Advertisement

ಮೀನರಾಶಿಯವರು  ಗಂಭೀರ ಗುಣ,  ತೂಕದ ಮಾತು, ದೈವಪೂಜಕರು…

09:30 PM Sep 23, 2016 | |

ಬೇಕಾಬಿಟ್ಟಿ ಮಾತನಾಡಿ ಕೆಡುವ ಜನರಲ್ಲ  ಮೀನರಾಶೀಯವರು. ತೂಕದ ಮಾತು ಗಂಭೀರ ಸ್ವಭಾವ. ಹಾಗೆಂದು ಅಹಂಕಾರವೆಂಬುದು ಎಂದೂ ಇವರ ಸ್ವತ್ತಲ್ಲ. ನೆನಗುದಿಗೆ ಬಿದ್ದು ಕೊಳೆಯುತ್ತಿರುವ ವಿಷಯವನ್ನು ನಿರ್ಮಲಗೊಳಿಸಿ ಮುಂದಿನ ಒಂದು ಶುಭ್ರತೆಗೆ ಹೊಸದಾರಿ ಮಾಡಿಕೊಡುವ ಜಾಣ್ಮೆ ಈ ರಾಶಿಯವರಿಗೆ ಸಹಜಗುಣ. ಸದಾ ಲವಲವಿಕೆಯಿಂದ ಇರಬಲ್ಲರು. ಗುರುಗ್ರಹದ ಕುಜಗ್ರಹದ ಸಿದ್ಧಿ ಒಂದಕ್ಕೊಂದು ಸಮತೋಲನದಲ್ಲಿ ಬೆಸೆದಾಗ ಈ ರಾಶಿಯ ಜನ ಮುಟ್ಟಿದ್ದೆಲ್ಲ ಚಿನ್ನ. ಬಹುತೇಕ ಚಂದ್ರನ ಬಲದಲ್ಲಿ ತೊಂದರೆ ಏಳದೆಯೇ ಗಜಕೇಸರಿ ಯೋಗ ದಕ್ಕಿದ‌ರೆ ಬಹುದೊಡ್ಡ ಜನನಾಯಕ ಶಕ್ತಿ ಚತುರೋಕ್ತಿ ಆಡಳಿತ ಸಂಪನ್ನತೆಗಳೆಲ್ಲ ಇವರಲ್ಲಿ ಪೂರ್ತಿ ಕೈವಶ. ಸ್ನೇಹಕ್ಕೆ ತುಂಬಾ ಗೌರವ ನೀಡುವ ಮಂದಿ ಇವರು. ಹಳತೆಲ್ಲವೂ ಒಗೆಯುವ ವಸ್ತುಗಳಲ್ಲಿ ಎಂಬುದನ್ನರಿತು ಹಳೆಯದನ್ನು ಹೊಳೆಯುವ ಚಿನ್ನವಾಗಿಸುವ ಶಕ್ತಿ ಇವರಿಗೆ ಸದಾ ಕರಗತ. ಬಹಳಬಾರಿ ಒಬ್ಬಂಟಿಯಾಗಿ ಗುರುತಿಸಿಕೊಳ್ಳಲು ಉತ್ಸಾಹರು ಎಂಬಂತೆ ಇವರು ಕಂಡರೂ ಇವರು ಸಂಘಜೀವಿಗಳು. ಎಲ್ಲರೂ ಬೇಕು ಎಂಬುದು ಇವರ ಹಿರಿಯ ಗುಣ. ಗುರು, ಕುಜ, ಚಂದ್ರ ಗ್ರಹಗಳ ಅಪರೂಪದ ಒಕ್ಕೂಟ ಅಥವಾ ಪರಸ್ಪರ ದೃಷ್ಟಿಬಲಗಳು ಇವರಿಗೆ ರಾಜಯೋಗ ತರಬಲ್ಲವು. ಸಂಕಟ ಎದುರಾದಾಗ ಎಂಥದೇ ತಡೆಯನ್ನು ಮೀರಿ ಗೆಲುವು ಸಾಧಿಸಬಲ್ಲರು. ಯಾರಿಗೂ ಬಗ್ಗಿ ನಡೆಯುವುದು ಇವರ ಸ್ವಭಾವವೇ ಅಲ್ಲ. ಸೂರ್ಯನೊಟ್ಟಿಗೆ ಶನಿ ಮಹಾರಾಜ ಅಥವಾ ಶೂಕ್ರ ಜೊತೆ ಹೊಂದಾಣಿಕೆ ಇದ್ದರೆ ಜೀವನದ ಕ್ಲುಪ್ತ ಸಮಯದಲ್ಲಿ ವೈಫ‌ಲ್ಯ ಇವರಿಗೆ ಎದುರಾಗಬಹುದು. ಚಂದ್ರನಿಗೆ ಶನೈಶ್ಚರನ ನೆರಳು ದೃಷ್ಟಿ ಬೀಳಲೇ ಬಾರದು. ಬಿದ್ದರೆ ಈ ರಾಶಿಯವರಿಗೆ ಅದೃಷ್ಟಚತುಸ್ಸಾಗರ ಯೋಗ ಕುಂಡಲಿಯಲ್ಲಿ ದಕ್ಕಿದರೆ ಪರ್ವತವನ್ನೇ ಕುಟ್ಟಿ ಪುಡಿಮಾಡಬಲ್ಲ ಶಕ್ತಿ ಇವರಿಗಿದೆ.

