ಆವರಣದಲ್ಲೇ ರಾಶಿ ಹಾಕಲಾದ ತ್ಯಾಜ್ಯವನ್ನು ಸವಣೂರು ಗ್ರಾ.ಪಂ. ವತಿಯಿಂದ ಜೂ. 20ರಂದು ತೆರವುಗೊಳಿಸಲಾಯಿತು.
Advertisement
ಈ ಘಟಕದ ಕುರಿತು ಜೂ. 12ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಪರಿಗಣಿಸಿ ಸ್ವತ್ಛ ಭಾರತ್ ಜಿಲ್ಲಾ ಸಂಯೋಜಕಿ ಮಂಜುಳಾ ಅವರು ಈ ಕುರಿತು ಸೂಕ್ತ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರು. ಇದರ ಅನ್ವಯ ಜೂ. 19ರಂದು ತಾ.ಪಂ. ಸಹಾಯಕ ನಿರ್ದೇಶಕ ನವೀನ್ ಭಂಡಾರಿ, ಪರಿಸರ ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಕಿರಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾ. ಪಂ. ಅಧಿಕಾರಿಗಳಿಗೆ ಸೂಚಿಸಿದ್ದರು.
ಘಟಕದ ಆವರಣದ ಲ್ಲಿದ್ದ ತ್ಯಾಜ್ಯ ರಾಶಿಯನ್ನು ಗ್ರಾ.ಪಂ.ವತಿಯಿಂದ ಜೇಸಿಬಿ ಯಂತ್ರದ ಮೂಲಕ ತೆರವು ಮಾಡಲಾಯಿತು. ಘಟಕದ ಆವರಣದಲ್ಲಿ ಮಳೆ ನೀರಿನಿಂದಾಗಿ ಮಣ್ಣು ಕೊಚ್ಚಿಹೋಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚರಂಡಿ ನಿರ್ಮಾಣ ಮಾಡಲಾಯಿತು ಹಾಗೂ ಪೈಪು ಅಳವಡಿಸಲಾಯಿತು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್., ಲೆಕ್ಕ ಸಹಾಯಕ ಎ.ಮನ್ಮಥ, ಸಿಬಂದಿ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು ಉಪಸ್ಥಿತರಿದ್ದರು.