Advertisement
ನವೆಂಬರ್ 9, 2000 ರಂದು 27ನೇ ರಾಜ್ಯವಾಗಿ ರಚನೆಯಾಗಿದೆ. ರಾಜ್ಯದ ಉತ್ತರಕ್ಕೆ ಟಿಬೆಟ್, ಪೂರ್ವಕ್ಕೆ ನೇಪಾಳ ದೇಶವಿದೆ. ಅವುಗಳಲ್ಲಿ ಪ್ರಮುಖವಾಗಿ ಕೇದರನಾಥ್ ಒಂದು.
ಉತ್ತರಾಖಂಡ್‌ನ ರಾಜಧಾನಿ ಡೆಹ್ರಾಡೂನ್‌ನಲ್ಲಿ ರಿಷಿಕೇಶ ದೇಗುಲವಿದೆ. ಇಲ್ಲಿ ಪುರಾತನ ದೇಗುಲ ಮತ್ತ ಆಶ್ರಮವಿದೆ. ಇವುಗಳ ಜತೆಗೆ ಯೋಗ ಮತ್ತ ಧ್ಯಾನ ಕೇಂದ್ರಗಳಿವೆ. ಪುರಾಣಗಳ ಪ್ರಕಾರ ರಾವಣನ ಸಂಹಾರ ಮಾಡಿದ ಅನಂತರ ಶ್ರೀರಾಮ ರಿಷಿಕೇಶದಲ್ಲಿ ಧ್ಯಾನಕ್ಕೆ ಕುಳಿತ ಎಂದು ಪ್ರತೀತಿ ಇದೆ.
Related Articles
ಅತ್ಯಂತ ಮನೋಹರವಾದ ಸರೋವರವನ್ನು ನಾವು ಉತ್ತರಾಖಂಡ್‌ನಲ್ಲಿ ಕಾಣಬಹುದು ಅದುವೇ ಸತ್ತಾಲ್ ಸರೋವರ. ಏಳು ಸರೋವರಗಳನ್ನು ಸೇರಿ ಸತ್ತಾಲ್ ಎಂದು ಕರೆಯಲಾಗುತ್ತದೆ. ಪೂರ್ಣಾ ಸರೋವರ, ರಾಮ ಸರೋವರ, ಸೀತಾ ಸರೋವರ,ಲಕ್ಷ್ಮಣ್ ಸರೋವರ, ನಳ ದಮಯಂತಿ ಸರೋವರ , ಸುಖ ಸರೋವರ ಮತ್ತು ಗರುಡ ಸರೋವರ ಏಳು ಸರೋವರಗಳಿವೆ. ಈ ಸರೋವರಗಳು ವಲಸೆ ಹಕ್ಕಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ 500 ಜಾತಿಯ ಪಕ್ಷಿಗಳು, 500 ಹೆಚ್ಚು ಚಿಟ್ಟೆಗಳ ಸಮೂಹವಿದೆ.
Advertisement
ಚಾರ್ ದಾಮ್( ಬದ್ರೀನಾಥ್, ಗಂಗೋತ್ರಿ, ಯಾಮುನೋತ್ರಿ, ಕೇದರನಾಥ್)ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುವ ಹೆಚ್ಚಿನ ಜನರು ಚಾರ್ ದಾಮ್ ಗಳಾದ ಬದ್ರೀನಾಥ್, ಗಂಗೋತ್ರಿ, ಯಾಮುನೋತ್ರಿ, ಕೇದರನಾಥ್ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ.
