Advertisement

Kedarnath; ಮತ್ತೊಂದು ದೇವಾಲಯ ದೆಹಲಿಯಲ್ಲಿ: ಸ್ವಾಮಿ ಅವಿಮುಕ್ತೇಶ್ವರಾನಂದ ಕಿಡಿ

04:32 PM Jul 15, 2024 | Team Udayavani |

ಮುಂಬಯಿ: ಮತ್ತೊಂದು ಕೇದಾರನಾಥ ದೇವಾಲಯವನ್ನು ದೆಹಲಿಯಲ್ಲಿ ನಿರ್ಮಾಣ ಮಾಡುವ ವಿಚಾರದ ಕುರಿತು ಶಂಕರಾಚಾರ್ಯ ಪೀಠ ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಶ್ರೀ ಕಿಡಿ ಕಾರಿದ್ದಾರೆ.

Advertisement

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ವಾಮೀಜಿ ‘ ಕೇದಾರನಾಥ ದೇಗುಲದಲ್ಲಿ 228 ಕೆಜಿ ಚಿನ್ನಾಭರಣ ನಾಪತ್ತೆಯಾಗಿದೆ. ಭಾರೀ ಚಿನ್ನದ ಹಗರಣ ನಡೆದಿದೆ. ಈ ವಿಚಾರವನ್ನು ಯಾಕೆ ಚರ್ಚಿಸುತ್ತಿಲ್ಲ, ತನಿಖೆಯನ್ನು ನಡೆಸುತ್ತಿಲ್ಲ. ಇದಕ್ಕೆ ಯಾರು ಹೊಣೆ? ಹಗರಣ ನಡೆಸಿದ ಬಳಿಕ ಈಗ ಮತ್ತೊಂದು ದೇಗುಲವನ್ನು ದೆಹಲಿಯಲ್ಲಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.

“ಸಾಂಕೇತಿಕ ಕೇದಾರನಾಥ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಶಿವಪುರಾಣದಲ್ಲಿ ಹೆಸರು ಮತ್ತು ಸ್ಥಳದೊಂದಿಗೆ 12 ಜ್ಯೋತಿರ್ಲಿಂಗಗಳನ್ನು ಉಲ್ಲೇಖಿಸಲಾಗಿದೆ.ಕೇದಾರನಾಥದ ವಿಳಾಸವು ಹಿಮಾಲಯದಲ್ಲಿರುವಾಗ ಅದು ದೆಹಲಿಯಲ್ಲಿ ಹೇಗೆ ಇರಲು ಸಾಧ್ಯವಾಗುತ್ತದೆ ? ಇದರ ಹಿಂದೆ ರಾಜಕೀಯ ಕಾರಣಗಳಿವೆ. ನಮ್ಮ ಧಾರ್ಮಿಕ ಕ್ಷೇತ್ರಗಳಿಗೆ ರಾಜಕೀಯ ವ್ಯಕ್ತಿಗಳು ಪ್ರವೇಶ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.

ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ

ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಸೋಮವಾರ ಶಿವಸೇನೆ UBT ನಾಯಕ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀಗೆ ಭೇಟಿ ನೀಡಿದರು. ಭೇಟಿ ಕುರಿತು ಪ್ರತಿಕ್ರಿಯಿಸಿ “ನಾವೆಲ್ಲರೂ ಸನಾತನ ಧರ್ಮದ ಅನುಯಾಯಿಗಳು. ನಮಗೆ ‘ಪಾಪ’ ಮತ್ತು ‘ಪುಣ್ಯ’ ಎಂಬ ವ್ಯಾಖ್ಯಾನವಿದೆ.ದೊಡ್ಡ ಪಾಪವೆಂದರೆ ದ್ರೋಹ. ಉದ್ಧವ್ ಠಾಕ್ರೆ ಅವರಿಗೆ ವಂಚಿಸಿದ್ದಾರೆ. ಅವರು ಎದುರಿಸಿದ ದ್ರೋಹದಿಂದ ನಮಗೆಲ್ಲ ನೋವಾಗಿದೆ ಎಂದು ನಾನು ಉದ್ಧವ್ ಠಾಕ್ರೆ ಹೇಳಿದ್ದೇನೆ, ಅವರು ಮತ್ತೆ ಮಹಾರಾಷ್ಟ್ರದ ಸಿಎಂ ಆಗುವವರೆಗೆ ನಮ್ಮ ನೋವು ಕಡಿಮೆಯಾಗುವುದಿಲ್ಲ’ ಎಂದರು.

Advertisement

‘ನೋವನ್ನು ಹೊರುವವನು ಹಿಂದೂ.ಮಹಾರಾಷ್ಟ್ರದ ಜನತೆಗೆ ನೋವಾಗಿರುವುದು ಚುನಾವಣೆಯ ಫಲಿತಾಂಶದಲ್ಲೂ ಗೋಚರಿಸಿತು.ಅವರಿಗೆ ಇದು ತಮ್ಮ ನಾಯಕನನ್ನು ಆಯ್ಕೆ ಮಾಡುವ ಜನರಿಗೆ ಮಾಡುವ ಅಗೌರವವೂ ಹೌದು. ನಡುವೆ ಸರ್ಕಾರವನ್ನು ಒಡೆಯಲು ಮತ್ತು ಜನಾದೇಶವನ್ನು ಅವಮಾನಿಸಲಾಗಿದೆ’ ಎಂದರು.

ನರೇಂದ್ರ ಮೋದಿ ನಮ್ಮ ಶತ್ರು ಅಲ್ಲ
ಅಂಬಾನಿ ವಿವಾಹ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ತನ್ನ ಕತ್ತಿನಲ್ಲಿದ್ದ ಸರವನ್ನು ಹಾಕಿ ಆಶೀರ್ವದಿಸಿದ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ ‘ಹೌದು,ಪ್ರಧಾನಿ ಮೋದಿ ಅವರು ನನ್ನ ಬಳಿಗೆ ಬಂದು ಪ್ರಾಣಾಮ ಮಾಡಿದರು, ನಮ್ಮ ಬಳಿಗೆ ಬಂದವರಿಗೆ ನಾವು ಆಶೀರ್ವಾದ ಮಾಡುವುದು ನಮ್ಮ ಕ್ರಮ. ನರೇಂದ್ರ ಮೋದಿ ಜಿ ನಮ್ಮ ಶತ್ರು ಅಲ್ಲ, ನಾವು ಅವರ ಹಿತೈಷಿಗಳು ಮತ್ತು ಯಾವಾಗಲೂ ಅವರ ಪರವಾಗಿ ಮಾತನಾಡುತ್ತೇವೆ. ಅವರು ತಪ್ಪು ಮಾಡಿದರೆ, ನಾವು ಅದನ್ನು ಅವರಿಗೆ ಸೂಚಿಸುತ್ತೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next