ನಂಜನಗೂಡು: ನಗರದ ರಥಬೀದಿಯಲ್ಲಿನ ಅರಮನೆ ಮಾಳದಲ್ಲಿ ಅತಿಕ್ರಮಿಸಿಕೊಂಡ ವರನ್ನು ತೆರವುಗೊಳಿಸಿ, ಆ ಜಾಗದಲ್ಲಿ ತಂತಿ ಬೇಲಿ ಹಾಕಿಸುವಲ್ಲಿ ತಹಶೀಲ್ದಾರ್ ಮಹೇಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಹಲವು ದಶಕಗಳಿಂದ ಈ ಸ್ಥಳದಲ್ಲಿ ಬೀಡು ಬಿಟ್ಟಿದ್ದ ಅಂಗಡಿಗಳನ್ನು ಖಾಲಿ ಮಾಡಿಸಿ, ಅರಮನೆ ಮಾಳವನ್ನು ಶ್ರೀಕಂಠೇಶ್ವರ ದೇವಸ್ಥಾನದ ಸುಪರ್ದಿಗೆ ಒಪ್ಪಿಸಿದ್ದಾರೆ.
ಇಲ್ಲಿನ ರಥ ಬೀದಿಗೆ ಹೊಂದಿಕೊಂಡಂತೆ ಶ್ರೀಕಂಠೇಶ್ವರ ದೇವಾಲಯದ ವಾಹನಮಂಟಪದ ಮುಂಭಾಗದಲ್ಲಿನ 170 x 100 ವಿಶಾಲವಾದ ಜಾಗವನ್ನು ಖಾಸಗಿ ವ್ಯಕ್ತಿಗಳ ಹಲವು ದಶಕಗಳಿಂದ ಆಕ್ರಮಿಸಿಕೊಂಡಿದ್ದರು. ಸೋಮವಾರ ಜೆಸಿಬಿ ಯಂತ್ರ ಹಾಗೂ ಪೊಲೀಸರು, ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್, ಅಂಗಡಿ ಹಾಗೂ ಮಳಿಗೆಗಳನ್ನು ತೆರವುಗೊಳಿಸಲುಮುಂದಾದಾಗ ಮಾಲೀಕರು ತಾವೇ ತೆರವು ಗೊಳಿಸುವುದಾಗಿ ಕಾಲಾವಕಾಶ ಕೇಳಿದ್ದರು. ಈ ವೇಳೆ, 42 ಗಂಟೆಯೊಳಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಗಡುವುನೀಡಿದ್ದರು.
ಗಡುವು ಮುಗಿಯುತ್ತಿದ್ದಂತೆ ಬುಧವಾರ ಮಧ್ಯಾಹ್ನ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತ ಕರಿಬಸವಯ್ಯ ಧಾವಿಸಿದರು. ಅಷ್ಟರಲ್ಲಾಗಲೇ ಬಹುತೇಕ ಅಂಗಡಿಗಳು ಖಾಲಿಯಾಗಿದ್ದವು. ಇನ್ನುಳಿದ ಅಂಗಡಿಗಳು ಕೂಡ ಖಾಲಿಯಾದವು. ಬಳಿಕ ಈ ಜಾಗಕ್ಕೆ ತಂತಿ ಬೇಲಿ ಹಾಕಿ ಭೂಮಿಯನ್ನು ವಶಕ್ಕೆ ಪಡೆಯಲಾಯಿತು.
ಕೈಮುಗಿದು ಅಭಿನಂದನೆ: ತಾಲೂಕು ಆಡಳಿತ ವಶಪಡಿಸಿಕೊಂಡ ಈ ಅರಮನೆಮಾಳವನ್ನು ಶ್ರೀಕಂಠೇಶ್ವರ ದೇವಾಲಯದ ಸುಪರ್ದಿಗೆ ನೀಡಿದ ತಹಶೀಲ್ದಾರ್‌ಮಹೇಶ್ ಕುಮಾರ್ ಅವರಿಗೆದೇವಾಲಯದ ವ್ಯವ ಸ್ಥಾಪನಾ ಮಂಡಳಿಅಧ್ಯಕ್ಷ ಇಂಧನಬಾಬು, ಸದಸ್ಯರಾದ ಶ್ರೀಧರ್, ಗೀರೀಶ್, ಶಶಿರೇಖಾ, ಮಂಜುಳಾ,ಮಧು ಮತ್ತಿತರರು ಕೈ ಮಗಿದು ಅಭಿನಂದನೆ ಸಲ್ಲಿಸಿದರು.
ಕಾಂಪೌಂಡ್ ನಿರ್ಮಾಣ: ಈ ವೇಳೆ ಪ್ರತಿಕ್ರಿಯಿಸಿದ ಮಂಡಳಿ ಅಧ್ಯಕ್ಷ ಇಂಧನ ಬಾಬು, ಈ ಬಾರಿ ಈ ಜಾಗವನ್ನು ಯಾವ ಕಾರಣಕ್ಕೂ ಖಾಲಿ ಬಿಡುವ ಪ್ರಶ್ನೆಯೇ ಇಲ್ಲ. ವಾರದೊಳಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಲಕ್ಷ್ಮಣ, ಅರ್ಚನಾ, ಶ್ರೀನಿವಾಸ್, ಮಹೇಶ್, ದೇವಾಲಯದ ಉಪವ್ಯವಸ್ಥಾಪಕ ವೆಂಕಟೇಶ ಪ್ರಸಾದ್, ಎಂಜಿನಿಯರ್ ರವಿಕುಮಾರ, ಆರ್‌ಐ ಪ್ರಕಾಶ್, ಅರಕ್ಷಕರಾದ ರಾಚಪ್ಪ, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.