Advertisement

Pakistan: ಖೈಬರ್‌-ಪಕ್ತುಂಕ್ವಾ ಪ್ರಾಂತ್ಯದಲ್ಲಿ ಪೈರಿಂಗ್‌: ನಾಲ್ವರ ಸಾವು

09:17 PM Jan 07, 2024 | Team Udayavani |

ಪೇಶಾವರ: ಪಾಕಿಸ್ಥಾನದ ಖೈಬರ್‌-ಪಕ್ತುಂಕ್ವಾ  ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಎರಡು ವಾಹನಗಳ ಮೇಲೆ ಗುಂಡು ಹಾರಿಸಿದ ಪರಿಣಾಮ 4 ಜನರು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ. ಪರಚಿನಾರ್‌-ಪೇಶಾವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ವಾಹನಗಳನ್ನು ಗುರಿಯಾಗಿಸಿ ಖುರ್ರಂ ಜಿಲ್ಲೆಯಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ರಕ್ಷಣ ಸಿಬಂದಿ ಸಹಿತ ನಾಲ್ವರು ಸಾವನ್ನಪ್ಪಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಳೆದ ತಿಂಗಳು ಇಲ್ಲಿನ ಗಿಲ್ಗಿಟ್‌-ಬಾಲ್ಟಿಸ್ಥಾನ್‌ನ ಜಿಲಾಸ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 9 ಜನ ಸಾವನ್ನಪ್ಪಿದ್ದರು. 2023ರಲ್ಲಿ ಪಕ್ತುಂಕ್ವಾ ಪ್ರಾಂತ್ಯದಲ್ಲಿ 419 ಉಗ್ರ ದಾಳಿಗಳು ನಡೆದಿದ್ದು ಇದರಲ್ಲಿ 620 ಜನರು ಸಾವನ್ನಪ್ಪಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next