕಮಲಾಪುರ ಪಟ್ಟಣದಲ್ಲಿ 2011ರ ಜನಸಂಖ್ಯೆ ಪ್ರಕಾರ 25 ಸಾವಿರ ಜನಸಂಖ್ಯೆ ಇದ್ದು ಪ್ರಸ್ತುತ 30862 ಜನಸಂಖ್ಯೆ ಹೊಂದಿದೆ. ಜನಸಂಖ್ಯೆ ಅನುಗುಣವಾಗಿ ಪಟ್ಟಣದಿಂದ ಪುರಸಭೆಯಾಗಿ ಮೆಲ್ದರ್ಜೆಗೆ ಏರಿದೆ. ಆದರೆ ಪಟ್ಟಣಕ್ಕೆ ಕುಡಿವ ನೀರಿನ ಸರಬರಾಜು ಹೇಳಿಕೊಳ್ಳುವಷ್ಟು ಆಗುತ್ತಿಲ್ಲ. ಪಕ್ಕದಲ್ಲಿ ತುಂಗಭದ್ರಾ ಜಲಾಶಯದ ಕಾಲುವೆಗಳಿದ್ದರೂ ಪಟ್ಟಣಕ್ಕೆ ಕುಡಿವ ನೀರಿನ ತೊಂದರೆಯಾಗುತ್ತಿದೆ. ಆದ್ದರಿಂದ ಒಳಚರಂಡಿ ಹಾಗೂ ಕುಡಿವ ನೀರು ಸರಬರಾಜು ಇಲಾಖೆಯಿಂದ ಯೋಜನೆ ಸಿದ್ಧಪಡಿಸಿ ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ.

ಪಟ್ಟಣದಲ್ಲಿ ಸದ್ಯ 4.5 ಎಂಎಲ್‌ಡಿ ಶುದ್ಧ ಕುಡಿವ ನೀರಿನ ಘಟಕವಿದ್ದು, ಪಟ್ಟಣದ ಅಳ್ಳಿಕೆರಿ ಪ್ರದೇಶದಲ್ಲಿ 10 ಲಕ್ಷ ಲೀಟರ್‌ ಒಂದು ಒವರ್‌ ಟ್ಯಾಂಕ್‌, ಶುದ್ಧೀಕರಣ ಘಟಕದಲ್ಲಿ 5 ಲಕ್ಷ ಲೀಟರ್‌, ವಾಲ್ಮೀಕಿ ವೃತ್ತದ ಬಳಿ 2.5 ಲಕ್ಷ ಲೀಟರ್‌, ಚೌಡಿಕೇರಿಯಲ್ಲಿ ಒಂದು ಲಕ್ಷ ಲೀಟರ್‌ ಒಟ್ಟು 18.5 ಲಕ್ಷ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಇನ್ನೂ ಹೆಚ್ಚುವರಿಯಾಗಿ ನಗರದ ಜೈಭೀಮ್‌ ನಗರದಲ್ಲಿ 2.5 ಲಕ್ಷ ಲೀಟರ್‌ ಹಾಗೂ ಶುದ್ಧೀಕರಣ ಘಟಕದಲ್ಲಿ 2.5 ಲಕ್ಷ ಲೀಟರ್‌ ಓವರ್‌ಟ್ಯಾಂಕ್‌ ನಿರ್ಮಾಣ ಮಾಡಲಾಗಿದ್ದು ಇನ್ನೂ ಆರಂಭವಾಗಿಲ್ಲ. 55 ಕೋಟಿ ರೂ. ವೆಚ್ಚದ ನಿರಂತರ ಕುಡಿವ ನೀರಿನ ಯೋಜನೆಯಲ್ಲಿ ಇನ್ನೂ ಪಟ್ಟಣದ ಹಂಪಿ ರಸ್ತೆಯ ಬಳಿ ಹಾಗೂ ವಾಲ್ಮೀಕಿ ವೃತ್ತದಲ್ಲಿ 2.5 ಲಕ್ಷ ಲೀಟರ್‌ ಒವರ್‌ ಟ್ಯಾಂಕ್‌ ತೆರವುಗೊಳಿಸಿ 10 ಲಕ್ಷದ ಲಕ್ಷ ಲೀಟರ್‌ ಓವರ್‌ ಟ್ಯಾಂಕ್‌ ನಿರ್ಮಾಣ ಮಾಡಲು ಯೋಜನೆ ತಯಾರಾಗಿದೆ.

