Advertisement

ರಾಮ ಮಂದಿರ ಕಾಮಗಾರಿ ತಾತ್ಕಾಲಿಕ ಸ್ಥಗಿತ

01:45 AM Jun 20, 2020 | Hari Prasad |

ಅಯೋಧ್ಯೆ: ಭಾರತ-ಚೀನ ಗಡಿಯಲ್ಲಿ ಉದ್ವಿಗ್ನ ವಾತಾ­ವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆರಂಭವಾಗಿದ್ದ ರಾಮಮಂದಿರ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

Advertisement

ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಈ ಮಾಹಿತಿ ನೀಡಿದೆ.
‘ಭಾರತ-ಚೀನ ನಡುವೆ ಉದ್ರಿಕ್ತ ವಾತಾವರಣ ಏರ್ಪ­ಟ್ಟಿರು­ವುದರಿಂದ ನಿರ್ಮಾಣ ಕಾಮಗಾರಿ ಸ್ಥಗಿತಗೊ­ಳಿಸಲಾಗಿದೆ.
ಹುತಾತ್ಮ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲುತ್ತವೆ’ ಎಂದು ಟ್ರಸ್ಟ್‌ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಸ್ಟ್‌ನ ಮುಖ್ಯಸ್ಥ ಅನಿಲ್‌ ಮಿಶ್ರಾ, ಸದ್ಯದಲ್ಲೇ ಕಾಮಗಾರಿ ಮರು­ಚಾಲನೆಗೆ ಹೊಸ ದಿನಾಂಕ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next