Advertisement

ಮೀನರಾಶಿಯ ಪ್ರತಿಭಾವಂತರು

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಗುಡುಗಿದ ಲೋಕಮಾನ್ಯ ಬಾಲಗಂಗಾಧರ ತಿಲಕ್‌, ಗಣಿತದ  ರಾಮಾನುಜಂ, ಭಾರತದ ವರಕವಿ ರವೀಂದ್ರನಾಥ ಟ್ಯಾಗೋರ್‌, ಕಮ್ಯುನಿಸಂ ತತ್ವವನ್ನು ಉಕ್ಕಿನ ಮುಷ್ಟಿಯನ್ನಾಗಿಸಿ ಎದುರಾಳಿಗಳನ್ನು ನಡುಗಿಸಿದ ಸ್ಟಾಲಿನ್‌, ಹಿಂದಿ ಚಿತ್ರರಂಗದ  ಚಿರಯುವಕ ದೇವಾನಂದ್‌, ನಟಿ ಜೂಹಿ ಚಾವ್ಲಾ. ಮಾಧುರಿ ದೀಕ್ಷಿತ್‌, ಇತ್ತೀಚೆಗೆ ಸ್ತನ ಚಿಕಿತ್ಸೆಗೆ ಒಳಗಾಗಿ ಸುದ್ದಿ ಮಾಡಿದ ಏಜಲಿನಾ ಜೋಲಿ, ವಿರೋಧ ಪಕ್ಷವನ್ನೇ ಇಡಿಯಾಗಿ ಎತ್ತಂಗಡಿ ಮಾಡಿ ತನ್ನ ಬಲ ವರ್ಧಿಸಿಕೊಂಡು ಮುಖ್ಯಮಂತ್ರಿಯಾಗಿದ್ದ ಭಜನ್‌ ಲಾಲ್‌, ಉದ್ಯಮಿ ಜಮ್ನಾಲಾಲ್‌ ಬಜಾಜ್‌, ಕೆಡವಲಾಗದ ಗೋಡೆ ಎಂದು ಕ್ರಿಕೆಟ್‌ ಪ್ರಿಯರಿಗೆ ರೋಮಾಂಚನ ತಂದ ರಾಹುಲ್‌ ದ್ರಾಡ್‌, ಜಗತ್ತಿನ ಇನ್‌ಫ‌ರ್‌ ಮೇಷನ್‌ ಟೆಕ್ನಾಲಜಿಯ ಹೊಸ ಭಾಷ್ಯ ಬರೆದ ಬಿಲ್‌ ಗೇಟ್ಸ್‌ ಹಸ್ತರೇಖಾ ಪ್ರವೀಣ ಖೀರೋ, ಫ್ರಾನ್ಸ್‌ ಮಾಜಿ ಅಧ್ಯಕ್ಷ ಚಾರ್ಲ್ಸ್‌ ಡಿಗಾಲ್‌, ಆಡಳಿತ ಪ್ರೇರಣೆ ಮಾರ್ಗರೇಟ್‌ ಆಳ್ವ, ಶೀಲಾ ದೀಕ್ಷಿ$ತ್‌, ಶ್ರೀಲಂಕಾ ಪಾಲಿಗೆ ಏನೆಲ್ಲಾ ಆಗಿದ್ದ ತಮಿಳರಿಗೆ ಸ್ವಾಭಿಮಾನ ಉಕ್ಕೆಬ್ಬಿಸಿದ್ದ ಪ್ರಭಾಕರನ್‌, ನಾಝಿ ನಾಯಕನಾಗಿ ಸಾಕಷ್ಟು ಕುಖ್ಯಾತನಾಗಿದ್ದ ನಂತರ ಆತ್ಮಹತ್ಯೆಗೆ ಶರಣಾದ ಹಿಮ್ಲರ್‌ ಹೆನ್ರಿಕ್‌, ಕನಸಿನ ಕನ್ಯೆ ಹೇಮಮಾಲಿನಿ, ಪತ್ರಮಾತೆ ಎಂದು ಹೆಸರಾದ ಮಾತೆ ಅಮೃತಾನಂದ ದೇ, ಹೆಸರಾಂತ ನಾಟಕಕಾರ ಗಿರೀರ್ಶ್‌ ಕಾರ್ನಾಡ್‌, ಹರ್ಯಾಣಾದ ಓಂ ಪ್ರಕಾಶ್‌ ಚೌಟಾಲ, ಭಾರತವನ್ನು ಜಾಗತೀಕರಣ ಉದಾರೀಕರಣದ ಹೊಸ್ತಿಲಲ್ಲಿ ನಡೆಸಿತಂದ ಬಾಬ್ರಿ ಮಸೀದಿ ವಿಷಯದಲ್ಲಿ ಪ್ರಶ್ನಾರ್ಥಕವಾದ ನಮ್ಮ ಮಾಜಿ ಪ್ರಧಾನಿ ಪಿ.. ನರಸಿಂಹರಾವ್‌, ಪ್ರಖ್ಯಾತ ಲೇಖಕ ಮಾಕ್‌ ì ಟೆÌ„ನ್‌, ಜಗದ ನೆತ್ತಿಯಾದ ಹಿಮಾಲಯವನ್ನು ಪ್ರಪ್ರಥಮವಾಗಿ ಏರಿದ ಎಡ್ಮಂಡ್‌ ಹಿಲರಿ, ಅಮೆರಿಕಾದ ಅಧ್ಯಕ್ಷ ಪಟ್ಟಕ್ಕೆ ಕಣ್ಣಿಟ್ಟ ಹಿಲರಿ ಕ್ಲಿಂಟನ್‌, ಭಾರತದ ತೋಳಾದ ಬಂಗಾಲವನ್ನೇ ಕತ್ತರಿಸದ ಲಾರ್ಡ್‌ ಕರ್ಜನ್‌ ಭಾರತದ ಪ್ರಧಾನಿ ಪಟ್ಟಕ್ಕಾಗಿ ಸೈಡ್‌ ವಿಂಗ್‌ನಲ್ಲಿ ಮೇಕಪ್‌ ಹಾಕಿ ಕುಳಿತಿರುವ ಮುಲಾಯಂ ಸಿಂಗ್‌ ಯಾದವ್‌ ಮುಂತಾದ ದೊಡ್ಡ ಯಾದಿಯೇ ಇದೆ. 

