Advertisement

ಕೋವಿಡ್‌ ನೆನಪಿಸಿದ ವಸಾಹತುಶಾಹಿ ಭಾರತದ ಪ್ಲೇಗ್ 

02:56 PM Apr 28, 2020 | sudhir |

ಮಣಿಪಾಲ: ಕೋವಿಡ್‌-19 ನಂಥ ವೈರಸ್‌ ದಾಳಿ ಭಾರತಕ್ಕೆ ಹೊಸದಲ್ಲ. 1896ರ ಸೆ. 23ರಂದು, ಬಾಂಬೆ ಪ್ರಸಿಡೆನ್ಸಿ (ಬ್ರಿಟಿಷರ ಆಳ್ವಿಯ ಭಾರತವಾಗಿದ್ದ ಕಾಲ)ಯ ಮಾಂಡ್ವಿ ಜಿÇÉೆಯಲ್ಲಿ ದೇಶದ ಮೊದಲ ಪ್ಲೇಗ್‌ನ ಪ್ರಕರಣ ಪತ್ತೆಯಾಗಿತ್ತು. ಎಜಿ ವೈಗಾಸ್‌ ಎಂಬ ಭಾರತೀಯ ವೈದ್ಯರು ಪತ್ತೆ ಹಚ್ಚಿದ್ದರು. ಸೂಕ್ತ ಚಿಕಿತ್ಸೆಯ ಅಭಾವದಿಂದ ರೋಗಿ ಸಾವನ್ನಪ್ಪಿದ್ದ.

Advertisement

ಈ ಪ್ಲೇಗ್‌ ಹುಟ್ಟಿದ್ದು ಚೀನದ ಯುನಾನ್‌ನಲ್ಲಿ. ಇದು ಚಿಗಟೆ, ಇಲಿಗಳಿಂದ ಹರಡಿತ್ತು ಎನ್ನಲಾಗು ತ್ತಿದೆ. ಸೋಂಕಿತ ವ್ಯಕ್ತಿಯ ಮೇಲೆ ಚಿಗಟೆ ಕುಳಿತ ಪರಿಣಾಮ ಮತ್ತಷ್ಟು ಮಂದಿಗೆ ಹರಡಿತ್ತು. ಹೀಗೆ ಈ ಸೋಂಕಿತರು ಹಾಂಕಾಂಗ್‌ ಸಹಿತ ಇತರೆಡೆಗೆ ಹಡಗುಗಳ ಮೂಲಕ ಪ್ರಯಾಣಿಸಿದ್ದರು. ಹಡಗು ಭಾರತಕ್ಕೂ ಬರುತ್ತಿದ್ದ ಕಾರಣ ಸೋಂಕು ಬಂದುಬಿಟ್ಟಿತ್ತು.

ನಾವುಕಚ್ಚಾ ವಸ್ತುಗಳನ್ನು ರಫ್ತುಮಾಡಿ, ಸಿದ್ಧವಸ್ತುಗಳನ್ನು ಪಡೆಯಲಾಗುತ್ತಿದ್ದ ಕಾಲ ಅದು. ಅಲ್ಲಿಂದ ಈ ಮಹಾಮಾರಿ ಕೋಲ್ಕತಾ ಮತ್ತು ಕರಾಚಿಯ ಬಂದರು ನಗರಗಳಿಗೆ ವೇಗವಾಗಿ ಹರಡಿತ್ತು. ಪುಣೆ, ಸಂಯುಕ್ತ ಪ್ರಾಂತ್ಯಗಳು, ಪಂಜಾಬ್‌, ವಾಯುವ್ಯ ಭಾರತ, ಹೈದರಾಬಾದ್‌, ಮೈಸೂರು, ಮದ್ರಾಸ್‌ (ಈಗಿನ ಚೆನ್ನೈ), ಆಗ್ರಾ, ಔದ್‌ ಮತ್ತು ಬರ್ಮಾವನ್ನೂ ಬಿಡಲಿಲ್ಲ. 1896- 1921ರ ಸಮಯದಲ್ಲಿ ಸುಮಾರು 1.2 ಕೋಟಿ ಭಾರತೀಯರು ಪ್ರಾಣ ಕಳೆದುಕೊಂಡರು. ಇತರ ರಾಷ್ಟ್ರಗಳಲ್ಲಿ ಒಟ್ಟು 30 ಲಕ್ಷ ಮಂದಿ ಸತ್ತರಂತೆ.

ಜೀವನ ಶೈಲಿ ಕಾರಣ!
ಬ್ರಿಟನ್‌ ಸರಕಾರಕ್ಕೆ ನಷ್ಟ ಮಾಡಿಕೊಳ್ಳುವುದು ಇಷ್ಟ ವಿರಲಿಲ್ಲ. ಹಾಗಾಗಿ ಬ್ರಿಟಿಷ್‌ ಅಧಿಕಾರಿಗಳು ತಮ್ಮ ಜಾಗತಿಕ ವ್ಯಾಪಾರಗಳಿಗೆ ತೊಂದರೆಯಾದೀತೆಂದು ಬಂದರುಗಳನ್ನು ಮುಚ್ಚಲಿಲ್ಲ. ಆದ ಕಾರಣ ಹಡಗುಗಳ ಮೂಲಕ ಸೋಂಕು ಹರಡಿತು. ಆದರೆ ಬ್ರಿಟಿಷರು ತಮ್ಮ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ಈ ಸೋಂಕಿಗೆ ಭಾರತೀಯ ಜೀವನ ಶೈಲಿ, ಅನೈರ್ಮಲ್ಯತೆ ಕಾರಣ ಎಂದು ದೂರಿದ್ದರು.

