Advertisement

ಮೋದಿಗೆ ಮತ ಹಾಕಿ ಯುವಜನತೆ ಪರಿತಪಿಸುತ್ತಿದ್ದಾರೆ : ಮಾಜಿ ಶಾಸಕ ಕೆ.ವೆಂಕಟೇಶ್

08:13 PM Nov 17, 2021 | Team Udayavani |

ಪಿರಿಯಾಪಟ್ಟಣ : ಮೋದಿ ನಂಬಿ ಮೋದಿಗಾಗಿ ಮತಹಾಕಿದ ಯುವ ಜನತೆ ಇಂದು ಬೆಲೆ ಏರಿಕೆಯಿಂದ ಭ್ರಮನಿಸರಾಗಿದ್ಧಾರೆ ಎಂದು ಶಾಸಕ ಕೆ.ವೆಂಟೇಶ್ ತಿಳಿಸಿದರು.

Advertisement

ತಾಲ್ಲೂಕಿನ ಮಾಲಂಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಜನಪತ್ರಿನಿಧಿ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರಕಾರ ಲಕ್ಷಾಂತರ ಜನಕ್ಕೆ ಉದ್ಯೋಗ ಭರವಸೆ ನೀಡಿತ್ತು ಆದರೆ ಇಂದು ಅನೇಕ ಯುವಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಮದ್ಯಮ ವರ್ಗದಜನರು ಡಿಸೇಲ್‌, ಪೆಟ್ರೋಲ್, ಗ್ಯಾಸ್‌ಬೆಲೆ ಏರಿಕೆಯಿಂದ ಕಂಗಾಲಾಗಿದ್ದು ಜೀವನ ನಡೆಸುವುದೆ ಕಷ್ಟಕರವಾಗಿದೆ. ಬಡ ಹಾಗೂ ಮದ್ಯಮ ವರ್ಗ ಬೆಲೆ ಏರಿಕೆಯಿಂದ ತತ್ತಿಸಿದರೆ, ರೈತರು ರಸಗೊಬ್ಬರ ಸೇರಿದಂತೆ ಬೆಲೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಬಡವರ ಜನರ ಹಿತಕ್ಕಾಗಿ ಕಾಂಗ್ರೆಸ್ ಸರಕಾರ ಸ್ಥಾಪಿಸಿದ ಏರ್‌ಇಂಡಿಯಾ, ಎಚ್‌ಎಲ್, ರೈಲ್ವೆ ಮುಂತಾದ ಸರಕಾರಿ ಸ್ವಾಮ್ಯದ ಸ್ವತ್ತುಗಳು ಖಾಸಗಿಯವರ ಪಾಲಾಗಿ ಮುಂದಿನ ದಿನಗಳಲ್ಲಿ ಮೀಸಲಾತಿಯು ದೊರಕದಂತಾಗುತ್ತದೆ. ಹೀಗೆ ಬಡವರ ದಲಿತರ ಓಟುಪಡೆದ ಬಿಜೆಪಿ ಸರಕಾರಗಳು ಅವರನ್ನು ಅಕ್ಷರ ಸಹ ಬೀದಿಪಾಲು ಮಾಡುತ್ತಿವೆ. ಇನ್ನಾದರೂ ಮತದಾರರು ಮುಂದಿನ ಚುನಾವಣೆಗಳಲ್ಲಿ ಎಚ್ಚೆತ್ತುಕೊಂಡು ಮತಚಲಾಯಿಸಬೇಕು ಬಿಜೆಪಿಯನ್ನು ತೊಡೆಯುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದು ತಿಳಿಸಿದರು.
ಕುಟುಂಬಕ್ಕಾಗಿ ಪಕ್ಷ