ಶನಿಕಾಟದಿಂದ ಬವಣೆ ಗೊಳಗಾದ ರಾಹುಲ್‌ ದ್ರಾವಿಡ್‌ ಹಾಗೂ ಏಂಜಲಿನಾ ಜ್ಯೂಲಿ

ರಾಹುಲ್‌ ದ್ರಾವಿಡ್‌ ಕ್ರಿಕೆಟ್‌ ಆಟಗಾರನಾಗಿ ಪ್ರಪಂಚದ ಅದ್ಭುತ ಪ್ರತಿಭಾವಂತ. ದೊಡ್ಡ ಸಾಧನೆ ಇವರ ಶಕ್ತಿ ಆದರೆ ಶನಿಕಾಟ ಬಂದಾಗಲೆಲ್ಲಾ ಒಂದಲ್ಲಾ ಒಂದು ಆಘಾತಕ್ಕೆ ಒಳಗಾಗಿದ್ದಾರೆ. ಪಂಚಮ ಶನಿಕಾಟ ನಡೆದಿದ್ದಾಗ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ರಿಕೆಟ್‌ ವರ್ಲ್ಡ್ಕಪ್‌ ಪಂದ್ಯಾವಳಿಯಲ್ಲಿ ಭಾರತದ ನಾಯಕನಾಗಿ ತಂಡವನ್ನು ಮುನ್ನೆಡಸಲು ನಿಯೋಜಿತರಾದವರು ದ್ರಾವಿಡ್‌. ಆದರೆ ಭಾರತ ತಮ್ಮ ಪ್ರಥಮ ಪಂದ್ಯದಲ್ಲೇ ಎಳಸು ಬಾಂಗ್ಲಾದೇಶದವರಿಂದ ಸೋಲಿನ ಕಹಿ ಅನುಭವಿಸಿತು. ಮತ್ತೆ ಚೇತರಿಕೆ ದುಸ್ತರವಾಯ್ತು. ನಾಕೌಟ್‌ ಹರಿತವನ್ನು ತಲುಪಲಾಗದೆ ತಂಡ ತವರಿಗೆ ಹಿಂತಿರುಗಿತು. ಮನನೊಂದ ದ್ರಾವಿಡ್‌ ನಾಯಕತ್ವದಿಂದ ಹಿಂದೆ ಸರಿದರು. ಕೋಪಗೊಂಡ ಆಯ್ಕೆ ಸಮಿತಿ ದ್ರಾವಿಡರನ್ನು ಏಕದಿನ ಪಂದ್ಯಾವಳಿಯಿಂದ ದೂರವಿರಿಸಿತು. ಸಧ್ಯ ಅಷ್ಟಮ ಶನಿಕಾಟ ಬಂದಾಗ ತವರಿನ ಅಂಗಳದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಹಣ್ಣುಗಾಯಿ ನೀರುಗಾಯಿ ಆಯಿತು. ಗೋಡೆಯ ಖ್ಯಾತಿಯ ದ್ರಾವಿಡ್‌ ಕೂಡಾ ಮಿಂಚಲಾಗಲಿಲ್ಲ. ಟೆಸ್ಟ್‌ ಪಂದ್ಯವೂ ಸೇರಿದಂತೆ ದ್ರಾವಿಡ್‌ ನಿವೃತ್ತಿ ಪಡೆದರು. ಇವರ ನಾಯಕತ್ವದ ರಾಜಸ್ತಾನದ ರಾಯಲ್ಸ್‌ ಕೂಡಾ ಎಲ್ಲವೂ ಸರಿ ಇದೆ ಎಂಬಲ್ಲಿಂದ ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಪ್ರಾಮಾಣೀಕ ದ್ರಾವಿಡರಿಗೂ ನೋವು ತರುವ ಹಂತಕ್ಕೆ ಬಂದು ತಲುಪಿತ್ತು. ಪೂರ್ವ ಪುಣ್ಯಸ್ಥಾನದ ಅಧಿಪತಿ ಚಂದ್ರನಿಗೆ ಶನೈಶ್ಚರನಿಂದ ತೊಂದರೆ ಎದುರಾದಾಗಲೆಲ್ಲ ಮನೋಬಲವೇ ಕುಸಿಯುವ ನೋವನ್ನು ದ್ರಾವಿಡ್‌ ಅನುಭವಿಸಿದ್ದಾರೆ.

