ಮನುಷ್ಯನಲ್ಲಿ ಯಾವ ರೀತಿ ವಿವಿಧ ಗುಣಗಳಿರುತ್ತೆಯೋ, ಅದೇ ರೀತಿ ರಸಾಯನ ಶಾಸ್ತ್ರಗಳಲ್ಲಿಯೂ ವಿವಿಧ ಗುಣಗಳಿಗೆ. ನ್ಯಾಚುರಲ್ ಮತ್ತು ಸಿಂಥೆಟಿಕ್ ಎಂಬ ಎರಡು ಪ್ರಕಾರಗಳನ್ನು ರಸಾಯನಶಾಸ್ತ್ರದಲ್ಲಿ ಕಾಣಬಹುದು.
Advertisement
. ರಸಾಯನಶಾಸ್ತ್ರ ಕಲಿಕಾ ವಿಧಾನಗಳಲ್ಲಿ ಏನಾದರೂ ಬದಲಾವಣೆಯಾಗಬೇಕು ಎಂದೆನಿಸುತ್ತಾ?ರಸಾಯನ ಶಾಸ್ತ್ರ ಕಲಿಕಾ ವಿಧಾನಗಳಲ್ಲಿ ಪ್ರಾಯೋಗಿಕ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳ ಕೊಠಡಿಯೊಳಗೆ ಕಲಿಸಿಕೊಡುತ್ತಿರುವ ಪಠ್ಯಕ್ರಮ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರಾಯೋಗಿಕ ಅಧ್ಯಯನವೂ ಮುಖ್ಯವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಮಾತ್ರ ರಸಾಯನಶಾಸ್ತ್ರ ಕಲಿಕೆಗೆ ಪೂರಕವಾಗುವುದಿಲ್ಲ. ಅಲ್ಲದೆ, ಯಾವುದೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಆಧಾರದಲ್ಲಿ ಮಾತ್ರ ಅಳೆಯಲು ಸಾಧ್ಯವಿಲ್ಲ. . ರಸಾಯನ ಶಾಸ್ತ್ರ ಪಠ್ಯಕ್ರಮದಲ್ಲಿ ಆಗಬೇಕಾದ ಬದಲಾವಣೆಗಳೇನು?
ರಸಾಯನಶಾಸ್ತ್ರ ಪಠ್ಯಕ್ರಮದಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಕೂಡ ಈ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಯಾವುದಾದರೂ ಕೈಗಾರಿಕಾ ಪ್ರದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿಯುವಂತಾಗಬೇಕು.
Related Articles
ಇಂದಿನ ಕೆಲ ಕಾಲೇಜುಗಳಲ್ಲಿ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಉಪಕರಣಗಳಿರುವುದಿಲ್ಲ. ಅಲ್ಲದೆ ಈ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಸಂಶೋಧನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಅನುಸರಿಕೊಂಡು ಸಂದರ್ಭಕ್ಕೆ ತಕ್ಕಂತೆ ಅಪ್‌ಡೇಟ್ ಅಗಬೇಕು.
Advertisement
. ಟೆಕ್ನಾಲಜಿ ಯುಗದಲ್ಲಿ ನಾವಿರುವಾಗ ರಸಾಯನಶಾಸ್ತ್ರದ ಮುಂದಿನ ಭವಿಷ್ಯವೇನು?ರಸಾಯನಶಾಸ್ತ್ರಕ್ಕೆ ಭವಿಷ್ಯವಿದೆ. ಇದು ಮಾನವನ ಜೀವನಕ್ಕೆ ಸಂಬಂಧಪಟ್ಟದ್ದಾಗಿದೆ. ದಿನಂಪ್ರತಿ ನಾವು ಉಪಯೋಗಿಸುವ ಅನೇಕ ವಸ್ತುಗಳಲ್ಲಿಯೂ ರಸಾಯನಶಾಸ್ತ್ರದ ಉಪಯೋಗವಿದೆ.