Advertisement

ಯೋಜನೆ ಲಾಭ ಅರ್ಹರಿಗೆ ತಲುಪಿಸಲು ಯತ್ನ

05:29 PM Aug 19, 2020 | Suhan S |

ಕಲಬುರಗಿ: ಜಿಪಂನಿಂದ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನೆಲ್ಲ ಅರ್ಹರಿಗೆ ತಲುಪಿಸುವ ನಿಟ್ಟಿನ ಜತೆಗೆ ಮುಂದಿನ ದಿನಗಳಲ್ಲಿ ವಸತಿ ನಿಲಯಗಳು ಪ್ರಾರಂಭವಾದಲ್ಲಿ ಪ್ರವೇಶಾತಿ ಬಯಸುವ ಎಲ್ಲ ವಿದ್ಯಾರ್ಥಿಗಳು ಪ್ರವೇಶ ಕಲ್ಪಿಸಲು ಮುಂದಾಗಲಾಗುವುದು ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದಿಲೀಪ ಪಾಟೀಲ್‌ ಹೇಳಿದರು.

Advertisement

ಇಲ್ಲಿನ ಜಿಪಂ ನೂತನ ಸಭಾಂಗಣದಲ್ಲಿರುವ ಸ್ಥಾಯಿ ಸಮಿತಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಕೋವಿಡ್ ದಿಂದ ಆರ್ಥಿಕ ಅನುದಾನದ ಕೊರತೆಯಿಂದ ಎಲ್ಲರಿಗೂ ಯೋಜನೆಗಳು ತಲುಪಲು ಸಾಧ್ಯವಾಗದಿದ್ದರೂ ಇರುವ ಯೋಜನೆಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮೊದಲು ಆದ್ಯತೆ ನೀಡಲಾಗುವುದು ಎಂದರು.

ಈ ವರ್ಷ ಕೋವಿಡ್ ದಿಂದ ಶಾಲಾ-ಕಾಲೇಜುಗಳೆಲ್ಲ ಬಂದ್‌ ಇರುವುದರಿಂದ ಎಲ್ಲ ವಸತಿ ನಿಲಯಗಳೆಲ್ಲ ಬಂದ್‌ ಆಗಿವೆ. ಮುಂದಿನ ದಿನಗಳಲ್ಲಿ ಆರಂಭವಾದಲ್ಲಿ ವಸತಿ ನಿಲಯ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆಲ್ಲ ಅವಕಾಶ ಕಲ್ಪಿಸಲಾಗುವುದು. ಒಬ್ಬ ವಿದ್ಯಾರ್ಥಿಯೂ ಹೊರಗುಳಿಯದಂತೆ ನಿಗಾವಹಿಸಲಾಗುವುದು ಎಂದರು.

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಪಂ ವಿಪಕ್ಷ ನಾಯಕ ಶಿವಾನಂದ ಪಾಟೀಲ್‌ ಮರತೂರ, ಸದಸ್ಯರಾದ ಅರುಣ ಪಾಟೀಲ್‌, ಹರ್ಷಾನಂದ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ ಸೇರಿದಂತೆ ಮುಂತಾದವರು ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next