Advertisement
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಈ ಆರ್ಥಿಕ ವರ್ಷದ ಒಟ್ಟು ರಫ್ತುಗಳನ್ನು 95 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಇದು ಆರ್ಥಿಕ ವರ್ಷ 18-19 ರಲ್ಲಿ ಮೊದಲ ತ್ರೈಮಾಸಿಕದ ರಫ್ತಿಗೆ ಹೋಲಿಸಿದರೆ ಶೇಕಡಾ 16 ರಷ್ಟು ಹೆಚ್ಚಾಗಿದೆ, ಅದು 82 ಬಿಲಿಯನ್ ಆಗಿತ್ತು. ಆರ್ಥಿಕ ವರ್ಷ 20 ರ ನಾಲ್ಕನೇ ತ್ರೈಮಾಸಿಕದಲ್ಲಿ ರಫ್ತು 90 ಬಿಲಿಯನ್ ದಾಟಿತ್ತು ಎಂದು ಅವರು ಹೇಳಿದ್ದಾರೆ.
Related Articles
Advertisement
ಇನ್ನು, ಆರ್ಥಿಕ ವರ್ಷ 20-21 ರ ಎಫ್ ಡಿ ಐ ಒಳಹರಿವು. 81.72 ಬಿಲಿಯನ್ ಆಗಿದ್ದರೆ, 2021 ರ ಏಪ್ರಿಲ್ ನಲ್ಲಿ ಎಫ್ ಡಿ ಐ ಒಳಹರಿವು 6.24 ಮಿಲಿಯನ್ ಆಗಿದ್ದು, ಇದು ಏಪ್ರಿಲ್ 2020 ಕ್ಕೆ ಹೋಲಿಸಿದರೆ 38 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಆರ್ಥಿಕತೆಯ ಮೇಲೆ ತೀವ್ರವಾದ ಹೊಡೆತ ನೀಡಿದರ ಹೊರತಾಗಿಯೂ, ದೇಶದ ರಫ್ತುಗಳಿಗೆ 2021 ರ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ವರೆಗೆ ಪರಿಣಾಮ ಬೀರಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : “ಪಿಂಕಿ ಎಲ್ಲಿ?’ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