Advertisement

ರೈತರ ಪ್ರೋತ್ಸಾಹಿಸಲು ಯೋಜನೆ ರೂಪಿಸಿ: ಸುಜಾತಾ

04:16 PM Nov 12, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ರೈತರಿಗೆ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ರೈತರ ತರಬೇತಿಕಾರ್ಯಕ್ರಮಗಳನ್ನು ರೂಪಿಸಿ, ಯಶಸ್ವಿಯಾಗುಯವಂತೆ ಅನುಷ್ಠಾನಕ್ಕೆ ತರಬೇಕು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಅಕ್ಟೋಬರ್‌ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದಅವರು, ಜಾನುವಾರುಗಳ ರೋಗ ನಿಯಂತ್ರಿಸಲು ಲಸಿಕಾ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರಬೇಕು ಎಂದರು.

ನೆರೆ ಹಿನ್ನೆಲೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದಕ್ಕಾಗಿ ಕೆರೆಗಳಿಂದ ನೀರು ಒದಗಿಸಿಶಾಶ್ವತ ಪರಿಹಾರ ಒದಗಿಸುವ ಹಾಗೂ ಜಲಧಾರೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರಿಂದ, ಪಾಲಕರಿಂದ ಆಹಾರ ಸರಿಯಾಗಿ ಪೂರೈಕೆಯಾಗದಿರುವುದು ಸೇರಿದಂತೆ ಆಹಾರ ವಿತರಣೆಗೆ ಸಂಬಂಧಿಸಿದಂತೆ ದೂರುಗಳು ಬರುತ್ತಿದ್ದು, ಕೂಡಲೇ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆಯಿಂದ ಗಂಗಾಕಲ್ಯಾಣ ಯೋಜನೆಯಲ್ಲಾದ ಹಾನಿಯನ್ನು ಕೂಡಲೇ ಸರಿಪಡಿಸಿ, ಪ್ರವಾಹದಿಂದಹಾನಿಗೊಳಗಾದ ರಸ್ತೆಗಳ ದುರಸ್ತಿ ಕಾರ್ಯಕೈಗೊಳ್ಳುವಂತೆ, ಗಂಗಾಕಲ್ಯಾಣ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅವರು ಅಧಿ ಕಾರಿಗಳಿಗೆ ಸೂಚಿಸಿದರು.

Advertisement

ಸಭೆಯಲ್ಲಿ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ, ಜಿಪಂ ಸಿಇಒ ಗೋವಿಂದ ರೆಡ್ಡಿ ವೇದಿಕೆಯಲ್ಲಿದ್ದರು.

 15ರಂದು ಕಾರ್ಮಿಕರ ಜಿಲ್ಲಾ ಸಮಾವೇಶಕ್ಕೆ ನಿರ್ಧಾರ :

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ಸೋಂಕಿನ ಸಂಕಷ್ಟದ ಸಂದರ್ಭ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿ, ಜನ ವಿರೋಧಿ ಹಾಗೂ ಕಾರ್ಪೊರೇಟರ್‌ ಪರವಾದ ನೀತಿಯ ಕಾನೂನುಗಳನ್ನು ಜಾರಿ ಮಾಡಿದೆ. ಕಾರ್ಮಿಕರ ಹಕ್ಕು ದಮನ ಮಾಡುವ ಕಾರ್ಯದಲ್ಲಿ ತೊಡಗಿರುವ ಸರ್ಕಾರಗಳ ನಿಲುವು ವಿರೋಧಿಸಿ ಕಾರ್ಮಿಕರು ಮತ್ತು ರೈತರು ಶೋಷಿತ ಜನರು ಈ ಕಾಯ್ದೆ ವಿರೋಧಿಸಲು ನ. 15ರಂದು ನಗರದಲ್ಲಿ ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎಐಯುಟಿಯುಸಿ ಕಚೇರಿಯಲ್ಲಿ ಕಾರ್ಮಿಕ ಮುಖಂಡಭೀಮಶಿ ಕಲಾದಗಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲೆಯ ವಿವಿಧ ಕಾರ್ಮಿಕ ಸಂಘದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಸ್‌ಐಎಫ್‌ಟಿ, ಬ್ಯಾಂಕ್‌, ಸಾರಿಗೆ, ನೌಕರರ ಮುಖಂಡರು ಭಾಗವಹಿಸಿದ್ದರು. ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕ ವಿರೋಧಿ , ರೈತ ವಿರೋಧಿ, ಸಾರ್ವಜನಿಕ ಉದ್ದೇಮೆಗಳ ಖಾಸಗೀಕರಣ, ಮಹಿಳೆಯರ ಮೇಲಾಗುವ ದೌರ್ಜನ್ಯ ವಿರೋಧಿಸಿ ಸಮಾವೇಶ ಮಾಡುತ್ತಿದ್ದು ಜಿಲ್ಲೆಯ ಕಾರ್ಮಿಕರು, ರೈತರು ಭಾಗವಹಿಸುವಂತೆ ಮನವಿ ಮಾಡಿದರು.

ಪ್ರಕಾಶ ಹಿಟ್ನಳ್ಳಿ, ಅಣ್ಣಾರಾಯ ಇಳಗೇರ, ಚಂದ್ರಶೇಖರ ಗಂಟೆಪ್ಪಗೊಳ, ಪ್ರಭುಗೌಡ ಪಾಟೀಲ,ಸುರೇಖಾ ರಜಪೂತ, ಸುನೀಲ ಸಿದ್ರಾಮಶೆಟ್ಟಿ, ಭಾರತಿ ವಾಲಿ, ಸುನಂದಾ ನಾಯಕ ಸೇರಿದಂತೆ ವಿವಿಧ ಕಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next