Advertisement

ರಾಹುಲ್‌, ಪಿಯುಶ್‌ ಫ್ಲಾಶ್‌ ನೆಟ್‌ ವಾಗ್ವಾದ

08:15 AM May 02, 2018 | Team Udayavani |

ಹೊಸದಿಲ್ಲಿ: 48 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಕೇಂದ್ರ ರೈಲ್ವೇ ಸಚಿವ ಪಿಯೂಶ್‌ ಗೋಯೆಲ್‌ ರಾಜೀನಾಮೆ ನೀಡಬೇಕು ಎಂದು ರಾಹುಲ್‌ ಗಾಂಧಿ ಮಂಗಳವಾರ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಿಯೂಶ್‌ ಗೋಯೆಲ್‌ ನಾನು ರಾಹುಲ್‌ರಂತೆ ನಾಮ್‌ದಾರ್‌ ಅಲ್ಲ, ಬದಲಿಗೆ ಕಾಮ್‌ದಾರ್‌ ಎಂದು ಹೇಳಿದ್ದಾರೆ.

Advertisement

ಫ್ಲಾಶ್‌ ನೆಟ್‌ ಎಂಬ ಕಂಪೆ‌ನಿಯಲ್ಲಿ ಪಿಯೂಶ್‌ ಹೂಡಿಕೆ ಹೊಂದಿದ್ದರು. ಇದನ್ನು ಪಿರಾಮಲ್‌ ಗ್ರೂಪ್‌ ಗೆ ಮುಖಬೆಲೆಗಿಂತ 1 ಸಾವಿರ ಪಟ್ಟು ಹೆಚ್ಚು ಮೊತ್ತಕ್ಕೆ ಮಾರಿಕೊಂಡಿದ್ದಾರೆ. ಪಿರಾಮಲ್‌ ಗ್ರೂಪ್‌ ವಿದ್ಯುತ್‌ ಕ್ಷೇತ್ರದಲ್ಲಿ ಹೂಡಿಕೆ ಆಸಕ್ತಿ ಹೊಂದಿದೆ ಎಂದು ರಾಹುಲ್‌ ಟ್ವಿಟರ್‌ನಲ್ಲಿ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಯೂಶ್‌, 2014 ಮೇಯಲ್ಲಿ ಸಚಿವನಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲು ನಾನು ವೃತ್ತಿಪರ ಚಾರ್ಟರ್ಡ್‌ ಅಕೌಂಟೆಂಟ್‌ ಹಾಗೂ ಇನ್ವೆಸ್ಟ್‌ ಮೆಂಟ್‌ ಬ್ಯಾಂಕರ್‌ ಆಗಿದ್ದೆ. ಆದರೆ ನಿಮ್ಮಂತೆ ನಾನು ಕೆಲಸವನ್ನೇ ಮಾಡದೇ ಜೀವಿಸುವ ಕಲೆ ತಿಳಿದಿಲ್ಲ. ನಾನು ಕಾಮ್‌ ದಾರ್‌ (ಕೆಲಸಗಾರ). ಬದಲಿಗೆ ನಾಮ್‌ ದಾರ್‌ (ಹೆಸರಿಂದಲೇ ಮೇಲೆ ಬಂದವರು) ಅಲ್ಲ ಎಂದಿದ್ದಾರೆ. ಇದೇ ಪದಪುಂಜವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಕೂಡ ಕರ್ನಾಟಕದಲ್ಲಿ ಚುನಾವಣೆ ಭಾಷಣ ಮಾಡುವಾಗ ರಾಹುಲ್‌ ಗಾಂಧಿಯನ್ನು ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next