ತಿ.ನರಸೀಪುರ: ಪಟ್ಟಣದ ಜನತೆಗೆ ನಿರಂತರವಾಗಿಕುಡಿಯುವ ನೀರು ಸರಬರಾಜು ಮಾಡಲು ಪುರಾತನ ಕಪಿಲಾ ಸೇತುವೆ ಮೇಲೆ ಪೈಪ್‌ಗ್ಳನ್ನು ಅಳವಡಿಸುವ ಮೂಲಕ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಮಂಡಳಿ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ ಎಂದು ನಾಗರಿಕ ಸೇವಾ ವೇದಿಕೆ ಆರೋಪಿಸಿದೆ.
ನಾಗರಿಕ ಸೇವಾ ವೇದಿಕೆಯ ಅಧ್ಯಕ್ಷ ಎಚ್. ಆರೀಫ್ ಹಾಗೂ ಗೌರವಾಧ್ಯಕ್ಷ ಪಿ.ಪುಟ್ಟರಾಜು ನೇತೃತ್ವದಲ್ಲಿ ಸೇವಾ ವೇದಿಕೆಯ ಮುಖಂಡರು ಸೇತುವೆಮೇಲೆಪೈಪ್‌ಗ್ಳನ್ನು ಅಳವಡಿಸುತ್ತಿರುವಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ವೇದಿಕೆಯಕಾರ್ಯ ದರ್ಶಿ ಕರೋಹಟ್ಟಿ ಪ್ರಭುಸ್ವಾಮಿ, ಪಟ್ಟಣ ದ ಎಲ್ಲಾ ಬಡಾವಣೆಗೆ ನಿರಂತರವಾಗಿ ಕಾವೇರಿ ನೀರು ಸರಬರಾಜು ಮಾಡಲು 2017ರಲ್ಲಿ ಸರ್ಕಾರ 75ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಸಹ ಆರಂಭಗೊಂಡು ಒಂದು ಹಂತಕ್ಕೆ ಬಂದು ತಲುಪಿದೆ. ಕಾವೇರಿ ನದಿಯಿಂದ ಪಟ್ಟಣಕ್ಕೆ ನೀರು ಪೂರೈಸುವ ಸಲುವಾಗಿ ಎಂಜಿನಿಯರ್‌ಗಳು ಅತಿ ಉಪಯುಕ್ತವಾದ ಪುರಾತನ ಕಾಲದ ಸೇತುವೆ ಮೇಲೆ ಪೈಪ್‌ಲೈನ್ ಮಾಡಲು ಹೊರಟದ್ದಾರೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ದೂರಿದರು.
ಮೈಸೂರು ಮಹಾರಾಜರು 1934 ರಲ್ಲಿ ತಮ್ಮ ತಾಯಿವಾಣಿ ವಿಲಾಸ್ ಸಾನಿಧ್ಯಅವರನೆನಪಿಗಾಗಿ ನಿರ್ಮಿಸಿದ ಸೇತುವೆ ಇದಾಗಿದೆ.ಅಲ್ಲದೇ ಚಾಮರಾಜನಗರ, ತಮಿಳುನಾಡು, ಮಹದೇಶ್ವರಬೆಟ್ಟ, ರಾಜ್ಯ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮಹಾರಾಜರು ಕಾವೇರಿ ಮತ್ತು ಕಪಿಲಾ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು.
ಪಾರಂಪರಿಕ ಕಪಿಲಾ ಸೇತುವೆ 100 ವರ್ಷಗಳಾದರೂ ಗಟ್ಟಿ ಮುಟ್ಟಾಗಿದೆ. ಇಂತಹ ಇತಿಹಾಸವುಳ್ಳ ಈ ಸೇತುವೆ ಮೇಲೆ ಕುಡಿಯುವ ನೀರು ಸರಬರಾಜು ಮಾಡುವ ಇಲಾಖೆಯವರು ಪೈಪ್‌ಗ್ಳನ್ನು ಹಾಕುವ ಮೂಲಕ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ. ಈ ಕಾಮಗಾರಿ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆಯರನ್ನುಪ್ರಶ್ನಿಸಿದರೆನಾವುಒಪ್ಪಿಗೆ ಕೊಟ್ಟಿಲ್ಲ ಎನ್ನುತ್ತಾರೆ. ಆದರೆ, ಕಾಮಗಾರಿ ಮಾತ್ರ ಮುಂದುವರಿದಿದೆ. ಕುಡಿಯುವ ನೀರು ಕೊಡುವ ಉದ್ದೇಶ ಸರಿ ಇದೆಯಾದರೂ ಇದಕ್ಕಾಗಿ ಪ್ರತ್ಯೇಕವಾಗಿ ಪಿಲ್ಲರ್ ಹಾಕಿ ಪೈಪ್‌ಲೈನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.