ಸಾಮಾಜಿಕ ಅಂತರದ ಪಾಠ
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬ್ರಿಟಿಷರು 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಜಾರಿಗೆ ತಂದರು. ಇದರನ್ವಯ ವಿಶೇಷ ಕ್ರಮಗಳಿಗಾಗಿ ನಿಯಮಗಳನ್ನು ಸೂಚಿಸುವ ಅಧಿಕಾರ ನೀಡಲಾಯಿತು. ಇದು ಈಗಲೂ ಜಾರಿಯಲ್ಲಿದೆ. ಅಂದು ಅಂತರವನ್ನು ಕಾಯ್ದುಕೊಳ್ಳಲು ಹೇಳಲಾಗಿತ್ತು. ಕೊರೊನಾ ವೈರಸ್‌ ಸಂದರ್ಭ ಜಗತ್ತು ಇದೇ ಮಾದರಿಯ ಮೊರೆ ಹೋಗಿದೆ.

Advertisement

ಪ್ರಾಂತ್ಯ ವಿಂಗಡಣೆ
ರೋಗವನ್ನು ನಿಗ್ರಹಿಸಲು ಸೋಂಕಿತ ಪ್ರದೇಶಗಳನ್ನು ತಲಾ 100 ಹಳ್ಳಿಗಳನ್ನು ಒಳಗೊಂಡ ವಿಭಾಗಳನ್ನು ರಚಿಸಲಾಗಿತ್ತು. ಇದರ ಉಸ್ತುವಾರಿ ಡಿಸಿಗಳದ್ದು. ಉಪ ಆಯುಕ್ತರು, ವಿಭಾಗ ಅಧಿಕಾರಿ, ಸಿವಿಲ್‌ ಸರ್ಜನ್‌ ಮತ್ತು ವೈದ್ಯಕೀಯ ಅಧಿಕಾರಿಗಳಿರುತ್ತಿದ್ದರು. ತಹಶೀಲ್ದಾರ್‌ಗಳು ಕನುಂಗೋಸ್‌, ಪಟ್ವಾರಿಸ್‌, ಆಸ್ಪತ್ರೆ ಸಹಾಯಕರು, ಶುಶ್ರೂಷಕಿಯರು ಸಹಕರಿಸುತ್ತಿದ್ದರು.

ಕರ್ಫ್ಯೂ ಪಾಸ್‌ ಮಾದರಿ
ಅಂದು ಪ್ಲೇಗ್‌ ಗ್ರಾಮೀಣ ಪ್ರದೇಶದಲ್ಲಿ ತುಸು ಹೆಚ್ಚಿತ್ತು. ಸೋಂಕಿತ ಹಳ್ಳಿಗಳನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ಆಡಳಿತ, ಅಗತ್ಯ ಸಂದರ್ಭದಲ್ಲಿ ಈ ಪ್ರದೇಶಗಳನ್ನು ದಾಟುವವರಿಗೆ ಪಾಸ್‌ ನೀಡುತ್ತಿತ್ತು. ಈಗ ನೀಡಲಾಗುತ್ತಿರುವ ಕರ್ಫ್ಯೂ ಪಾಸ್‌ ಮಾದರಿ. ಜನರಿಗೆ ಹೊರಗೆ ಬಾರದಮತೆ ನಿರ್ಬಂಧಿಸಲಾಗಿತ್ತು. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿತ್ತು.

ಕ್ವಾರಂಟೈನ್‌
ಅಧಿಕಾರಿಗಳು ರೋಗಿಗಳನ್ನು ಹುಡುಕಲು ಮನೆಗಳಿಗೆ ಭೇಟಿ ನೀಡುತ್ತಿದ್ದರು. ಶಂಕಿತರನ್ನು ಶಿಬಿರಗಳಿಗೆ ಕರೆದೊಯ್ಯ ಲಾಗುತ್ತಿತ್ತು. ಗ್ರಾಮದಲ್ಲಿ ಯಾರ ಸಾವಾದರೂ ವಿಶೇಷ ಪರೀಕ್ಷೆ ಒಡ್ಡಲಾಗುತ್ತಿತ್ತು. ಈ ಸಾಂಕ್ರಾಮಿಕವು ಪ್ರಾಣಹಾನಿ ಜತೆಗೆ ಭಾವ ನಾತ್ಮಕವಾಗಿ, ಭೌತಿಕವಾಗಿ ಮತ್ತು ಆರ್ಥಿಕ ಪರಿಣಾಮವನ್ನು ಬೀರಿತ್ತು. ಇಂದಿನ ಕೋವಿಡ್‌ 19 ಸಹ ಅದನ್ನೇ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next