Advertisement

PKL 11: ಬುಲ್ಸ್‌ ಗೆ ಹ್ಯಾಟ್ರಿಕ್‌ ಸೋಲು

10:35 PM Oct 22, 2024 | Team Udayavani |

ಹೈದರಾಬಾದ್‌: ಬೆಂಗಳೂರು ಬುಲ್ಸ್‌ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೆ ಸಿಲುಕಿದೆ. ಮಂಗಳವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧಾಸ್‌ ಕೈಯಲ್ಲಿ 36-57 ಅಂತರದಿಂದ ಮುಗ್ಗರಿಸಿತು.

Advertisement

ನಾಯಕ ಸುರೇಂದರ್‌ ಗಿಲ್‌ ಸರ್ವಾಧಿಕ 17 ಅಂಕ, ಆಲ್‌ರೌಂಡರ್‌ ಭರತ್‌ 14 ಅಂಕ ಗಳಿಸಿ ಯೋಧಾಸ್‌ಗೆ ಭರ್ಜರಿ ಮೇಲುಗೈ ಒದಗಿಸಿದರು. ಬುಲ್ಸ್‌ ಪರ ನಾಯಕ ಪದೀìಪ್‌ ನರ್ವಾಲ್‌ ಆಟ ಅಮೋಘ ಮಟ್ಟದಲ್ಲಿತ್ತು. ಅವರು 16 ಅಂಕ ಗಳಿಸಿ ಮಿಂಚಿದರು. ರೈಡರ್‌ಗಳಾದ ಜತಿನ್‌ 9, ಅಜಿಂಕ್ಯ ಪವಾರ್‌ 5 ಅಂಕ ಗಳಿಸಿದರು.

ಜೈಪುರ್‌ ಪ್ರಚಂಡ ಜಯ

ದಿನದ ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 52-22 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು. ಇದರೊಂದಿಗೆ ಜೈಪುರ್‌ ಎರಡೂ ಪಂದ್ಯಗಳನ್ನು ಜಯಿಸಿತು.

ನಾಯಕ ಅರ್ಜುನ್‌ ದೇಶ್ವಾಲ್‌ ಸರ್ವಾಧಿಕ 19 ರೈಡಿಂಗ್‌ ಅಂಕಗಳ ಮೂಲಕ ಜೈಪುರ್‌ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಮತ್ತೋರ್ವ ರೈಡರ್‌ ಅಭಿಜಿತ್‌ ಮಲಿಕ್‌ 8 ಅಂಕ ತಂದಿತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next