Advertisement

ಏಂಜಲಿನಾ ಜೂಲಿ ಮನೋಹರಿ. ಹಾಲಿವುಡ್‌ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಇಟ್ಟ ಲಕಾಮಿನಿ. ಈಕೆಯ ಎದೆಯ ಸೊಗಸು ರಸಿಕರ ಅಭಿಮಾನಿಗಳ ಮಾಧ್ಯಮದವರ ದೊಡ್ಡ ಸುದ್ಧಿ ಇರುತ್ತಿತ್ತು. ಚಂದ್ರನೇ ಈಕೆಯ ಆರೋಗ್ಯ ಲವಲವಿಕೆ ಹಾಗೂ ಜೀವನೋತ್ಸಾಹಗಳ ಅಧಿಪತಿ. ಆದರೆ ಚಂದ್ರನ ಮೇಲೆ ತನ್ನ ದೃಷ್ಟಿ ಇರಿಸಿದ್ದ ಶನೈಶ್ಚರ ಸಧ್ಯ ಅಷ್ಟಮ ಶನಿಕಾಟದ ಸಂದರ್ಭದಲ್ಲಿ ಜೂಲಿಯ ಎದೆಯ ಸೌದರ್ಯಕ್ಕೇ ಧಕ್ಕೆ ಇಟ್ಟ. ಕರ್ಕಸ್ಥಾನದ ಅಧಿಪತಿ ಚಂದ್ರನನ್ನು ತಡ ಕ್ಯಾನ್ಸರ್‌ ಸೂಚನೆಗಳಿಂದ ಜೂಲಿಯನ್ನು ಕಂಗೆಡಿಸಿದ. ಪರಿಣಾಮ ಜೂಲಿ ಶಸ್ತ್ರಚಿಕಿತ್ಸೆಗೆ ಒಳಗಾದಳು.

ನಾಟಕಕಾರ ಗಿರೀಶ್‌ ಕಾರ್ನಾಡ್‌ ಮತ್ತು ಸ್ವಪ್ನ ಸುಂದರಿ ಹೇಮಮಾಲಿನಿ
ಚರಿತ್ರೆಯ ಭಾಗದಲ್ಲಿ ಕಾರ್ನಾಡ್‌ ತಮ್ಮ ಮಡದಿಯಾಗಿ ಸ್ವೀಕರಿಸಲು ಹೇಮಮಾಲಿನಿಯ ಬಗ್ಗೆ ಪ್ರಸ್ಥಾಪ ಮಾಡಿದ್ದರು. ಹೇಮಮಾಲಿನಿಯವರ ಅಮ್ಮ ಜಯಾ ಚಕ್ರವರ್ತಿಯವರ ಬಗ್ಗೆ ವಿವರಿಸುತ್ತಾರೆ. ಹೇಮಾ ದಡ್ಡಿ ಎಂದೂ ಆಕ್ಷೇಪಿಸುತ್ತಾರೆ. ಕಾರ್ನಾಡ್‌ ಅವರ ಚಂದ್ರನ ಉಪಸ್ಥಿತಿ ಚಂದ್ರನ ನಕ್ಷತ್ರದಲ್ಲಿ ಇರುವುದು ಅವರ ಜಾತಕದಲ್ಲಿ ಅವರ ನಿರ್ಣಯಗಳ ವಿಚಾರದಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾನೆ. ಕುಜಶುಕ್ರರೂ ಕಾರ್ನಾಡ್‌ ಜಾತಕದ ಗಮನಾರ್ಹ ಬಾಧಕರು. ಹೇಮಾಮಾಲಿನಿಯವರ ಚಂದ್ರನ ಉಪಸ್ಥಿತಿ ಅನುಪಮವಾದ ರೂಪರಾಶಿಗೆ ಕಾರಣವಾಗುವ ನಿಟ್ಟಿನದು. ಎಲ್ಲರಿಗೂ ತಿಳಿದಂತೆ ಪತ್ನಿ ಹಾಗೂ ಪುತ್ರರನ್ನು ಆಗಲೇ ಹೊಂದಿದ್ದ ಧರ್ಮೇಂದ್ರ ಅವರ ಜೊತೆ ಹೇಮಾ ಮದುವೆಯಾಗುವುದಕ್ಕೆ ಶನೈಶ್ಚರನೇ ಪ್ರೇರಣೆ. ಆದರೆ ಕಾರ್ನಾಡ್‌ ಹೇಳುವಂತೆ ಹಾಮೇ ಜಾತಕದ ಮೇಲಿಂದ ಹೇಳುವುದಾದರೆ ಹೇಮಾ ದಡ್ಡಿಯಂತೂ ಅಲ್ಲ. 

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next