ಹೊಸದಿಲ್ಲಿ: ದೇಶದಲ್ಲಿನ ಕಾಳಧನಿಕರು ಹಾಗೂ ತೆರಿಗೆ ಕಳ್ಳರನ್ನು ಕಂಡುಹಿಡಿದು ಮಟ್ಟಹಾಕಲು ಕಳೆದ 2 ವರ್ಷಗಳಿಂದ ಹಲವು ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈಗ ಹೊಸ ಉಪಾಯ ರೂಪಿಸಿದ್ದಾರೆ. ಜಿಎಸ್‌ಟಿ ಅಡಿ ಸಂಗ್ರಹಿಸಿರುವ ದತ್ತಾಂಶಗಳನ್ನು ಉಪಯೋಗಿಸಿಕೊಂಡು ತೆರಿಗೆ ಕಳ್ಳರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಏನಿದು ಉಪಾಯ?: ಕಂಪನಿ ಹಾಗೂ ಅದಕ್ಕೆ ಸಂಬಂಧಪಟ್ಟವರ ಆದಾಯ ವನ್ನು ಜಿಎಸ್‌ಟಿ ವಾಪಸಾತಿ ಫೈಲ್ ಮಾಡಿದ್ದ ಸಂದರ್ಭ ನೀಡಿರುವ ವಿವರ ಗಳಿಗೆ ಹೋಲಿಸಲಾಗುತ್ತದೆ. ಜಿಎಸ್‌ಟಿ ತೆರಿಗೆ ಪದ್ಧತಿ ಯಾವುದೇ ಸಂ ಸ್ಥೆಯ ವ್ಯವಹಾರದ ಗಾತ್ರದ ಮಾ ಹಿತಿ ನೀಡುತ್ತದೆ. ಈ ಮಾಹಿತಿ ಯನ್ನು ಆದಾಯ ತೆರಿಗೆ ವಿವರಗಳ ಜತೆಗೆ ಹೋಲಿಸಿದಾಗ ಕಡಿಮೆ ಆದಾಯ ಅಥವಾ ವೆಚ್ಚವನ್ನು ಅತಿಯಾಗಿ ತೋರಿ ಸುವುದು ಅತ್ಯಂತ ಕಷ್ಟಕರ ಎಂದು ಸರಕಾರದ ಮೂಲಗಳು ತಿಳಿಸಿವೆ.
ಆರ್ಥಿಕ ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಇ- ಫೈಲಿಂಗ್‌ನಲ್ಲಿ ನೀಡಿರುವ ದತ್ತಾಂಶಗಳನ್ನು ಹೋಲಿಕೆ ಮಾಡಿ ನೋಡಿದಾಗ ಸಂಸ್ಥೆಯೊಂದಿಗೆ ವ್ಯಕ್ತಿ, ಅವರ ಬಂಡವಾಳ ಹೂಡಿಕೆ ಹಾಗೂ ಆದಾಯ ತಿಳಿದುಬರುತ್ತದೆ. ಈ ಮೂಲಕ ಯಾವುದೇ ತೆರಿಗೆ ವಂಚನೆ ನಡೆದಿದ್ದಲ್ಲಿ ಸುಲಭವಾಗಿ ಪತ್ತೆಹಚ್ಚ ಬಹುದು ಎಂದಿದ್ದಾರೆ ತಜ್ಞರು.
ಸಂಪರ್ಕ ಗೊತ್ತಾಗುತ್ತೆ: ರಚನಾತ್ಮಕ ಹಾಗೂ ರಚನಾತ್ಮಕವಲ್ಲದ ದತ್ತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸಂಸ್ಥೆ ಯೊಂದಿಗೆ ಸಂಪರ್ಕ ಹೊಂದಿರುವ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮಾಹಿತಿಯೂ ವಿವರವಾಗಿ ತಿಳಿಯುತ್ತದೆ. ಸಂಸ್ಥೆಗಳು, ವ್ಯಕ್ತಿಗಳ ವಿಳಾಸಗಳು, ದೂರವಾಣಿ ಕರೆಗಳು, ಸಾಮಾಜಿಕ ಮಾಧ್ಯಮದಲ್ಲಿ ನಡೆದ ಚರ್ಚೆ, ಪ್ರಯಾಣದ ಮಾಹಿತಿ ಹಾಗೂ ಆದಾಯ ತೆರಗೆ ರಿಟರ್ನ್ಗಳು ಸೇರಿ ಹಲವು ಮಾಹಿತಿಗಳು ಬಯಲಾಗಲಿದ್ದು, ತೆರಿಗೆ ವಂಚನೆ ಪತ್ತೆಹಚ್ಚುವಲ್ಲಿ ಸಾಕಷ್ಟು ಸಹಾಯ ಮಾಡುತ್ತವೆ.
ಅಪನಗದೀಕರಣ ಜಾರಿ ನಂತರ ಈಗಾಗಲೇ ಲಕ್ಷಾಂತರ ತೆರಿಗೆ ವಂಚನೆಗಳನ್ನು ಪತ್ತೆಹಚ್ಚಲಾಗಿದೆ. ಲಕ್ಷಾಂತರ ಬೋಗಸ್ ಕಂಪನಿಗಳಿಗೆ ಬೀಗ ಹಾಕಲಾಗಿದೆ ಎಂದು ಸರಕಾರವೇ ಹೇಳಿಕೊಂಡಿದೆ. ತೆರಿಗೆ ವಂಚನೆ ತಡೆಯಲು ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಪರಿಣಾಮ 2018ರಲ್ಲಿ ಹೊರಬರಲಿದೆ ಎನ್ನಲಾಗಿದ್ದು, ಮುಂದಿನ ವರ್ಷದಿಂದ ತೆರಿಗೆ ವಂಚನೆ ಬಹುತೇಕ ಅಸಾಧ್ಯ ಎಂದೇ ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.