ರಾಜ್ಯದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿ ಬಿಜೆಪಿಗೆ ಸಹಕಾರ ನೀಡಿದೆ ಇದನ್ನು ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಪಕ್ಷ ಇರುವುದು ರೈತರ ಜನರ ಹಿತಕಾಯುವುದಕ್ಕಾಗಿ ಅಲ್ಲ ಅವರ ಹೆಸರು ಹೇಳಿ ಮತಗಿಟ್ಟಿಸಿಕೊಂಡು ತಮ್ಮ ಕುಟುಂಬದ ಮಕ್ಕಳ, ಮೊಮ್ಮಕ್ಕಳನ್ನು ಅಧಿಕಾರಕ್ಕೆ ತರಲು ಹಾತೊರೆಯುತ್ತಿರುವ ಜೆಡಿಎಸ್‌ ಪಕ್ಷ ಕುಟುಂಬದ ಉದ್ದಾರಕ್ಕಾಗಿ ಇದೆಯೆ ಹೊರತು ರಾಜ್ಯದ ಬಡವರ ಪರ ರೈತರ ಪರ ಕಾಳಜಿ ಇಲ್ಲವಾಗಿದೆ ಆದ್ದರಿಂದ ತಾಲೂಕಿನಲ್ಲಿ ಸ್ವಾರ್ಥ ರಾಜಕಾರಣ ನಡೆಯುತ್ತಿದ್ದು ಈಗಾಗಲೆ ಜನರು ಇದರ ಬಗ್ಗೆ ಅರಿವು ಮೂಡಿಸಿಕೊಂಡಿದ್ಧಾರೆ.

ಇದನ್ನೂ ಓದಿ :ಸಿಸಿಟಿವಿಯಲ್ಲಿ ಸೆರೆಯಾಯ್ತು ಬೈಕ್ – ಲಾರಿ ಭೀಕರ ಅಪಘಾತದ ದೃಶ್ಯ

ಎಂಜಿಎನ್ಆರ್ಇಜಿ ನಾನೇ ತಂದಿದ್ದು ಎಂದು ಬೀಗುತ್ತಿರುವ ಸಂಸದ ಮತ್ತು ಶಾಸಕ:

Advertisement

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಬಡ ಕೂಲಿ ಕಾರ್ಮಿಕರಿಗೆ ಕನಿಷ್ಠ ಉದ್ಯೋಗ ನೀಡಲೆಂದು 2008 ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದರು ಆದರೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ ಮಹದೇವ್ ನಾವೇ ಅದನ್ನು ಜಾರಿಗೆ ತಂದಿದ್ದೇವೆ ಎಂದು ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದ ಅವರು ಜನತೆ ನನಗೆ ಅಧಿಕಾರ ಕೊಟ್ಟಾಗ ನಿರ್ವಂಚನೆಯಿಂದ ಪ್ರಾಮಾಣಿಕತೆಯಿಂದ ಸಿಕ್ಕ ಅಧಿಕಾರದಲ್ಲಿ ಅಭಿವೃದ್ದಿ ಮಾಡಿದ್ದೇನೆ ಮತ್ತಷ್ಟು ಅಭಿವೃದ್ದಿ ಮಾಡಲು ಜನರು ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡಿದರೆ ಸಾದ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರಾದ ರಹಮತ್‌ಜಾನ್‌ಬಾಬು, ಡಿ.ಟಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಜೆ.ಬಸವರಾಜು,ತಾ.ಪಂ.ಮಾಜಿ ಅಧ್ಯಕ್ಷ ನಿರೂಪರಾಜೇಶ್, ಸದಸ್ಯರಾದ ಎಸ್.ರಾಮುಐಲಾಪುರ, ಶ್ರೀನಿವಾಸ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಬಿ.ವಿ.ಅನಿತಾ, ತಾ.ಅಧ್ಯಕ್ಷ ಸರಸ್ವತಿ, ಎಸ್ಸಿಘಟಕದ ಅಧ್ಯಕ್ಷ ಪಿ.ಮಹದೇವ್, ಮಾಲಂಗಿ ಗ್ರಾ.ಪಂ.ಅಧ್ಯಕ್ಷ ದೇವೇಂದ್ರ, ಗ್ರಾ.ಪಂ.ಸದಸ್ಯರಾದ ಹರೀಶ್, ಮಾದಯ್ಯ, ಅಬ್ಜಲ್, ರವಿ, ಜಮೃದ್, ಸೋಹಿಬ್, ರವಿ, ಮುಖಂಡರಾದ ಜಯಣ್ಣ, ಚಂದ್ರೇಗೌಡ, ಲಕ್ಷ್ಮಣೇಗೌಡ, ಶಿವಣ್ಣ, ರಾಜನಾಯಕ, ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next