Advertisement

ಸಿದ್ದರಾಮ ಶ್ರೀಗೆ ಪಟ್ಟ: ಹುಟ್ಟೂರು ಬೀಳಗಿಯಲ್ಲಿ ಸಂತಸ

11:21 AM Oct 22, 2018 | |

ಬೀಳಗಿ: ಮೂಲತಃ ಇಲ್ಲಿಯ ಶ್ರೀ ಕಲ್ಮಠದ (ಹಿರೇಮಠ) ಸದ್ಯ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಪೀಠಾಧ್ಯಕ್ಷರಾಗಿರುವ ಸಿದ್ಧರಾಮ ಸ್ವಾಮೀಜಿ ಗದುಗಿನ ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿರುವುದಕ್ಕೆ ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿದೆ.

Advertisement

ಇಲ್ಲಿಯ ರುದ್ರಸ್ವಾಮಿ ಮತ್ತು ಶಾಂತಾಬಾಯಿ ದಂಪತಿ ಉದರದಲ್ಲಿ 12-12-1958ರಲ್ಲಿ ಜನಿಸಿದ ಸಿದ್ಧರಾಮ ಶ್ರೀಗಳು(ಕರವೀರಯ್ಯ) ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಶ್ರೀ ಕಲ್ಮಠದ ಶಾಖಾಮಠದಲ್ಲಿದ್ದುಕೊಂಡು 1ರಿಂದ 9ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು.

ನಂತರ ಬೀಳಗಿಗೆ ಬಂದು 10ನೇ ತರಗತಿ ವ್ಯಾಸಂಗ ಮಾಡಿದರು. ನಂತರ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶ್ರೀಮದ್‌ ಶಿವಯೋಗ ಮಂದಿರದಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತ ಅಧ್ಯಯನ ಮಾಡಿ, ಕಾಶಿಗೆ ಹೋಗಿ ಅಲ್ಲಿ 1978ರಿಂದ 1985ರವರೆಗೆ ಇದ್ದುಕೊಂಡು ಪಿಯು, ಬಿಎ ಹಾಗೂ ಇಂಗ್ಲಿಷ್‌, ಹಿಂದಿ, ಸಂಸ್ಕೃತದಲ್ಲಿ ಎಂಎ ಪೂರೈಸಿದರು. ತದ ನಂತರ ಧಾರವಾಡದಲ್ಲಿ ತತ್ವಶಾಸ್ತ್ರದಲ್ಲಿ ಎಂಎ ಅಧ್ಯಯನ ಮಾಡಿದರು. 1919ರಲ್ಲಿ ಬೀಳಗಿ ಶ್ರೀ ಕಲ್ಮಠದ ಪೀಠಾರೋಹಣ ಮಾಡಿದ ಗುರುಪಾದ ಶಿವಾಚಾರ್ಯರು 1971 ಡಿಸೆಂಬರ್‌ 1ರಲ್ಲಿ ಲಿಂಗೈಕ್ಯರಾದ ನಂತರ ಸಿದ್ಧರಾಮ ಶ್ರೀಗಳು(ಕರವೀರಯ್ಯ) ಶ್ರೀ ಕಲ್ಮಠದ ಪೀಠಾಧ್ಯಕ್ಷರಾದರು. ಆಗ ಅವರು ಶ್ರೀ ಗುರುಪಾದ ದೇವರು ಎಂದು ಮರುನಾಮಕರಣಗೊಂಡು
ಶ್ರೀಮಠದ ಆಡಳಿತವನ್ನು ನಡೆಸಿಕೊಂಡು ಹೋದರು.

ಶ್ರೀ ಸಿದ್ಧರಾಮ ಸ್ವಾಮಿಗಳಿಗೆ ಸಹೋದರ, ಸಹೋದರಿಯರಿದ್ದು, ಇವರ ಸಹೋದರ ಶಿವಾನಂದ ಬೀಳಗಿಯ ಕಲ್ಮಠದಲ್ಲಿ ಇದ್ದಾರೆ. ಶಿವಾನಂದ ಅವರ ಪುತ್ರ ಗುರುಪಾದ ದೇವರು ಇದೀಗ ಶ್ರೀ ಕಲ್ಮಠದ ಸೇವೆಯಲ್ಲಿ ತೊಡಗಿದ್ದಾರೆ. ಸಿದ್ಧರಾಮ ಸ್ವಾಮಿಗಳ ಹುಟ್ಟೂರು ಬೀಳಗಿ ಮಠದ ನಿಜ ನಾಮಧೇಯ ಹಿರೇಮಠವಾಗಿದ್ದರೂ, ಶ್ರೀಮಠವು ಕಲ್ಲಿನಿಂದ ನಿರ್ಮಾಣಗೊಂಡಿದ್ದರಿಂದ ಜನರೂಢಿಯಲ್ಲಿ ಕಲ್ಮಠ ಎಂದೇ ಗುರುತಿಸಿಕೊಂಡಿದೆ.

ಬೀಳಗಿಯವರಾದ ಸಿದ್ಧರಾಮ ಸ್ವಾಮಿಗಳವರ ಸೇವೆಯನ್ನು ಬೀಳಗಿ ಕಳೆದುಕೊಂಡಿತ್ತು. ನಾಗನೂರು ರುದ್ರಾಕ್ಷಿಮಠದ ಪೀಠಾಧಿಕಾರಿಯಾಗಿ
ಮಾಡಿದ ಕೆಲಸ ಬೀಳಗಿ ಕೀರ್ತಿಯನ್ನು ಎತ್ತಿ ಹಿಡಿದಿತ್ತು. ಗದುಗಿನ ತೋಂಟದಾರ್ಯ ಮಠಕ್ಕೆ ಶ್ರೀಗಳು ಉತ್ತರಾಧಿಕಾರಿಯಾಗಿ ನೇಮಕವಾಗುತ್ತಿರುವುದು ಬೀಳಗಿಯ ಭಾಗ್ಯವೆಂದೇ ಹೇಳಬೇಕು. ಇದರಿಂದ ನಮಗೂ ತುಂಬಾ ಹೆಮ್ಮೆಯಾಗಿದೆ. 
 ಗುರುಪಾದ ದೇವರು, ಶ್ರೀ ಕಲ್ಮಠ ಬೀಳಗಿ

Advertisement

„ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next