ಯೋಜನೆ ರದ್ದಾದರೆ ನೀರಿನ ಹಾಹಾಕಾರ

ತುಂಗಭದ್ರಾ ಜಲಾಶಯ 15 ಕಿಮೀ ದೂರದಲ್ಲಿದ್ದು ಹಾಗೂ ಪಟ್ಟಣದ ಮೂಲಕ ಎರಡು ಕಾಲುವೆಗಳು ಹರಿದುಹೋಗುಹೊತ್ತಿದ್ದು, ಒಂದು ಎರಡು ಕೆರೆಗಳಿದ್ದರೂ ಕುಡಿವ ನೀರಿನ ಸಬರಾಜು ಸಮರ್ಪಕವಾಗಿ ಆಗುತ್ತಿಲ್ಲ. 55 ಕೋಟಿ ರೂ. ವೆಚ್ಚದ ನಿರಂತರ ಕುಡಿವ ನೀರಿನ ಸಬರಾಜು ಯೋಜನೆ ಸರಕಾರ ಮಟ್ಟದಲ್ಲಿದೆ. ಅದು ಸದ್ಯ ಅನುಮೋದನೆಯಾಗಿ ಬಂದರೆ ಮುಂದಿನ 2025ರಲ್ಲಿ ಯೋಜನೆ ಪೂರ್ಣವಾಗಲಿದೆ. ಅಲ್ಲಿಯವರೆಗೆ ಜನರ ಸ್ಥಿತಿ ಯಥಾವತ್ತಾಗಿ ಮುಂದುವರಿಯಲಿದೆ. ಏನಾದರೂ ಸರಕಾರದಿಂದ ವಿಳಂಬ ಅಥವಾ ಯೋಜನೆ ರದ್ದಾದರೆ ಪಟ್ಟಣದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಆಗಲಿದೆ ಎಂಬುದು ಸ್ಥಳೀಯರ ಅಳಲು.

Advertisement

30 ವರ್ಷದ ಮುಂದಾಲೋಚನೆ

2011ರ ಜನಗಣತಿ ಪ್ರಕಾರ ಶೇ. 15ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಕಳೆದ 30 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕುಡಿವ ನೀರಿನ ಶುದ್ಧೀಕರಣ ಘಟಕದಿಂದ ಪ್ರಸ್ತುತ ಜನಸಂಖ್ಯೆಗೆ ನೀರಿನ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಒಳಚರಂಡಿ ಹಾಗೂ ಕುಡಿವ ನೀರು ಸರಬರಾಜು ಇಲಾಖೆಯಿಂದ ಮುಂದಿನ 30 ವರ್ಷದ ಅಂದಾಜು 50 ಸಾವಿರ ಜನಸಂಖ್ಯೆ ಅನುಗುಣವಾಗಿ ಪಟ್ಟಣಕ್ಕೆ ಆಗುವಷ್ಟು 55 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ 20 ವಾರ್ಡ್‌ ಸೇರಿ ಕನ್ನಡ ವಿವಿ ಹಾಗೂ ಪಟ್ಟಣದ ಹೊರವಲಯದ ಕೆಲ ಪ್ರದೇಶಗಳಿಗೆ ನೀರಿನ ಸರಬರಾಜಿನ ಯೋಜನೆ ರೂಪಿಸಲಾಗಿದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.

ಕಮಲಾಪುರ ಪಟ್ಟಣಕ್ಕೆ ಜನಸಂಖ್ಯೆಗನುಗುಣವಾಗಿ ನೀರು ಸಾಲುತ್ತಿಲ್ಲ ಎಂದು 55 ಕೋಟಿ ರೂ, ವೆಚ್ಚದಲ್ಲಿ ನಿರಂತರ ಕುಡಿವ ನೀರಿನ ಯೋಜನೆಯ ವರದಿಯನ್ನು ಸರಕಾರಕ್ಕೆ ಮಟ್ಟದಲ್ಲಿ ಅನುಮೋದನೆಗೆ ಕಳುಹಿಸಲಾಗಿದೆ. -ಮಲ್ಲಿಕಾರ್ಜುನ, ಎಇಇ, ನಗರ ಕುಡಿವ ನೀರಿನ ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಹೊಸಪೇಟೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next