ಬದ್ರಿನಾಥ್
ಬದ್ರಿನಾಥ್ ನಾರಾಯಣ ದೇಗುಲವಿರುವ ಕಾರಣ ಬದ್ರಿನಾಥ್ ಹೆಚ್ಚು ಪ್ರಸಿದ್ದಿ ಹೊಂದಿದೆ. ವಿಷ್ಣು ಪುರಾಣದ ಪ್ರಕಾರ ವಿಷ್ಣುವಿನ ಅವತಾರ ನಾರಾಯಣ ಇಲ್ಲಿ ಧಾನ್ಯಸ್ಥನಾಗಿದ್ದ ಎಂದು ಹೇಳಲಾಗುತ್ತದೆ. ಪಾಂಡವರು ಸ್ವರ್ಗಕ್ಕೆ ಬದ್ರಿನಾಥ್ ಮೂಲಕ ಹಾದುಹೋದರು ಎಂಬ ನಂಬಿಕೆ ಇದೆ. ಬದ್ರಿನಾಥ್ ನಾರಾಯಣ ದೇಗುಲ ಸುತ್ತ ಆಲಕಾನಂದ ನದಿ ಹರಿಯುತ್ತದೆ. ಆದಿ ಶಂ ಕರಾರ್ಚಾಯರಿಂದ ಈ ದೇಗುಲ ಸ್ಥಾಪನೆಯಾಗಿದೆ ಎಂದು ಹೇಳಲಾಗುತ್ತದೆ.ಚಾರಣ ಪ್ರಿಯರಿಗೆ ಈ ಪ್ರದೇಶ ಸೂಕ್ತವಾಗಿದೆ. ನವೆಂಬರ್‌ನಿಂದ ಎಪ್ರಿಲ್ ವರೆಗೆ ಬದ್ರಿನಾಥ್ ದೇಗುಲ ಮುಚ್ಚಿರುತ್ತದೆ. ಗಂಗೋತ್ರಿ
ಭಾರತದ ಪವಿತ್ರ ನದಿ ಗಂಗಾ ನದಿ ಯ ಮೂಲ ಸ್ಥಳವೇ ಗಂಗೋತ್ರಿ. ಗಂಗಾ ದೇಗುಲವನ್ನು ಇಲ್ಲಿ ಕಾಣಬಹುದು. ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಅತ್ಯಂತ ರಮಣೀಯ ಸ್ಥಳವಾಗಿದೆ. ಇಲ್ಲಿ ಭಾಗೀರಥಿ ನದಿ ಹರಿಯುತ್ತದೆ. ಗಂಗಾ ನದಿಯೂ ಇಲ್ಲಿ ಆಲಕನಂದ ನದಿಯನ್ನು ಸಂಧಿಸುತ್ತದೆ.
ಯಮುನಾ ನದಿಯ ಮೂಲ ಸ್ಥಳವೇ ಯಾಮುನೋತ್ರಿಯಾಗಿದೆ. ಸೂರ್ಯ ಪುತ್ರಿ, ಯಮನ ಸಹೋದರಿ ಯುಮುನಾ ದೇವಿಯ ದೇಗುಲ ಇಲ್ಲಿಯ ಪ್ರಮುಖ ಆರ್ಕಷಣೆಯಾಗಿದೆ. ಪ್ರತಿವರ್ಷ ಅಕ್ಷಯಾ ತೃತೀಯಾದಂದು ಈ ದೇಗುಲ ತೆರೆಯುತ್ತದೆ. ಚಾರ್ ದಾಮ್‌ಗಳಿಗೆ ಮೇ- ಜೂನ್ ನಲ್ಲಿ ಭೇಟಿ ನೀಡುವುದು ಸೂಕ್ತ.
ಹೂಗಳ ಕಣಿವೆ ( ವ್ಯಾಲಿ ಆಪ್ ಫ್ಲವರ್)
ಹೂಗಳ ಕಣಿವೆ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಅತ್ಯುತ್ತಮ ರಾಷ್ಟ್ರಿಯ ಉದ್ಯಾನವಗಳಲ್ಲಿ ಒಂದಾಗಿದೆ. 87.50 ಚದರ ಕಿ,ಮೀ ವಿಸ್ತಿರ್ಣದಲ್ಲಿ ಆಲ್ಪೆçನ್ , ಬ್ರಹ್ಮ ಕಮಲ, ಲಿಲ್ಲಿ ಸಹಿತ 650 ಕ್ಕೂ ವಿವಿಧ ಹೂಗಳು ಹರಡಿಕೊಂಡಿವೆ. ರಮ್ಯ ಮನೋಹರವಾದ ಈ ಹೂಗಳ ಕಣಿವೆಗೆ ಒಮ್ಮೆಯಾದರೂ ಭೇಟಿ ನೀಡಬೇಂಕೆದೆನಿಸುತ್ತದೆ.2004ರಲ್ಲಿ ಯುನೆಸ್ಕೋನ ವಿಶ್ವ ಪರಂಪರೆಯ ತಾಣಗಳಲ್ಲಿ ಇದನ್ನು ಸೇರಿಸಲಾಗಿದೆ. ಮನಸ್ಸಿಗೆ ಮುದ ನೀಡುವ ಹೂ ಮತ್ತು ಹಿಮಾದ ಸುಂದರ ತಾಣ ಇದಾಗಿದೆ. ಧನ್ಯಶ್ರೀ ಬೋಳಿಯಾರು